ಬುಧವಾರ, 13 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರು ಆರೋಗ್ಯದ ಬಗ್ಗೆ ಆಲಸ್ಯ ಮಾಡುವುದು ಸರಿಯಲ್ಲ
Published 12 ನವೆಂಬರ್ 2024, 0:20 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಿತ್ರರಲ್ಲಿ ಸ್ನೇಹವೂ ಬಂಧುಗಳಲ್ಲಿ ಸಂಬಂಧವೂ ಉಳಿಸಿಕೊಂಡು ಹೋಗುವುದು ಇಹಕ್ಕೂ ಪರಕ್ಕೂ ಒಳಿತು ಉಂಟುಮಾಡುತ್ತದೆ. ಭವಿಷ್ಯದ ಭದ್ರತೆ ಕುರಿತು ಕಾಳಜಿ ಸಂತೃಪ್ತಿ ತಂದು ಕೊಡುವುದು.
ವೃಷಭ
ಕೋರ್ಟ್ ವ್ಯವಹಾರಗಳು ಬಗೆಹರಿಯಬಹುದೆಂಬ ಆಲೋಚನೆಗೆ ಇತರರ ದುರ್ಬುದ್ಧಿಯಿಂದ ಭಂಗ. ಕುಟುಂಬದ ಸದಸ್ಯರ ಜತೆ ಅಧಿಕ ಸಮಯ ಕಳೆಯುವಂತಾಗುವುದು.
ಮಿಥುನ
ಹೋಟೆಲ್ ಉದ್ಯಮದವರಿಗೆ ಮತ್ತು ಟ್ರಾವೆಲಿಂಗ್ ಏಜೆಂಟರಿಗೆ ಲಾಭದ ನಿರೀಕ್ಷೆಯಲ್ಲಿ ಅಲ್ಪಮಟ್ಟದ ವ್ಯತ್ಯಾಸಗಳಾಗುವುದು. ವೆಂಕಟೇಶ್ವರನ ಆರಾಧನೆಯಿಂದ ಕಾರ್ಯಗಳಲ್ಲಿ ಯಶಸ್ಸು ಪಡೆದುಕೊಳ್ಳುವಿರಿ.
ಕರ್ಕಾಟಕ
ಬಹುಜನರಲ್ಲಿ ಮಾಡಿದ ಸಾಲಗಳು ತೀರಿದ್ದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ. ಶಾರೀರಿಕವಾಗಿ ಆರೋಗ್ಯದ ಬಗ್ಗೆ ಆಲಸ್ಯ ಮಾಡುವುದು ಸರಿಯಲ್ಲ. ದೇಹದಲ್ಲಿ ಪಿತ್ತ ಅಧಿಕವಾಗಬಹುದು.
ಸಿಂಹ
ಆರ್ಥಿಕವಾಗಿ ಉತ್ತಮ ಪ್ರಗತಿ ಇದ್ದರೂ ಧನವ್ಯಯದಲ್ಲಿ ಆಗುತ್ತಿರುವ ಅನವಶ್ಯಕ ಖರ್ಚುಗಳನ್ನು ತಡೆಗಟ್ಟುವ ಪ್ರಯತ್ನ ಮಾಡುವುದರಿಂದ ಲಾಭ ಗಳಿಸಬಹುದು. ಶೀತ ರೋಗ ಬಾಧೆ ಇರಬಹುದು.
ಕನ್ಯಾ
ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಅಥವಾ ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ಲಭಿಸಲಿದೆ. ಸಂತಾನ ಅಪೇಕ್ಷಿಗಳಿಗೆ ಸಂತಸದ ವಾತಾವರಣ ಅನುಗ್ರಹವಾಗಲಿದೆ. ನೆರೆಯವರ ಸಹಕಾರ ದೊರಕಲಿದೆ.
ತುಲಾ
ಆಹಾರದ ಪದ್ಧತಿಯನ್ನು ನಿಯಂತ್ರಿಸಿಕೊಂಡು ರಕ್ತದೊತ್ತಡ ಸ್ಥಿತಿಯನ್ನು ಸಮತೋಲನಕ್ಕೆ ಬರುವಂತೆ ಮಾಡಿಕೊಳ್ಳಿ. ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಇದು ಸೂಕ್ತ ಕಾಲ. ಬಿಳಿ ಬಣ್ಣವು ಅದೃಷ್ಟವನ್ನು ತರುವುದು.
ವೃಶ್ಚಿಕ
ವೈದ್ಯರಿಗೆ ಬಿಡುವಿಲ್ಲದ ಅಭ್ಯಾಸದ ಜತೆಗೆ ಉನ್ನತ ಜವಾಬ್ದಾರಿ ಸಿಗಲಿದೆ. ಹಂತ ಹಂತವಾಗಿ ದುಃಖಗಳ ತೀವ್ರತೆಯು ಕಡಿಮೆಯಾಗಲಿದೆ. ಧರ್ಮ ಕಾರ್ಯಗಳಿಗಾಗಿ ಧನ ವಿನಿಯೋಗವಾಗುತ್ತದೆ.
ಧನು
ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ರೀತಿಯನ್ನು ತಿಳಿದುಕೊಳ್ಳಿರಿ. ತೂಕದ ವ್ಯಕ್ತಿಯಾಗಿರುವ ನಿಮಗೆ ಅನುಯಾಯಿಗಳು ವೃದ್ಧಿಯಾಗುವರು. ಈಶ್ವರ ಆರಾಧನೆ ಶುಭ ಉಂಟುಮಾಡುತ್ತದೆ.
ಮಕರ
ಜೀವನದಲ್ಲಿ ಮಹತ್ತರ ಬದಲಾವಣೆಯಾಗುವ ಸೂಚನೆಗಳು ಗಮನಕ್ಕೆ ಬರಲಿವೆ. ಬಹಳ ದಿನಗಳ ನಂತರದಲ್ಲಿ ವ್ಯವಹಾರಗಳು ತೃಪ್ತಿಕರವಾಗಿರಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.
ಕುಂಭ
ವ್ಯಾಪಾರದ ಅಭಿವೃದ್ಧಿಗೆ ಆರ್ಥಿಕ ಬಲದ ಜತೆಯಲ್ಲಿ ಕೆಲವು ವ್ಯಾಪಾ ರದ ಉಪಾಯಗಳನ್ನು ಬಳಸುವುದು ಒಳ್ಳೆಯದು. ವಾದಗಳು ಕಾರ್ಯಕ್ಕೆ ಅಡ್ಡಿ ಮಾಡದಂತೆ ಗಮನಹರಿಸಿ. ಒಳಿತಿಗಾಗಿ ಸುಬ್ರಹ್ಮಣ್ಯನನ್ನು ಆರಾಧಿಸಿ.
ಮೀನ
ಮಕ್ಕಳೊಂದಿಗೆ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭೇಟಿ ಕೊಡುವಂತಾಗಬಹುದು. ಆಧ್ಯಾತ್ಮಿಕ ಚಿಂತನೆಯು ಜೀವನ ಧೈರ್ಯವನ್ನು ವೃದ್ಧಿಸುತ್ತದೆ. ಬದುಕನ್ನು ಅರ್ಥಪೂರ್ಣವಾಗಿ ನಡೆಸಬಹುದು.
ADVERTISEMENT
ADVERTISEMENT