ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹವಾಮಾನ ಬದಲಾವಣೆ: ಕರುಳಿನ ಆರೋಗ್ಯ ಆದ್ಯತೆಯಾಗಿರಲಿ

Published : 11 ಅಕ್ಟೋಬರ್ 2024, 8:48 IST
Last Updated : 11 ಅಕ್ಟೋಬರ್ 2024, 8:48 IST
ಫಾಲೋ ಮಾಡಿ
Comments

ಕರುಳಿನ ಆರೋಗ್ಯ ಉತ್ತಮವಾಗಿದ್ದರೆ ಜೀರ್ಣಾಂಗ ವ್ಯವಸ್ಥೆ ಸಮತೋಲನದಲ್ಲಿರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ, ಮಾನಸಿಕ ಆರೋಗ್ಯ ವೃದ್ಧಿ ಸೇರಿದಂತೆ ಇಡೀ ದೇಹಕ್ಕೆ ಅಗತ್ಯವಿರುವ ಪೋಷಕಾಂಶವನ್ನು ಪಡೆಯಬಹುದು. 

ಆದರೆ ಹವಾಮಾನ ಬದಲಾವಣೆ ಕರುಳಿನ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಋತುಗಳು ಬದಲಾಗುವ ಸಮಯದಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಆದ್ಯತೆಯಾಗಿರಬೇಕು.

ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ

ಜೀರ್ಣಕ್ರಿಯೆ ಸರಿಯಾಗಿ ಆಗಬೇಕೆಂದರೆ ದ್ರವ ಪದಾರ್ಥ ಅತಿ ಅಗತ್ಯ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿ. ಜತೆಗೆ ಮೂಲಿಕೆಗಳ ಚಹಾ, ಎಳನೀರು ಸಹ ದೇಹವನ್ನು ನಿರ್ಜಲೀಕರಣದಿಂದ ತಪ್ಪಿಸಿ ಕರುಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. 

ನಾರಿನಾಂಶವಿರುವ ಆಹಾರ

ಕರುಳಿನ ಆರೋಗ್ಯ ಉತ್ತಮವಾಗಿರಲು ನಾರಿನಾಂಶವಿರುವ ಆಹಾರವನ್ನು ಸೇವಿಸಿ. ಇವು ಉತ್ತಮ ಬ್ಯಾಕ್ಟೀರಿಯಾಗಳ ಉತ್ಪಾದನೆ ಸಹಾಯ ಮಾಡಿ, ಜೀರ್ಣಕ್ರಿಯೆ ಸರಾಗವಾಗುವಂತೆ ಮಾಡುತ್ತದೆ. ಹಣ್ಣು, ತರಕಾರಿ, ಮೊಳಕೆ ಕಾಳು, ಧಾನ್ಯಗಳ ಸೇವನೆ ತಪ್ಪಿಸದಿರಿ.

ಪ್ರೊಬಯಾಟಿಕ್‌ಗಳು

ಪ್ರೊಬಯಾಟಿಕ್‌ಗಳು ಕರುಳಿನ ಸ್ವಾಸ್ತ್ಯವನ್ನು ಕಾಪಾಡುವ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸುತ್ತವೆ. ಜತೆಗೆ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ

ಉತ್ತಮ ನಿದ್ದೆ 

ಜೀರ್ಣಕ್ರಿಯೆ ಸರಿಯಾಗಿರಲು ನಿದ್ದೆ ಅತ್ಯಂತ ಮುಖ್ಯವಾದದ್ದು. ನಿದ್ದೆಯಲ್ಲಿರುವಾಗ ದೇಹ ವಿಶ್ರಾಂತ ಸ್ಥಿತಿಗೆ ತಲುಪಿ ಹೊಸ ದಿನಕ್ಕೆ ತಯಾರಾಗುತ್ತದೆ. ದಿನನಿತ್ಯ 7–9 ಗಂಟೆಗಳ ನಿದ್ದೆ ಪಚನಕ್ರಿಯೆ ಸುಧಾರಿಸಲು ನೆರವಾಗುತ್ತದೆ. 

ಒತ್ತಡ ನಿರ್ವಹಣೆ

ಮಾನಸಿಕ ಒತ್ತಡ, ಆತಂಕ, ಖಿನ್ನತೆಯಂತಹ ಪರಿಸ್ಥಿತಿಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ದೈನಂದಿನ ಜೀವನದಲ್ಲಿ ಒತ್ತಡವನ್ನು ನಿರ್ವಹಿಸುವುದನ್ನು ಕಲಿಯಿರಿ. 

ದೈಹಿಕ ಚಟುವಟಿಕೆ

ನಿತ್ಯ ಅರ್ಧಗಂಟೆಯಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗಿದರೆ ಜೀರ್ಣಕ್ರಿಯೆಗೆ  ಒಳ್ಳೆಯದು ಎನ್ನುತ್ತಾರೆ ತಜ್ಞರು. ವ್ಯಾಯಾಮ, ಯೋಗಾಸನ, ನಡಿಗೆಯಂತಹ ಸುಲಭ ಚಟುವಟಿಕೆಗಳು ಆಹಾರ ಸಂಪೂರ್ಣವಾಗಿ ಜೀರ್ಣವಾಗಲು ನೆರವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT