ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆಗಳಿದೆ
Published 20 ಜುಲೈ 2024, 21:38 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸದ ಸ್ಥಳದಲ್ಲಿ ವಾದ–ವಿವಾದಕ್ಕಿಳಿದರೆ, ನಿಮ್ಮ ಕಾರ್ಯ ಸಾಧನೆಗೆ ಅಡ್ಡಿಯಾಗುವುದು. ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿ ಹೊರುವ ಸಂದರ್ಭ ಬಂದಲ್ಲಿ, ಹಿಂದೆ ಸರಿಯುವುದು ಉತ್ತಮ.
ವೃಷಭ
ಆಸ್ತಿ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆಗಳಿದೆ, ಎಚ್ಚರವಹಿಸಿ. ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅವಕಾಶಗಳು ಸಿಗಲಿವೆ. ಹಿರಿಯರ ಆಶೀರ್ವಾದದಿಂದ ಕಾರ್ಯಗಳಲ್ಲಿ ಜಯ ಸಿಗಲಿದೆ.
ಮಿಥುನ
ಕೀಳರಿಮೆ, ಹಿಂಜರಿಕೆ ಸ್ವಭಾವ ಅಥವಾ ಅಹಂಕಾರದ ನಡವಳಿಕೆ ಬಿಟ್ಟು ಕಾರ್ಯೋನ್ಮುಖವಾದಲ್ಲಿ ಗೆಲುವು ನಿಮ್ಮದಾಗುತ್ತದೆ. ಭೋಗದ ವಸ್ತು ಖರೀದಿಯ ಅವಕಾಶ ನಿಮ್ಮದಾಗಲಿದೆ.
ಕರ್ಕಾಟಕ
ಎಲ್ಲ ಕೆಲಸಗಳಲ್ಲಿಯೂ ಯಶಸ್ಸು ಮತ್ತು ಲಾಭದಿಂದಾಗಿ ಮನಸ್ಸಿಗೆ ಸಂತೋಷವಾಗಲಿದೆ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ತೋರಿದಷ್ಟೂ ಸುಖ-ಶಾಂತಿ ಹೆಚ್ಚಲಿದೆ. ಕ್ರೀಡೆಯಲ್ಲಿ ಹೆಸರು ಮಾಡುವ ಅವಕಾಶವಿದೆ.
ಸಿಂಹ
ಆಸ್ತಿ ಕೊಳ್ಳುವುದರಲ್ಲಾಗಲೀ, ಮನೆ ಕಟ್ಟುವ ವಿಚಾರದಲ್ಲಾಗಲೀ ಅದೃಷ್ಟ ನಿಮ್ಮ ಪಾಲಿಗಿದೆ. ವಿದೇಶಿ ವಸ್ತುಗಳ ಖರೀದಿಗಾಗಿ ಅಧಿಕ ಧನ ವ್ಯಯ ಮಾಡುವಿರಿ. ಹಣದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ.
ಕನ್ಯಾ
ಅಡುಗೆ ಮಾಡುವ ವಿಚಾರವಾಗಿ ಗೃಹಿಣಿಯರಿಗೆ ಪ್ರಶಂಸೆ ಸಿಗಲಿದೆ. ಮನೆಯಲ್ಲಿ ಪ್ರತಿನಿತ್ಯ ದುರ್ಗಾ ಸ್ತೋತ್ರ ಪಠಿಸಿದರೆ ಯಶಸ್ಸು ನಿಶ್ಚಿತವಾಗಿ ನಿಮ್ಮದಾಗುವುದು.
ತುಲಾ
ಶಿಕ್ಷಕರಿಗೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಅವಕಾಶವಿದೆ. ಶತ್ರುಗಳ ಬಾಧೆ ದೂರಾಗಿ ನಿಮ್ಮ ಇತರ ಯೋಜನೆಗಳು ಈಡೇರಲಿದೆ. ರಾಜಕೀಯ ವಿದ್ಯಮಾನಗಳಿಂದಾಗಿ ಓಡಾಟ ಅಧಿಕಗೊಳ್ಳುವುದು.
ವೃಶ್ಚಿಕ
ಏಜೆನ್ಸಿಯಂತಹ ಉದ್ಯೋಗ ಆರಂಭಿಸಲು ಸೂಕ್ತ ಸ್ಥಳದ ಹುಡುಕಾಟ ಆರಂಭಿಸುವಿರಿ. ಶಿಲ್ಪಿಗಳಿಗೆ, ಸಮುದ್ರೋತ್ಪನ್ನಗಳ ಮಾರಾಟಗಾರರಿಗೆ ಲಾಭವಾಗಲಿದೆ. ಚಿನ್ನಾಭರಣ ಮಾರಾಟಗಾರರಿಗೆ ಆದಾಯ ಹೆಚ್ಚಲಿದೆ.
ಧನು
ಆಸ್ತಿ ವಿಷಯಗಳನ್ನು ತ್ವರಿತವಾಗಿ ಬಗೆ ಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಉಪಹಾರ ಗೃಹಗಳಿಂದ ಲಾಭ ಪಡೆಯುವಿರಿ. ಗೆಳೆಯರೊಂದಿಗೆ ಪ್ರವಾಸ ಹೋಗಲು ದಿನ ನಿಶ್ಚಿತವಾಗುವುದು.
ಮಕರ
ಧಾರ್ಮಿಕವಾಗಿ ಏಕಾಗ್ರತೆ ಹಾಗೂ ಧ್ಯಾನಗಳಿಂದ ಮಾನಸಿಕವಾಗಿ ಸದೃಢರಾಗುವಿರಿ. ನಿಮ್ಮಲ್ಲಿರುವ ಪ್ರತಿಭೆಯನ್ನು ಇತರರು ಗಮನಿಸುವರು. ಸ್ನೇಹಿತರು ನಿಮ್ಮ ಯೋಜನೆಗಳನ್ನು ಬೆಂಬಲಿಸಲಿದ್ದಾರೆ.
ಕುಂಭ
ಗಣ್ಯ ವ್ಯಕ್ತಿಗಳ ಸಹಾಯದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗಲಿವೆ. ಇನ್ನೊಬ್ಬರಿಗೆ ಗೌರವ ಕೊಟ್ಟು, ನೀವು ಗೌರವ ಸಂಪಾದಿಸಿಕೊಳ್ಳುವುದನ್ನು ರೂಢಿಸಿಕೊಳ್ಳಿ. ರಕ್ತದೊತ್ತಡ ನಿಯಂತ್ರಣಕ್ಕೆ ಬರಲಿದೆ.
ಮೀನ
ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾಲುದಾರರೊಂದಿಗೆ ತುರ್ತಾಗಿ ಚರ್ಚಿಸಬೇಕಾದ ಅಗತ್ಯವಿದೆ. ಅವಿವಾಹಿತರು ಅಸ್ಪಷ್ಟ ನಿಲುವಿಂದ ಹೊಬಂದಲ್ಲಿ ಕಂಕಣಬಲದ ಸಾಧ್ಯತೆ ಇದೆ.
ADVERTISEMENT
ADVERTISEMENT