ಹೈದರಾಬಾದ್: ಕೊನೆಯ ಕ್ಷಣದವರೆಗೂ ಕುತೂಹಲ ಹಿಡಿದಿಟ್ಟ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಒತ್ತಡ ಮೆಟ್ಟಿನಿಂತು 36–32ರಿಂದ ತಮಿಳು ತಲೈವಾಸ್ ವಿರುದ್ಧ ಗೆಲುವು ಸಾಧಿಸಿತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬುಲ್ಸ್ ತಂಡ ನಾಲ್ಕು ಪಾಯಿಂಟ್ಸ್ ಅಂತರದಿಂದ ಗೆದ್ದು, ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಬೆಂಗಳೂರು ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ (12ನೇ) ಸ್ಥಾನದಿಂದ 11ನೇ ಸ್ಥಾನಕ್ಕೆ ಏರಿದೆ. ತಲೈವಾಸ್ ತಂಡಕ್ಕೆ ಇದು ಎರಡನೇ ಸೋಲಾಗಿದ್ದು, ಎರಡನೇ ಸ್ಥಾನದಲ್ಲಿ ಮುಂದುವರಿದಿದೆ.

ಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳು ಬಾಕಿ ಇರುವಾಗ ತಲೈವಾಸ್ ತಂಡವನ್ನು ಮೊದಲ ಬಾರಿ ಆಲೌಟ್ ಬಲೆಗೆ ಬೀಳಿಸಿದ ಬುಲ್ಸ್ ಆಟಗಾರರು 29-27ರಲ್ಲಿ ಮೇಲುಗೈ ಸಾಧಿಸಿದರು. ಹೀಗಾಗಿ, ಪಂದ್ಯ ಮತ್ತಷ್ಟು ರೋಚಕ ಘಟ್ಟ ತಲುಪಿ ಗೆಲುವನ್ನು ತನ್ನದಾಗಿಸಿಕೊಂಡರು.

ಬೆಂಗಳೂರು ಬುಲ್ಸ್ ಪರ ಅಕ್ಷಿತ್ ಮತ್ತು ಅಜಿಂಕ್ಯ ತಲಾ 6 ಅಂಕ ಕಲೆ ಹಾಕಿದರೆ, ಸುರಿಂದರ್ 5 ಅಂಕಗಳ ಕೊಡುಗೆ ನೀಡಿದರು. ತಲೈವಾಸ್ ಪರ ನರೇಂದರ್ ಕಂಡೋಲ 6 ಮತ್ತು ಸಚಿನ್ ತಲಾ 5 ಅಂಕ ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರು.

ಪಲ್ಟನ್ಗೆ ಜಯ: ದಿನದ ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪುಣೇರಿ ಪಲ್ಟನ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು 49–30 ರಲ್ಲಿ 19 ಪಾಯಿಂಟ್ಗಳಿಂದ ಸುಲಭವಾಗಿ ಸೋಲಿಸಿತು. ಇದು ಪುಣೇರಿ ತಂಡಕ್ಕೆ ಏಳು ಪಂದ್ಯಗಳಲ್ಲಿ ಐದನೇ ಜಯವಾಗಿದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಈ ಪಂದ್ಯ ಏಕಪಕ್ಷೀಯವಾಯಿತು. ಆಕಾಶ್ ಶಿಂದೆ 11 ಪಾಯಿಂಟ್ಸ್ ಗಳಿಸಿದರು. ಡಿಫೆಂಡರ್ಗಳಾದ ಅಭಿನೇಶ್ ನಟರಾಜನ್, ಗೌರವ್ ಖತ್ರಿ ಮತ್ತು ಅಮನ್ ಎಲ್ಲರೂ ಹೈ ಫೈವ್ ಗಳಿಸಿದರು. ಗುಜರಾತ್ ಜೈಂಟ್ಸ್ ಪರ ರೇಡರ್ ಗುಮನ್ ಸಿಂಗ್ ಹೋರಾಟ ತೋರಿ 13 ಪಾಯಿಂಟ್ಸ್ ಕಲೆಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.