ಪ್ರೆಷರ್ ಕುಕ್ಕರ್ ಇಲ್ಲದ ಅಡುಗೆ ಮನೆಯೇ ಇಲ್ಲವೆನ್ನಬಹುದು. ಬಿಡುವಿಲ್ಲದ ಜೀವನ ಶೈಲಿಗೆ ಪ್ರೆಷರ್ ಕುಕ್ಕರ್ಗಳು ಒಂದು ರೀತಿಯ ವರವಿದ್ದಂತೆ. ಪೌಷ್ಠಿಕಾಂಶದ ಮೌಲ್ಯವನ್ನು ಕಾಪಾಡುವುದರೊಂದಿಗೆ ಅಡುಗೆ ತಯಾರಿಸುವ ಸಮಯವನ್ನೂ ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕೆ ಪ್ರೆಷರ್ ಕುಕ್ಕರ್ ತನ್ನ ಸ್ಥಾನವನ್ನು ಕಾಯಂಗೊಳಿಸಿಕೊಂಡಿದೆ.

ಆಹಾರದಲ್ಲಿನ ಪ್ರಮುಖ ಜೀವಸತ್ವ ಹಾಗೂ ಖನಿಜಾಂಶಗಳನ್ನು ಹಾಗೆಯೇ ಉಳಿಸುವುದರಿಂದ ಪ್ರೆಷರ್ ಕುಕ್ಕಿಂಗ್ ಆರೋಗ್ಯಯುತ ಅಡುಗೆ ತಯಾರಿಗೆ ಪೂರಕವಾಗಿದೆ. ಅಧಿಕ ತಾಪಮಾನ ಹಾಗೂ ತೇವಾಂಶವನ್ನು ಉಳಿಸಿಕೊಳ್ಳುವುದರಿಂದ, ಪ್ರೆಷರ್ ಕುಕ್ಕಿಂಗ್ನಲ್ಲಿ ಆಹಾರ ಪದಾರ್ಥಗಳಲ್ಲಿ ಅಡಗಿರುವ ಹಾನಿಕಾರಕ ಅಣು ಜೀವಿಗಳು ಸಾಯುತ್ತವೆ. ಪ್ರೆಷರ್ ಕುಕ್ಕರ್ ಆವಿಯಾಗುವುದನ್ನು ತಡೆಯುತ್ತದೆ; ಇದು ಹಬೆಯನ್ನು ಸಾಂದ್ರೀಕರಿಸಿ ಆಹಾರವನ್ನು ಸ್ವಾದಿಷ್ಟವಾಗಿಸುತ್ತದೆ. ಉದಾಹರಣೆಗೆ, ಆಲೂಗಡ್ಡೆಯನ್ನು ಕುಕ್ಕರ್ನಲ್ಲಿ ಬೇಯಿಸಿದಾಗ ಅದರ ನೈಸರ್ಗಿಕ ಸ್ವಾದವನ್ನು ಉಳಿಸಿಕೊಂಡು ಮಣ್ಣಿನ ರುಚಿಯನ್ನು
ನೀಡುತ್ತದೆ!

ಇಂಥ ಪ್ರೆಷರ್ ಕುಕ್ಕರ್ನ ಸೂಕ್ತ ಬಳಕೆಗೆ ಟಿಪ್ಸ್ಗಳು

l ಯಾರು ಏನೇ ಹೇಳಿದರೂ ನಿಮ್ಮ ಪ್ರೆಷರ್ ಕುಕ್ಕರ್ ಅನ್ನು ಕರಿದ ತಿಂಡಿ ತಯಾರಿಸಲು ಬಳಸಬೇಡಿ! ಯಾವಾಗಲೂ ಆಹಾರ ಪದಾರ್ಥಗಳನ್ನು ಬೇಯಿಸಲು ನೀರು, ತೇವಾಂಶ ಹೆಚ್ಚಿರುವ ತರಕಾರಿ ಅಥವಾ ಮಾಂಸದ ತುಣುಕುಗಳು, ವೈನ್ ಅಥವಾ ಹಾಲನ್ನು
ಬಳಸಿ.

l ನಿಯಮಿತವಾಗಿ ಕುಕ್ಕರ್ ಗ್ಯಾಸ್ಕೆಟ್ ಅನ್ನು ಪರಿಶೀಲಿಸಿ. ಅದು ಮೃದುವಾಗಿ ಜಗ್ಗಲು ಸುಲಭವಾಗಿರುವುದನ್ನು ಖಾತರಿಪಡಿಸಿಕೊಳ್ಳಿ. ಕುಕ್ಕರ್ ಶಕ್ತಿ ಗ್ಯಾಸ್ಕೆಟ್ನಿಂದ ನಿರ್ಧಾರವಾಗುತ್ತದೆ. ಇದು ತಾಪ ಹಾಗೂ ಹಬೆಯನ್ನು ಪ್ರೆಷರ್ ಕುಕ್ಕರ್ನಲ್ಲಿ ಹಿಡಿದಿಡಲು ಸಹಕಾರಿ.

l ಪ್ರತಿ ಬಳಕೆಯ ಬಳಿಕ ಸ್ವಚ್ಛಗೊಳಿಸುವಾಗ ಗ್ಯಾಸ್ಕೆಟ್ ಅನ್ನು ತೆಗೆಯಿರಿ. ಇದು ಪ್ರೆಷರ್ ಕುಕ್ಕರ್ನ ಅತ್ಯಂತ ನಾಜೂಕಾದ ಹಾಗೂ ಪ್ರಮುಖ ಭಾಗವಾಗಿದೆ. 6 ತಿಂಗಳಿಗೊಮ್ಮೆ ರಬ್ಬರ್ ಗ್ಯಾಸ್ಕೆಟ್ಗಳನ್ನು ಬದಲಿಸಬೇಕು.

l ಪ್ರೆಷರ್ ಕುಕ್ಕರ್ಗೆ ಕಡಿಮೆ ಪ್ರಮಾಣದ ಇಂಧನದ ಅಗತ್ಯವಿರುತ್ತದೆ. ಆದ್ದರಿಂದ ಅವು ಪರಿಸರ ಸ್ನೇಹಿಯಾಗಿರುತ್ತವೆ. ಜೊತೆಗೆ ಸಮಯವನ್ನೂ ಉಳಿಸುತ್ತವೆ.

l ಖಾಲಿ ಪ್ರೆಷರ್ ಕುಕ್ಕರ್ಗಳನ್ನು ಯಾವಾಗಲೂ ಲಾಕ್ ಮಾಡಿಡಬಾರದು. ಬದಲಿಗೆ ಮುಚ್ಚುಳವನ್ನು ತಿರುಗಿಸಿ ಕುಕ್ಕರ್ ಮೇಲಿಡಬೇಕು.

l ಪ್ರೆಷರ್ ಕುಕ್ಕರ್ಗಳನ್ನು ಆಹಾರ ಶೇಖರಣೆ ಮಾಡಲು ಬಳಸಬಾರದು. ಅದನ್ನು ತಯಾರಿಸಲು ಬಳಸುವ ಲೋಹ, ಆಹಾರ ಶೇಖರಣೆಗೆ ಯೋಗ್ಯವಾದುದಲ್ಲ.

l ವಿದ್ಯುತ್ ಪ್ರೆಷರ್ ಕುಕ್ಕರ್ಗಳನ್ನು ಎಂದಿಗೂ ವಿರೂಪಗೊಳಿಸಬೇಡಿ ಹಾಗೂ ಹಬೆ ಹೊರಬರುವಾಗ ಅದರಿಂದ ದೂರವಿರಿ. ಇದು ಕುಕ್ಕರ್ನ ಬಾಳಿಕೆ ಸಮಯವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಅಪಾಯಕಾರಿ ಕೂಡಾ.

l ವಿದ್ಯುತ್ ಹಾಗೂ ಸಾಮಾನ್ಯ ಪ್ರೆಷರ್ ಕುಕ್ಕರ್ಗಳೆರಡೂ ಸಾಕಷ್ಟು ಪೌಷ್ಠಿಕಾಂಶವನ್ನು ಹಿಡಿದಿಡುತ್ತವಾದರೂ ಸಾಮಾನ್ಯ ಪ್ರೆಷರ್ ಕುಕ್ಕರ್ಗಳು ಪೌಷ್ಠಿಕಾಂಶವನ್ನು ಹಿಡಿದಿಡುವಲ್ಲಿ ಮುಂಚೂಣಿಯಲ್ಲಿದೆ ಎಂದು ನಂಬಲಾಗಿದೆ.

l ತೆರೆದ ಅಡುಗೆ ವಿಧಾನ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಾವುದೇ ಪಾತ್ರೆಗಳಿಗೆ ಪ್ರೆಷರ್ ಕುಕ್ಕರ್ಗಳು ಉತ್ತಮ ಪರ್ಯಾಯ ಎಂಬುದು ಸಾಬೀತಾಗಿದೆ.

ದಿನೇಶ್ ಗರ್ಗ್

ಲೇಖಕರು ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್ನ ಕಾರ್ಯಕಾರಿ ಉಪಾಧ್ಯಕ್ಷರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.