ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಬೆಳ್ಳಿ-ಬಂಗಾರದ ಮಾರಾಟಗಾರರಿಗೆ ಬಿಡುವಿಲ್ಲದಂಥ ವ್ಯಾಪಾರ ಆಗುವುದು
Published 4 ನವೆಂಬರ್ 2024, 0:15 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂದಿನ ಜೀವನದಲ್ಲಿ ಅದೃಷ್ಟದ ಲಾಭವನ್ನು ವ್ಯರ್ಥವಾಗದಂತೆ ಪಡೆದುಕೊಳ್ಳಲು ಪರಿಪೂರ್ಣ ಪ್ರಯತ್ನ ಹಾಕುವುದು ಅಗತ್ಯ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ.
ವೃಷಭ
ಉದ್ಯೋಗದಲ್ಲಿರುವ ಒತ್ತಡವನ್ನು ಬಗೆಹರಿಸಿಕೊಳ್ಳಲು ಹೋಗಿ ಪುನಃ ದೊಡ್ಡ ಸಮಸ್ಯೆಗೆ ಸಿಲುಕಿದಂತಾಗಬಹುದು. ವ್ಯವಹಾರದಲ್ಲಿ ಸಮಂಜಸ ನಿರ್ಧಾರ ಕೈಗೊಳ್ಳುವುದರ ಬಗ್ಗೆ ಗಮನಕೊಡಿ.
ಮಿಥುನ
ಕುಟುಂಬದಲ್ಲಿದ್ದಂಥ ವೈಮನಸ್ಸು, ಭಿನ್ನಾಭಿಪ್ರಾಯಗಳು ನಿರಾತಂಕವಾಗಿ ದೂರಾಗಲಿವೆ. ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಿಗಳಿಗೆ ಲಾಭ ಸಿಗಬಹುದು. ಮಕ್ಕಳೊಡನೆ ಸಮಯ ಕಳೆಯುವಿರಿ.
ಕರ್ಕಾಟಕ
ಅಧಿಕಾರಿ ವರ್ಗದವರಲ್ಲಿ ಸಹನಶೀಲರಾಗಿ ವರ್ತಿಸಿದಲ್ಲಿ ಸರ್ಕಾರಿ ಕೆಲಸಗಳ ಪ್ರಯತ್ನ ಈಡೇರಲಿದೆ. ತಂತ್ರಜ್ಞಾನಿಗಳಿಗೆ ಉದ್ಯೋಗದಲ್ಲಿ ಬಗೆಹರಿಸಲಾಗದ ಸಮಸ್ಯೆ ಎದುರಾಗಬಹುದು. ಹಿತಶತ್ರುಗಳ ಬಗ್ಗೆ ಜಾಗ್ರತೆ ಇರಲಿ.
ಸಿಂಹ
ಪತ್ರಿಕೋದ್ಯಮಿಗಳಿಗೆ ಬಿಡುವಿಲ್ಲದ ಕೆಲಸಗಳು ಮತ್ತು ವಿಮರ್ಶಿಸಲು ಕಷ್ಟವಾಗುವಂಥ ಪರಿಸ್ಥಿತಿಗಳು ಎದುರಾಗುತ್ತವೆ. ಚಾಣಾಕ್ಷತನದ ನಿರ್ಧಾರಗಳು ಊರಿನ ತೂಕದ ವ್ಯಕ್ತಿಯನ್ನಾಗಿ ಮಾಡಲಿದೆ.
ಕನ್ಯಾ
ಉದ್ಯೋಗ ದೊರೆಯುವ ಸುಳಿವಿನ ಕಾರಣದಿಂದ ಜೀವನದಲ್ಲಿನ ಸಮಸ್ಯೆಗಳು ಹಂತ ಹಂತವಾಗಿ ದೂರಾಗಲಿವೆ. ರಾಜಕಾರಣದಲ್ಲಿ ಮೇಲುಗೈ ಸಾಧಿಸಲು ಅಕ್ಕ ಪಕ್ಕದ ವಾತಾವರಣ ಪೂರಕವಾಗುತ್ತದೆ.
ತುಲಾ
ವಿದ್ಯಾರ್ಥಿಗಳ ಉತ್ತಮ ಶ್ರೇಣಿಯ ಕನಸು ನನಸಾಗುವುದು. ಹಾಗೆಯೇ ಇಷ್ಟಪಟ್ಟಂಥ ರೀತಿಯಲ್ಲಿ ಉದ್ಯೋಗ ಅವಕಾಶಗಳೂ ದೊರಕುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕ್ರಿಯಾಶೀಲತೆ ಹೆಚ್ಚಲಿದೆ.
ವೃಶ್ಚಿಕ
ಇಂದಿನ ಯೋಜನೆಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ಆದರೆ ಶತ್ರುಗಳು ಕಾರ್ಯವೈಖರಿಯಿಂದ ಚಕಿತಗೊಂಡು ಸನಿಹಕ್ಕೂ ಬರಲಾರರು. ಯಾವ ವಿಚಾರಕ್ಕೂ ಬೇಸರ ಪಡುವ ಅವಶ್ಯಕತೆ ಇಲ್ಲ.
ಧನು
ಬೆಳ್ಳಿ-ಬಂಗಾರದ ಮಾರಾಟಗಾರರಿಗೆ ಉದ್ಯೋಗದಲ್ಲಿ ಬಿಡುವಿಲ್ಲದಂಥ ವ್ಯಾಪಾರ ಆಗುವುದು. ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು, ಸಂತಸ ಹಾಗೂ ಸಮಾಧಾನ ತರಲಿದೆ. ಹೊಸ ಮನೆಗೆ ಹೋಗಬಹುದು.
ಮಕರ
ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಾಗಲಿದ್ದು, ವ್ಯಾಪಾರ ವ್ಯವಹಾರಕ್ಕೆ ಆತಂಕದ ಪರಿಸ್ಥಿತಿ ಬರಬಹುದು. ಬಹಳ ದಿನದ ನಂತರದಲ್ಲಿ ಗುರು ಹಿರಿಯರ ದರ್ಶನ ಭಾಗ್ಯ ದೊರಕುತ್ತದೆ. ಆತ್ಮವಿಶ್ವಾಸದಿಂದ ಮುಂದುವರಿಯಿರಿ.
ಕುಂಭ
ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆ ಉಂಟು ಮಾಡಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ನಿಸ್ವಾರ್ಥ ಶ್ರಮಕ್ಕೆ ಹೆಚ್ಚಿನ ಫಲ ದೊರೆಯುತ್ತದೆ. ಉಮಾಮಹೇಶ್ವರನ ಆರಾಧನೆಯಿಂದ ಶುಭ.
ಮೀನ
ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನು ಪಡೆದುಕೊಳ್ಳುವುದರಿಂದ ಯಶಸ್ವಿಯಾಗುವಿರಿ. ಋಣಬಾಧೆಯಿಂದ ಮುಕ್ತರಾಗಬಹುದು. ದುರ್ಜನರ ಸಹವಾಸದಿಂದ ತಕ್ಷಣ ಹೊರಬರುವ ಪ್ರಯತ್ನ ಮಾಡಿ.
ADVERTISEMENT
ADVERTISEMENT