ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವ್ಯವಹಾರದ ಗೌಪ್ಯತೆ ಕಾಪಾಡಿಕೊಳ್ಳಿ
Published 23 ಅಕ್ಟೋಬರ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉದಾರ ಮನೋಭಾವದಿಂದ ಸಾಕಷ್ಟು ಅನುಕೂಲ ಆಗುತ್ತದೆ. ಧ್ಯಾನ ಮಾಡುವ ಮೂಲಕ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡಿ. ಹಣಕಾಸಿನ ಬಗ್ಗೆ ಚಿಂತಿಸಬೇಕಾಗಿಲ್ಲ.
ವೃಷಭ
ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ. ಗೃಹ ಬಳಕೆಯ, ಆಲಂಕಾರಿಕ ಸಾಮಗ್ರಿಗಳ ಖರೀದಿ ಮಾಡುವಿರಿ. ಕರ್ತವ್ಯನಿಷ್ಠೆಯಿಂದ ಕಾರ್ಯಸಾಧನೆಗೆ ಅನುಕೂಲವಾಗುವುದು.
ಮಿಥುನ
ಉನ್ನತ ಅಧಿಕಾರಿಗಳ ಸಂಪರ್ಕದಿಂದ ಕೆಲಸಗಳಿಗೆ ಹೆಚ್ಚಿನ ಪುಷ್ಟಿ ದೊರೆಯಲಿದೆ. ವೈಯಕ್ತಿಕ ವಿಚಾರಗಳಿಗೆ ಪ್ರಭಾವಿ ವ್ಯಕ್ತಿಗಳ ಭೇಟಿ ಮಾಡುವ ಸಂದರ್ಭ ಬರಲಿದೆ. ಸಹೋದರರಲ್ಲಿ ಅಸಮಾಧಾನ ಎದುರಾಗಬಹುದು.
ಕರ್ಕಾಟಕ
ಕುಟುಂಬಕ್ಕೆ ಸಂಬಂಧಿಸಿದಂತೆ ಶುಭ ವಾರ್ತೆ ಕೇಳಲಿದ್ದೀರಿ. ಗೃಹನಿರ್ಮಾಣ ಕಾರ್ಯವನ್ನು ಅಡೆತಡೆಯಿಲ್ಲದೆ ಸಂಪೂರ್ಣಗೊಳಿಸುವಿರಿ. ಗುರಿ ತಲುಪಲು ಆಂಜನೇಯನನ್ನು ಆರಾಧಿಸಿ.
ಸಿಂಹ
ಬಹಳ ದಿನಗಳಿಂದ ಸ್ಥಗಿತಗೊಂಡ ಕಾರ್ಯಕ್ಕೆ ಪುನಃ ಚಾಲನೆ ದೊರೆತು ಸಂತಸ ಹೊಂದುವಿರಿ. ದೇವತಾನುಗ್ರಹದಿಂದ ಮಹಿಳೆಯರಿಗೆ ಉದ್ಯೋಗದಲ್ಲಿ ಅದೃಷ್ಟ ಹುಡುಕಿಕೊಂಡು ಬರಲಿದೆ. ವ್ಯವಹಾರದ ಗೌಪ್ಯತೆ ಕಾಪಾಡಿಕೊಳ್ಳಿ.
ಕನ್ಯಾ
ಕೆಲವೊಂದು ಸಮಸ್ಯೆಯು ಇತರರಲ್ಲಿ ಹೇಳಿಕೊಳ್ಳಲೂ ಆಗದೆ, ಬಿಡಲೂ ಆಗದೆ ತೊಳಲಾಡುವ ಪರಿಸ್ಥಿತಿ ಬರುವುದು. ಮಗಳ ತಾಂತ್ರಿಕ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ಸಂತೋಷವನ್ನು ನೀಡುವುದು.
ತುಲಾ
ಅಂತರ್ಜಾಲ ಕುರಿತಾಗಿ ಕೆಲಸವನ್ನು ಮಾಡುವವರಿಗೆ ಪದೇ ಪದೇ ತಪ್ಪುಗಳು ಸಂಭವಿಸಬಹುದು. ಮರೆವಿನ ಸಮಸ್ಯೆಯಿಂದ ಅವಘಢಗಳನ್ನು ಎದುರಿಸುವಿರಿ. ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಯ್ದುಕೊಳ್ಳಿರಿ.
ವೃಶ್ಚಿಕ
ಕಂದಾಯ ಅಧಿಕಾರಿಗಳಿಗೆ ಕೆಲಸದ ಹೊಣೆ ಹೆಚ್ಚುವುದು. ಹೂವು-ಹಣ್ಣಿನ ವ್ಯಾಪಾರ ಮತ್ತು ಜವಳಿ ವ್ಯಾಪಾರಗಳು ಸರಾಗವಾಗಿ ನಡೆಯಲಿವೆ. ಶತ್ರುಗಳ ವಿರುದ್ಧ ಧೈರ್ಯವಾಗಿ ಹೋರಾಡುವ ಪ್ರಯತ್ನವಿರಲಿ.
ಧನು
ವಾಹನದ ಅಥವಾ ಎಲೆಕ್ಟ್ರಿಕಲ್‌ ವಸ್ತುಗಳ ರಿಪೇರಿಯು ಹಣವ್ಯಯಕ್ಕೆ ಕಾರಣವಾಗುತ್ತದೆ. ವಾಹನ ಬಿಡಿಭಾಗಗಳ ಮಾರಾಟಗಾರರಿಗೆ ಲಾಭ. ಲೇವಾದೇವಿ ವ್ಯವಹಾರಗಳನ್ನು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿ.
ಮಕರ
ಭರವಸೆಯ ಮಾತುಗಳು ಸಹೋದ್ಯೋಗಿಯೊಬ್ಬರಿಗೆ ಆತ್ಮ ಸ್ಥೈರ್ಯ ತಂದುಕೊಡುವುದು. ರಾಜಕೀಯ ರಂಗದಲ್ಲಿ ಜನಪ್ರಿಯತೆ ಪಡೆಯುವಿರಿ. ಕುಲದೇವತೆಯ ಪ್ರಾರ್ಥನೆಯಿಂದ ಆರೋಗ್ಯ ಉತ್ತಮವಾಗುವುದು.
ಕುಂಭ
ಅವಕಾಶಗಳು ನಿಮ್ಮನ್ನರಸಿ ಬರಲಿವೆ. ವಿವೇಚನೆಯಿಂದ ಉಪಯೋಗಿಸಿಕೊಂಡಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಹಣ ಹೂಡಿಕೆಯ ವಿಷಯದಲ್ಲಿ ಅನಿಸಿಕೆಯಂತೆ ನಡೆಯುವುದು ಉತ್ತಮ. ಯಶಸ್ಸು ನಿಶ್ಚಿತವಾಗಿರುತ್ತದೆ.
ಮೀನ
ಅರ್ಧಕ್ಕೆ ನಿಂತಿದ್ದ ಗೃಹ ನಿರ್ಮಾಣ ಕೆಲಸಗಳು ಮುಂದುವರಿ ಯುವುದು. ದಂತ ವೈದ್ಯರಿಗೆ ಒಳ್ಳೆಯ ದಿನ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಯತ್ನಬಲವನ್ನು ಹೆಚ್ಚಿಸಿದರೆ ಉದ್ಯೋಗ ಪ್ರಾಪ್ತಿಗೆ ಅನುಕೂಲ.
ADVERTISEMENT
ADVERTISEMENT