ಯೋಗ ಮ್ಯಾಟ್ ಅನ್ನು ಗೋಡೆಯ ಸಮೀಪ ಹಾಕಿಕೊಳ್ಳಿ. ಗೋಡೆಯ ಪಕ್ಕ ನೇರವಾಗಿ ಮಲಗಿ. ದೇಹಕ್ಕೂ ಗೋಡೆಗೂ ಯಾವುದೇ ಅಂತರ ಇರಬಾರದು. ಆರಾಮಾಗಿ ಉಸಿರಾಡುತ್ತ ಕಾಲುಗಳನ್ನು ಒಂದೊಂದಾಗಿ ಗೋಡೆಯ ಮೇಲೆ ಸರಿಸಿ. ಏಕಕಾಲದಲ್ಲಿ ದೇಹವನ್ನು ಸರಿಸಿ, ‘ಎಲ್’ ಆಕಾರಕ್ಕೆ ತನ್ನಿ. ಕೈಗಳನ್ನು ಪಕ್ಕದಲ್ಲಿ ಚಾಚಿ. ಹಸ್ತಗಳು ಮೇಲ್ಮುಖವಾಗಿರಲಿ. ದೀರ್ಘವಾಗಿ ಉಸಿರಾಡುತ್ತ ಹೊಟ್ಟೆಯ ಭಾಗವನ್ನು ಗಮನಿಸಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುವುದಲ್ಲದೇ ಮಾನಸಿಕ ದೃಢತೆಯನ್ನು ಪಡೆಯಬಹುದು.
ಪರಿಹಾರ ಏನು ?
ಸರಿಯಾದ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡುವುದರಿಂದ ಬಾಣಂತಿಯರನ್ನು ಕಾಡುವ ಈ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹೆರಿಗೆಯ ನಂತರ ಮಾಡುವ ಯೋಗಾಭ್ಯಾಸವನ್ನು ಪೋಸ್ಟ್‌ಪಾರ್ಟಮ್ ಯೋಗಾಭ್ಯಾಸ ಎನ್ನಲಾಗುತ್ತದೆ. ಹೆರಿಗೆಯಾದ ಆರರಿಂದ 8 ವಾರಗಳ ನಂತರ ಪ್ರಾರಂಭಿಸಬಹುದು.