ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಸಾಮಾನ್ಯವಾಗಿ ಕಂಡು ಬರುವ ಕ್ಯಾನ್ಸರ್ ಮತ್ತು ಮಹಿಳೆಯರಿಗೆ ಬರಬಹುದಾದ ಎಲ್ಲಾ ಕ್ಯಾನ್ಸರ್ಗಳ ಪ್ರಮಾಣದಲ್ಲಿ ಶೇ 27ರಷ್ಟಿದೆ. 28 ಮಹಿಳೆಯರಲ್ಲಿ ಒಬ್ಬ ಮಹಿಳೆಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಈ ರೋಗಿಗಳ ಸಂಖ್ಯೆ ಹೆಚ್ಚು.

ಕಾರಣಗಳೇನು?

ಸ್ತನ ಕ್ಯಾನ್ಸರ್ಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ವಂಶವಾಹಿಗಳು, ಜೀವನಶೈಲಿ, ಪರಿಸರವು ಕಾಯಿಲೆ ಬರಲು ಕಾರಣ ಎಂದು ಪಟ್ಟಿ ಮಾಡಲಾಗಿದೆ. ವಯಸ್ಸನ್ನು ಕೂಡ ಇಲ್ಲಿ ಗಣನೆಗೆ ತೆಗೆದುಕೊಳ್ಳಬಹುದು.

ಇತರ ಅಪಾಯಕಾರಿ ಅಂಶಗಳು: ಚಿಕ್ಕ ವಯಸ್ಸಿನಲ್ಲೇ ಪ್ರೌಢಾವಸ್ಥೆ, ತಡವಾದ ಮೆನೋಪಾಸ್, ಸ್ತನ ಕ್ಯಾನ್ಸರ್ ಕುಟುಂಬದಲ್ಲಿ ಯಾರಿಗಾದರೂ ಬಂದಿದ್ದರೆ, ಜನಾಂಗೀಯತೆ - ಕಪ್ಪು, ಏಷ್ಯನ್, ಚೈನೀಸ್ ಅಥವಾ ಮಿಶ್ರ-ಜನಾಂಗದ ಮಹಿಳೆಗಿಂತ ಬಿಳಿ ತ್ವಚೆಯ ಮಹಿಳೆಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಕೆಲವು ದೇಶಗಳ ಮಹಿಳೆಯರ ವಂಶವಾಹಿಗಳಲ್ಲಿ ದೋಷಗಳಿರುತ್ತವೆ. ಉದಾಹರಣೆಗೆ BRCA1 ಅಥವಾ BRCA2 ಜೀನ್ಸ್ (ವಂಶವಾಹಿ)– ಇದು ಸ್ತನ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಮತ್ತು ಪರಿಸರ: ತೂಕ ಹೆಚ್ಚಾಗುವುದು, ವ್ಯಾಯಾಮದ ಕೊರತೆ, ಮದ್ಯ ಸೇವನೆ, ಹಾರ್ಮೋನ್ ಬದಲಿ ಚಿಕಿತ್ಸೆ, ಕೆಲವು ಗರ್ಭನಿರೋಧಕ ಮಾತ್ರೆ, ವಿಕಿರಣ, ರೇಡಿಯೊಥೆರಪಿ, ಮಾನಸಿಕ ಒತ್ತಡ.

ಗರ್ಭಧಾರಣೆ ಮತ್ತು ಸ್ತನ್ಯಪಾನವು ಈ ಬಗೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಗರ್ಭಧಾರಣೆಯ ವಯಸ್ಸು
ಕೂಡ ಪರಿಣಾಮ ಬೀರಬಹುದು. ಮಗುವಿಗೆ ಹೆಚ್ಚು ಕಾಲ ಸ್ತನ್ಯಪಾನ ಮಾಡಿದರೆ ಸ್ತನ ಕ್ಯಾನ್ಸರ್ ಅಪಾಯವು ಕಡಿಮೆಯಾಗುತ್ತದೆ.

ಸ್ತನ ಕ್ಯಾನ್ಸರ್ ಅನ್ನು ಮೊದಲೇ, ಅಂದರೆ ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಮುಖ್ಯ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಸ್ತನ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಿದರೆ ಮತ್ತು ಸ್ಥಳೀಯ ಹಂತದಲ್ಲಿದ್ದರೆ ಐದು ವರ್ಷಗಳ ಕಾಲ ಬದುಕುಳಿಯುವ ಪ್ರಮಾಣವು ಶೇ 99.

ಅಪಾಯ ಕಡಿಮೆ ಮಾಡಲು ಏನು ಮಾಡಬಹುದು?

ಹೆಚ್ಚಿನ ಅಪಾಯಕಾರಿ ಅಂಶಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು. ತೂಕ ಕಡಿಮೆ ಮಾಡಿಕೊಳ್ಳುವುದು, ಮದ್ಯಪಾನ, ಧೂಮಪಾನ ತ್ಯಜಿಸುವುದು ಮುಖ್ಯ.

ತಿಂಗಳಿಗೊಮ್ಮೆ ಸ್ತನಗಳನ್ನು ಸ್ವಯಂ ಪರೀಕ್ಷಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಬಹುದು. ಯಾವುದೇ ಬದಲಾವಣೆಯನ್ನು ಗಮನಿಸಲು ಇದು ಸಹಕಾರಿ. ಬೇಗ ಬದಲಾವಣೆಯನ್ನು ಗಮನಿಸಿ ವೈದ್ಯಕೀಯ ಸಲಹೆಯನ್ನು ಪಡೆಯುವುದು ಉತ್ತಮ. ಏಕೆಂದರೆ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಕಂಡುಬಂದರೆ, ಚಿಕಿತ್ಸೆಯು ಯಶಸ್ವಿಯಾಗುವ ಸಾಧ್ಯತೆಯಿದೆ. ವೈದ್ಯರಿಂದ ನಿಯಮಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದ ಮತ್ತು ಮ್ಯಾಮೊಗ್ರಾಮ್ ಮಾಡುವುದರಿಂದ ಕ್ಯಾನ್ಸರ್ ಅನ್ನು ಮೊದಲೇ ಕಂಡುಹಿಡಿಯಲು ಸಾಧ್ಯ.

ಲಕ್ಷಣಗಳು

ವೃತ್ತಿಪರ ತಪಾಸಣೆ ಇಲ್ಲದೆ ಸ್ತನ ಕ್ಯಾನ್ಸರ್ನ ಕೆಲವು ಲಕ್ಷಣಗಳನ್ನು ಮೊದಲೇ ಗುರುತಿಸಬಹುದು.

l ಸ್ತನ ಅಥವಾ ತೊಟ್ಟುಗಳಲ್ಲಿ ಬದಲಾವಣೆ.

l ಸ್ತನದ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ.

l ಸ್ತನ, ತೊಟ್ಟಿನ ಸುತ್ತಲಿನ ಭಾಗ ಅಥವಾ ಮೊಲೆ ತೊಟ್ಟುಗಳ ಚರ್ಮದ ಬಣ್ಣದಲ್ಲಿ ಬದಲಾವಣೆ.

l ತಲೆಕೆಳಗಾದ ಅಥವಾ ಒಳಕ್ಕೆ ತಿರುಗಿರಬಹುದಾದ ಮೊಲೆ ತೊಟ್ಟು.

l ಮೊಲೆತೊಟ್ಟುಗಳಿಂದ ವಿಸರ್ಜನೆ - ರಕ್ತಸಿಕ್ತವಿರಬಹುದು.

l ಮೊಲೆತೊಟ್ಟುಗಳ ಮೃದುತ್ವದಲ್ಲಿ ಬದಲಾವಣೆ. ಸ್ತನ ಅಥವಾ ಕಂಕುಳಿನ ಪ್ರದೇಶದಲ್ಲಿ ಗಂಟು ಕಾಣಿಸಿಕೊಳ್ಳಬಹುದು.

l ಸ್ತನದ ಚರ್ಮದ ಹೊರ ನೋಟದಲ್ಲಿ ಬದಲಾವಣೆ ಅಥವಾ ಅಲ್ಲಿಯ ಚರ್ಮದಲ್ಲಿರುವ ರಂಧ್ರಗಳ ಹಿಗ್ಗುವಿಕೆ.

l ಸ್ತನದಲ್ಲಿ ಗಡ್ಡೆಯಾಗಬಹುದು. (ಎಲ್ಲಾ ಗಂಟು ಅಥವಾ ಗಡ್ಡೆಗಳನ್ನು ಆರೋಗ್ಯ ವೃತ್ತಿಪರರು ತಪಾಸಣೆ ಮಾಡಬೇಕಾಗುತ್ತದೆ. ಏಕೆಂದರೆ ಎಲ್ಲಾ ಗಡ್ಡೆಗಳೂ ಕ್ಯಾನ್ಸರ್ ಅಲ್ಲ).

(ಲೇಖಕಿ: ನಿರ್ದೇಶಕಿ, ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯೆ, ಫೋರ್ಟಿಸ್ ಲಾ ಫೆಮ್ಮೆ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.