ದೇಹವನ್ನು ಸ್ವಾಸ್ಥ್ಯವಾಗಿಟ್ಟುಕೊಂಡು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಕಾಳಜಿ ಎಲ್ಲರಿಗೂ ಇರುತ್ತದೆ. ಆರೋಗ್ಯಯುತ ಜೀವನಶೈಲಿ ಬೇಕೆಂದರೆ, ಫಿಟ್ನೆಸ್ಗೆ ಒತ್ತು ಕೊಡಬೇಕು. ಫಿಟ್ನೆಸ್ಗಾಗಿ ಗಂಟೆಗಟ್ಟಲೇ ಜಿಮ್ನಲ್ಲಿ ಬೆವರು ಹರಿಸಬೇಕು ಎಂಬುದು ಹಲವರ ಅಭಿಪ್ರಾಯ. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಯದ ಜತೆ ಸ್ಪರ್ಧೆಗಿಳಿದು ಓಡುವುದೇ ಬಹುತೇಕರ ಜೀವನ ಶೈಲಿಯಾಗಿದೆ.

ಜಿಮ್ಗೆ ಹೋಗಬೇಕು, ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂಬ ಆಸೆ ಇದ್ದರೂ ಸಮಯದ ಅಭಾವ, ಈ ಆರೋಗ್ಯ ಕಾಳಜಿಗೆ ಲಗಾಮು ಹಾಕುತ್ತಿದೆ. ಕೆಲಸಗಳಲ್ಲಿ ಮುಳುಗಿಹೋದ ಬಹುತೇಕರು ಎದುರಿಸುವುದು ಒತ್ತಡ ಸಮಸ್ಯೆಯನ್ನು. ಇದು ಮಾನಸಿಕವಾಗಿಯಷ್ಟೇ ಅಲ್ಲದೇ, ದೈಹಿಕವಾಗಿಯೂ ಹಾನಿ ಮಾಡುತ್ತದೆ. ಇಂತಹ ಒತ್ತಡಗಳನ್ನು ದೂರ ಮಾಡಲು ಕನಿಷ್ಠ 10 ನಿಮಿಷ ವ್ಯಾಯಾಮ ಮಾಡಿದರೂ ಸಾಕು ಎನ್ನುತ್ತಿದೆ ಹೊಸ ಅಧ್ಯಯನ.

ವ್ಯಾಯಾಮದ ಅನುಕೂಲಗಳ ಬಗ್ಗೆ ಈಚೆಗೆ ನಡೆದಿರುವ ವಿಸ್ತೃತ ಅಧ್ಯಯನವೊಂದನ್ನು ಜರ್ನಲ್ಸ್ ಆಫ್ ಸೈಕಾಲಜಿ ಎಂಬ ನಿಯತಕಾಲಿಕೆ ಪ್ರಕಟಿಸಿದ್ದು, ಅದರಲ್ಲಿ ಈ ವಿಷಯ ತಿಳಿಸಲಾಗಿದೆ.

ಧಾರಾವಾಹಿ, ರಿಯಾಲಿಟಿ ಷೋ, ಸಿನಿಮಾಗಳನ್ನು ನೋಡಲು ಗಂಟೆಗಟ್ಟಲೇ ಸಮಯ ಮೀಸಲಿಡುವವರು, ಕನಿಷ್ಠ 10 ನಿಮಿಷ ವ್ಯಾಯಾಮ ಮಾಡಿದರೂ ದೇಹಕ್ಕೆ ಹಲವು ಅನುಕೂಲಗಳು.

ಗಂಟೆಗಟ್ಟಲೇ ಶ್ರಮಿಸಿದಾಗ ಸಿಗುವಂತಹ ಅನುಕೂಲಗಳನ್ನು ಕೆಲವು ವಿಶಿಷ್ಟ ವ್ಯಾಯಾಮಗಳ ಮೂಲಕವೇ ಪಡೆಯಬಹುದು. ಸೀಮಿತ ಅವಧಿಯಲ್ಲೇ ಇಂತಹ ವ್ಯಾಯಾಮಗಳನ್ನು ಮಾಡಬಹುದಾದರೂ ಸ್ವಲ್ಪ ಕಷ್ಟಪಡಬೇಕು. ಆದರೆ ಪ್ರಯೋಜನಗಳು ಹಲವು.

ತೀರಾ ಸುಲಭವಾದ ಮತ್ತು ತೀರಾ ಕಷ್ಟವಾದ ವ್ಯಾಯಾಮಗಳಿಂದ ದೇಹಕ್ಕೆ ಹೆಚ್ಚಿನ ಲಾಭಗಳು ಸಿಗುವುದಿಲ್ಲ. ಹೀಗಾಗಿ ಹಲವು ಅನುಕೂಲಗಳಿರುವ ವ್ಯಾಯಾಮಗಳನ್ನು ಮಾತ್ರ ಮಾಡಿದರೆ ಫಿಟ್ನೆಸ್ ಕಾಯ್ದುಕೊಳ್ಳಬಹುದು.

ಯಾವ ವ್ಯಾಯಾಮ ಚೆನ್ನ?
ಏರೋಬಿಕ್ಸ್: ಸಮಯವೇ ಇಲ್ಲ ಎಂದು ಕೊರಗುವವರಿಗೆ ಹೇಳಿಮಾಡಿಸಿದಂತಹ ವ್ಯಾಯಾಮ ಏರೋಬಿಕ್ಸ್. ಇದನ್ನು ಮಾಡುವುದೂ ಸುಲಭ ಹಾಗು ಹೆಚ್ಚು ಪ್ರಯೋಜನಕಾರಿ. ಏರೋಬಿಕ್ಸ್ ಮಾಡುವುದರಿಂದ ದಿನವಿಡೀ ಮನಸ್ಸು ಉಲ್ಲಾಸವಾಗಿರುತ್ತದೆ. ಇದನ್ನು ಮಾಡುವುದಕ್ಕೆ ಹೆಚ್ಚಿನ ಸಮಯವೂ ಬೇಕಿಲ್ಲ ಮನೆಯಲ್ಲೇ ಅಭ್ಯಾಸ ಮಾಡಬಹುದು. ಈ ವ್ಯಾಯಾಮದಿಂದ ಮುಖ್ಯವಾಗಿ ಮಾಂಸಖಂಡಗಳು ದೃಢವಾಗುತ್ತವೆ. ಕೊಬ್ಬು ಕರಗಿ, ಹೃದಯ ಮತ್ತು ಶ್ವಾಸಕೋಶಗಳ ಕಾರ್ಯನಿರ್ವಹಣೆ ಉತ್ತಮವಾಗುತ್ತದೆ.

ಸ್ಕ್ವಾಟ್ಸ್: ಕೈಗಳನ್ನು ತಲೆಯ ಹಿಂಬದಿ ಇಟ್ಟು, ನಿಧಾನವಾಗಿ ಆಸನದ ಮೇಲೆ ಕೂರುವ ಹಾಗೆ ಕೆಳಕ್ಕೆ ಊರಿ, 10 ಅಥವಾ 15 ಸೆಕೆಂಡ್ ಹಾಗೆಯೇ ಇದ್ದು, ನಂತರ ಮತ್ತೆ ಯಥಾಸ್ಥಿತಿಗೆ ಬರಬೇಕು. ಹೀಗೆ, ಇದನ್ನು ಪುನರಾವರ್ತನೆ ಮಾಡಬೇಕು. ಈ ರೀತಿಯ ವ್ಯಾಯಾಮವನ್ನೇ ಸ್ಕ್ವಾಟ್ಸ್ ಎನ್ನುತ್ತಾರೆ.

ದಂಡ ಹಾಕುವುದು: ಸಾಷ್ಟಾಂಗ ನಮಸ್ಕಾರ ಹಾಕುವ ಹಾಗೆ ನೆಲದ ಮೇಲೆ ಬಿದ್ದು, ಎರಡೂ ಕಾಲುಗಳನ್ನು ನೇರವಾಗಿ ಒಂದೇ ಕಡೆ ಇಟ್ಟು, ಭುಜಗಳಿಗೆ ನೇರವಾಗಿ ಅಂಗೈಗಳನ್ನು ಊರಿ ಎದೆಭಾಗವನ್ನು ನೆಲಕ್ಕೆ ತಾಕಿಸುವಂತೆ ಮಾಡಿ ಮತ್ತೆ ಕೈಗಳನ್ನು ನೇರ ಮಾಡಬೇಕು. ಇದನ್ನೇ ಪುಷಪ್ಸ್ ಎನ್ನುತ್ತಾರೆ. 10 ನಿಮಿಷ ಈ ವ್ಯಾಯಾಮ ಮಾಡಿದರೂ ಸಾಕು ದೇಹ ಫಿಟ್ ಆಗುತ್ತದೆ. ಒಂದೇ ಸಮನೆ ಮಾಡುವುದಕ್ಕಿಂತ, ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವಿರಾಮ ತೆಗೆದುಕೊಳ್ಳುತ್ತಾ ಪುಷಪ್ಸ್ ಮಾಡಬಹುದು.

ಮೌಂಟೇನ್ ಕ್ಲೈಂಬರ್: ಸಾಷ್ಟಾಂಗ ನಮಸ್ಕಾರ ಹಾಕುವಂತೆ ದೇಹವನ್ನು ನೆಲಕ್ಕೆ ಸನಿಹ ಇಟ್ಟು, ಭುಜಗಳಿಗೆ ನೇರವಾಗಿ ಕೈಗಳನ್ನು ಇಟ್ಟು ಎರಡೂ ಕಾಲುಗಳನ್ನು ಬೆಟ್ಟ ಹತ್ತುವ ಹಾಗೆ, ರಭಸವಾಗಿ ಮುಂದೆ ತಂದು, ಹಿಂದಡಿ ಇಡುತ್ತಿರಬೇಕು. ಈ ರೀತಿ 30 ಸೆಕೆಂಡ್ ಮಾಡಬೇಕು. ನಂತರ ಹೀಗೆ ಎರಡು ಮೂರು ಬಾರಿ ಪ್ರಯತ್ನಿಸಿದರೂ ಸಾಕು.

ಜಂಪಿಂಗ್: ನೇರವಾಗಿ ನಿಂತು, ಎರಡೂ ಕೈಗಳನ್ನು ದೇಹಕ್ಕೆ ತಾಕಿಸಿ ಇಟ್ಟುಕೊಂಡು, ಎಗರಿ ಎರಡೂ ಕೈಗಳನ್ನು ತಲೆಯ ಮೇಲೆ ನೇರವಾಗಿ ಸೂರ್ಯ ನಮಸ್ಕಾರ ಹಾಕುವ ಹಾಗೆ ಇಟ್ಟು ಕ್ಷಣಾರ್ಧದಲ್ಲಿ ಕೂಡಲೇ ಯಥಾಸ್ಥಿತಿಗೆ ಬರಬೇಕು. ಈ ವ್ಯಾಯಾಮವನ್ನು 45 ಸೆಕೆಂಡ್ ನಿರಂತವಾಗಿ ಮಾಡಬೇಕು.

ಇವಷ್ಟೇ ಅಲ್ಲದೇ, ಸ್ಪಿಂಟಿಗ್ (ಸಾಮಾನ್ಯವಾಗಿ 400 ಮೀ. ಓಡುವುದು) ಮತ್ತು ಭಾರ ಎತ್ತುವಂತಹ ವ್ಯಾಯಾಮಗಳನ್ನೂ ಮಾಡಬಹುದು. ಸೈಕಲ್ ತುಳಿಯುವುದು, ಜಾಗಿಂಗ್ ಕೂಡ ಪರಿಣಾಮಕಾರಿ ವ್ಯಾಯಾಮಗಳೇ.

ಜಿಮ್ನಲ್ಲಿ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ಸಿಗುವುದರಿಂದ ಜಿಮ್ಗೆ ಹೋಗುವುದಕ್ಕೆ ಫಿಟ್ನೆಸ್ ಪ್ರಿಯರು ಆಸಕ್ತಿ ತೋರುತ್ತಾರೆ. ಆದರೆ, ಸಮಯದ ಅಭಾವದಿಂದ ದೇಹದಂಡಿಸುವುದನ್ನು ಮುಂದೂಡತ್ತಲೇ ಬರುತ್ತಾರೆ. ಇಂಥವರು ಯುಟ್ಯೂಬ್ನಲ್ಲಿರುವ ಫಿಟ್ನೆಸ್ ಕುರಿತ ಹಲವು ವಿಡಿಯೊಗಳನ್ನು ನೋಡಿದರೂ ಸಾಕು, ಮನೆಯಲ್ಲೇ ಕಸರತ್ತು ಮಾಡಬಹುದು. ಇದರಿಂದ ಸಮಯ ಉಳಿತಾಯ ಆಗುವುದರಲ್ಲಿ ಸಂಶಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.