ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ದಿನದ 24 ಗಂಟೆಯೂ ಕನಿಷ್ಠ 28-43 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ದಾಖಲಾಗುತ್ತಿದೆ.

ಇದರ ಪರಿಣಾಮ ಬಿಸಿಗಾಳಿ ಬೀಸುತ್ತಿದ್ದು, ಬೇಸಿಗೆಯ ಝಳ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಶಾಖಾಘಾತವಾಗುವ ಸಾಧ್ಯತೆ ಇರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಶಾಖಾಘಾತದ ಲಕ್ಷಣಗಳಿವು

ಅರೆ ಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು

ತಲೆ ಸುತ್ತುವಿಕೆ, ತಲೆನೋವು,

ಸುಸ್ತು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ

ಮಕ್ಕಳಲ್ಲಿ ಆಹಾರ ಸೇವಿಸಲು ನಿರಾಕರಿಸುವುದು

ಆಲಸ್ಯ, ಗಾಬರಿಗೊಳ್ಳುವುದು, ಆತಂಕ, ಸಿಡಿಮಿಡಿಗೊಳ್ಳುವುದು

ಬಾಯಿ ಒಣಗುವಿಕೆ, ಚರ್ಮವು ಬಿಸಿಯಾಗುವುದು,

ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಪ್ರಥಮ ಚಿಕಿತ್ಸೆ

ಬಿಸಿಲಿನ ಝಳದಿಂದ ಸುಸ್ತಾಗಿ ಬಿದ್ದರೆ ಕೂಡಲೇ ತುರ್ತು ಚಿಕಿತ್ಸೆ ನೀಡಬೇಕು.

ಸುಸ್ತಾದ ವ್ಯಕ್ತಿಯನ್ನು ನೆರಳಿನಲ್ಲಿ ಕುರಿಸಿ ವ್ಯಕ್ತಿಯ ವಸ್ತ್ರ ಸಡಿಲಗೊಳಿಸಬೇಕು.

ಪುಸ್ತಕ, ಪೇಪರ್, ಮತ್ತಿತರ ವಸ್ತುಗಳಿಂದ ಗಾಳಿ ಬೀಸಬೇಕು.

ಓಆರ್ಎಸ್ ಪುಡಿಯ ನೀರು ಕುಡಿಸುವುದು

ಅಂಗಾತ ಮಲಗಿಸಿ ನೀರಿನಿಂದ ಬಟ್ಟೆಯನ್ನು ಒದ್ದೆ ಮಾಡಿಕೊಂಡು ಶರೀರವನ್ನು ಒರೆಸಬೇಕು.

ನಂತರ ವೈದ್ಯರನ್ನು ಸಂಪರ್ಕಿಸಬೇಕು ಎಂದು ಇಲಾಖೆ ಮಾಹಿತಿ ನೀಡಿದೆ.

ಮುಂಜಾಗ್ರತೆ...

ಹೆಚ್ಚು ಬಿಸಿಲಿಗೆ ಮೈ ಒಡ್ಡಬಾರದು.

ಬಿಸಿಲ ಧಗೆ ಹೆಚ್ಚಾಗಿರುವ ಸಮಯದಲ್ಲಿ ಹೊರಾಂಗಣ ಕೆಲಸಗಳನ್ನು ಮಾಡಬಾರದು

ದೇಹದ ತಾಪಮಾನವನ್ನು ಕಡಿಮೆ ಮಾಡಲು ಪ್ರತಿ ದಿನ ಕನಿಷ್ಠ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು.

ಚರ್ಮ ಹೆಚ್ಚು ಬಿಸಿಯಾಗಿದ್ದರೆ ಒದ್ದೆ ಬಟ್ಟೆಯಿಂದ ಮೈಯನ್ನು ಚೆನ್ನಾಗಿ ಒರೆಸಬೇಕು.

ಓಆರ್ಎಸ್ ಪುಡಿಯನ್ನು ಮನೆಯಲ್ಲಿ ಇರಿಸಿಕೊಳ್ಳುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.