* ನನಗೆ ವಯಸ್ಸು 33 ವರ್ಷ. ನನ್ನ ಪತ್ನಿಗೆ 31 ವರ್ಷ. ಇತ್ತೀಚೆಗಷ್ಟೇ ಮದುವೆಯಾಗಿದ್ದೇವೆ. ಮೂವತ್ತು ವರ್ಷ ವಯೋಮಾನದ ನಂತರದವರಿಗೆ ಫಲವಂತಿಕೆ ಕಡಿಮೆ ಎಂದು ತುಂಬಾ ಜನ ಹೇಳುತ್ತಾರೆ ? ಈಗ ನಾವು ಮಕ್ಕಳು ಹೊಂದಲು ಸಮಸ್ಯೆಯಾಗುವುದಿಲ್ಲವೇ ?

–ಹೆಸರು, ಊರು ತಿಳಿಸಿಲ್ಲ

ನಿಮಗೆ ಮತ್ತು ನಿಮ್ಮ ಮಡದಿಗೆ ಈಗಾಗಲೇ 30 ವರ್ಷ ದಾಟಿರುವುದರಿಂದ ನೀವು ತಡಮಾಡದೇ ಆದಷ್ಟು ಬೇಗನೆ ಮಗುವನ್ನು ಪಡೆಯಲು ಪ್ರಯತ್ನಿಸಿ. ಈ ಕಾಲದಲ್ಲಿ ಮಹಿಳೆಯರು ವಿದ್ಯಾಭ್ಯಾಸ, ಉದ್ಯೋಗದತ್ತ ಹೆಚ್ಚು ಗಮನ ಹರಿಸುತ್ತಿರುವುದರಿಂದ ಮದುವೆ ಕೂಡಾ ತಡವಾಗುತ್ತಿದೆ. ತಡವಾದರೂ ಬೇಗ ಮಗು ಮಾಡಿಕೊಳ್ಳಲು ಪ್ರಯತ್ನಿಸಬೇಕು. ನಿಮ್ಮ ಮಡದಿಗೆ ನಿಯಮಿತವಾಗಿ ಫೋಲಿಕ್ ಆಸಿಡ್ 5ಮಿಲಿ.ಗ್ರಾಂ ಮಾತ್ರೆ ತೆಗೆದುಕೊಳ್ಳುತ್ತಿರಲು ತಿಳಿಸಿ (ಗರ್ಭಧಾರಣೆಗೂ ಕನಿಷ್ಠ 6 ವಾರಗಳ ಮೊದಲೇ ಅವರು ಈ ಮಾತ್ರೆಗಳನ್ನ ಸೇವಿಸುತ್ತಿರಬೇಕು). ಅವರ ದೇಹದ ತೂಕ ಹೆಚ್ಚಿದ್ದರೆ, ಕಡಿಮೆ ಮಾಡಿಕೊಳ್ಳಬೇಕು.

30 ವರ್ಷಗಳ ನಂತರ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಗಳ ಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ. ವಯಸ್ಸಾದ ಹಾಗೆ ‘ಅಂಡಾಶಯದ ಮೀಸಲು‘ (ಒವೆರಿಯನ್ ರಿಸರ್ವ) ಕಡಿಮೆಯಾಗುತ್ತದೆ. ಅಂದರೆ ಅಂಡಾಶ ಯದ ಕೋಶಿಕೆಗಳು ಬೆಳವಣಿಗೆ ಹೊಂದಿ ಅಂಡೋತ್ಪತ್ತಿಯಾಗುವ ಪ್ರಕ್ರಿಯೆ ಕಡಿಮೆಯಾಗುತ್ತಾ ಹೋಗುತ್ತದೆ. ಈ ಬಗ್ಗೆ ನಿಮಗೆ ಅರಿವಿರಬೇಕು ಹಾಗೂ ತಡವಾಗಿ ತಾಯ್ತನವಾಗುವುದರಿಂದ ಉಂಟಾಗುವ ತೊಡಕುಗಳ ಬಗ್ಗೆ ನಿಮ್ಮಿಬ್ಬರಿಗೆ ಹಾಗೂ ಕುಟುಂಬದವರು ತಿಳಿದಿರಬೇಕು.

ತಡ ತಾಯ್ತನದ ಪರಿಣಾಮ:

ತಡವಾಗಿ ತಾಯ್ತನ ಉಂಟಾಗುವುದರಿಂದ ಗರ್ಭಪಾತ, ಅಕಾಲಿಕ ಹೆರಿಗೆಗಳ ಸಂಭವ ಹೆಚ್ಚಾಗುತ್ತದೆ.
ತಡವಾಗಿ ಗರ್ಭಧರಿಸಿದಾಗ ಗರ್ಭಿಣಿಯರ ಏರು ರಕ್ತದೊತ್ತಡದ ಸಂಭವವೂ ಹೆಚ್ಚಾಗುತ್ತದೆ. ಗರ್ಭವಿಷಭಾದೆ (ಫ್ರೀಎಕ್ಲಾಂಪ್ಸಿಯಾ) ಕೂಡ ಉಂಟಾಗಬಹುದು. ಇದರಿಂದ ತಾಯಿ ಹಾಗೂ ಗರ್ಭಸ್ಥ ಶಿಶು ಇಬ್ಬರಿಗೂ ಅಪಾಯ ಉಂಟಾಗಬಹುದು. ಗರ್ಭಧರಿಸುವ ವೇಳೆ ಮಧುಮೇಹ ಉಂಟಾಗುವ (ಜೆಸ್ಟೇಷನಲ್ ಡಯಾಬಿಟಿಸ್ ಮೆಲೆಟಸ್) ಸಂಭವ ಹೆಚ್ಚು. ಗರ್ಭದಲ್ಲಿನ ಮಗುವಿನ ಬೆಳವಣಿಗೆ ಕುಂಠಿತವಾಗಿ ಮಗುವಿನ ತೂಕ ಕಡಿಮೆ ಆಗಬಹುದು (ಐ.ಯು.ಜಿ.ಆರ್). ಗರ್ಭಜಲದ ಪ್ರಮಾಣ ಕೂಡ ಕಡಿಮೆಯಾಗಿ ತೊಡಕುಗಳು ಉಂಟಾಗಬಹುದು.

'ಡೌನ್ಸಿಂಡ್ರೋಮ್' ಮತ್ತು ಆಟಿಸಂ ಮುಂತಾದ ಅಸಹಜತೆಗಳಿರುವ ಸಂದರ್ಭಗಳು ಗರ್ಭಧಾರಣೆಯಲ್ಲಿ ಹೆಚ್ಚಾಗುತ್ತವೆ. ಗರ್ಭಧಾರಣೆಯ 12 ನೇ ವಾರದಲ್ಲಿ ಈ ಬಗ್ಗೆ ಸ್ಕ್ರೀನಿಂಗ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಬಗ್ಗೆ ಕೂಡ ನಿಮಗೆ ಅರಿವಿರಬೇಕು.

ಇನ್ನೂ ಕೆಲವರಲ್ಲಿ ಗರ್ಭಾಶಯದಲ್ಲಿ ನಾರುಗಡ್ಡೆಗಳು(ಫೈಬ್ರಾಯ್ಡ) ಬೆಳೆಯುವುದರಿಂದಲೂ ಕೆಲವು ತೊಡಕುಗಳು ಉಂಟಾಗಬಹುದು. ಹೆರಿಗೆಯಲ್ಲೂ ಕೃತಕ ಹೆರಿಗೆ ನೋವನ್ನುಭರಿಸುವ ಔಷಧಗಳು ಹೆಚ್ಚು ಕೆಲಸಮಾಡದೇ ಸಿಸೇರಿಯನ್ ಶಸ್ತ್ರಚಿಕಿತ್ಸೆಯಾಗುವ ಸಂಭವಗಳು ಹೆಚ್ಚಾಗಬಹುದು.

ಸಹಜ ಹೆರಿಗೆಯಲ್ಲಿ ವ್ಯತ್ಯಾಸ

ಹೆಚ್ಚಿನ ಸಂದರ್ಭಗಳಲ್ಲಿ ಹೆರಿಗೆ ನೋವು ಆರಂಭವಾದರೂ ಗರ್ಭಕೋಶದ ಸ್ನಾಯುಗಳ ಜಡತೆಯುಂಟಾಗಿ ಮತ್ತು ಅಂತಹ ಮಹಿಳೆಯರ ಕಟಿರದ ಸ್ನಾಯುರಜ್ಜುಗಳು ಸ್ಥಿತಿಸ್ಥಾಪಕತ್ವ ಗುಣವನ್ನು ಕಳೆದುಕೊಳ್ಳಬಹುದು. ಇದರಿಂದ ಹೆರಿಗೆ ನೋವು ದೀರ್ಘಾವಧಿಯವರೆಗೆ ಉಂಟಾದರೂ ಸಹಜ ಹೆರಿಗೆಯಾಗದೇ ತಾಯಿಮಗು ಇಬ್ಬರಿಗೂ ದಣಿವು ಉಂಟಾಗಬಹುದು.

ಒಮ್ಮೆ ಸಹಜ ಹೆರಿಗೆಯಾದರೂ ಕಸ ಹೊರಗೆ ಬರದೆ ತೊಂದರೆಯಾಗುವುದು, ಪ್ರಸವಾನಂತರದ ರಕ್ತಸ್ರಾವ ಕೂಡ ಹೆಚ್ಚಾಗಬಹುದು. ಹೆರಿಗೆಯ ನಂತರ ಕೂಡ ಎದೆಹಾಲು ಸಮರ್ಪಕವಾಗಿ ಉತ್ಪಾದನೆಯಾಗದೇ ಸುರಕ್ಷಿತ ಸ್ತನ್ಯಪಾನಕ್ಕೂ ಕೂಡಾ ತೊಡಕಾಗಬಹುದು.

ಹಾಗಾಗಿ, ನೀವು ಆದಷ್ಟು ಬೇಗನೆ ಗರ್ಭಧರಿಸಲು ಪ್ರಯತ್ನಿಸಿ. ಒಮ್ಮೆ ಗರ್ಭಧರಿಸಿದರೆ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿರಿ. ನಿಯಮಿತ ತಪಾಸಣೆಗೊಳಪಡುತ್ತಿದೆ. ಜೊತೆಗೆ ಎಲ್ಲ ರೀತಿಯ ಸೌಲಭ್ಯಗಳಿರುವ ಉತ್ತಮ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಕೊಳ್ಳುವುದು ಉತ್ತಮ. ನೀವು ಆದಷ್ಟು ಬೇಗ ಗರ್ಭಧರಿಸಿ, ಆರೋಗ್ಯವಂತ ಮಗುವಿಗೆ ಜನಿಸಲಿ ಎಂದು ಆಶಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.