ಸೋಮವಾರ, 28 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಆರನೇ ಇಂದ್ರಿಯದ ಮಾತಿಗೆ ಬೆಲೆ ಕೊಡುವುದು ಸರಿಯಾದ ತೀರ್ಮಾನ
Published 27 ಅಕ್ಟೋಬರ್ 2024, 16:10 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಲಾವಿದರಿಗೆ ಹಾಗೂ ದಿನಗೂಲಿ ನೌಕರರಿಗೆ ಅನುಕೂಲಕರ ವಾತಾವರಣಗಳು ಸಿಗಲಿವೆ. ಜಾಗ ಖರೀದಿಸಲು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಸರಿಯಾದ ದಿನ. ದೇಹಾಲಸ್ಯ ಕಂಡುಬರಲಿದೆ.
ವೃಷಭ
ಸದ್ಗುಣಗಳ ವ್ಯಕ್ತಿತ್ವದ ಮತ್ತು ಪರೋಪಕಾರಿ ಬದುಕಿನಿಂದ ಜನಪ್ರಿಯತೆ ಹೆಚ್ಚಾಗುವ ಯೋಗವಿರುತ್ತದೆ. ಬಟ್ಟೆಯ ವ್ಯಾಪಾರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಬಹುದು. ಕೆಲಸದಲ್ಲಿ ಪ್ರಶಂಸೆ ಸಿಗುವುದು.
ಮಿಥುನ
ತಂದೆ ತಾಯಿ ಮಾತಿನಂತೆ ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸುವ ಸಲುವಾಗಿ ಯೋಜನೆಯನ್ನು ಕೈಗೊಳ್ಳುವಿರಿ. ಸ್ನೇಹಿತರ ಮೇಲಿನ ದೃಷ್ಟಿಕೋನ ಬದಲಾಯಿಸುವುದರಿಂದ ಅನುಕೂಲ.
ಕರ್ಕಾಟಕ
ಜೀವನದಲ್ಲಿ ಮುಂದುವರಿಯಬೇಕು, ಉನ್ನತ ಸ್ಥಾನ ಅಲಂಕರಿಸಬೇಕು ಎನ್ನುವ ಉತ್ಕಟವಾದ ಅಭಿಲಾಷೆ ಕೆಲಸದಲ್ಲಿ ಕಾಣುವುದು. ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗ ಆಗುವುದು.
ಸಿಂಹ
ಯಾವುದೇ ವಾದ ವಿವಾದಗಳು ನಡೆದರೂ ಕಾರ್ಯ ಸಾಧನೆಗೆ ಯಾವುದೂ ಅಡ್ಡಿಯಾಗಲಾರದು. ಸಹೋದರರ ಕಾರ್ಯಗಳಿಗೋಸ್ಕರ ಅಧಿಕ ಸುತ್ತಾಟವಾದರೂ ನೆಮ್ಮದಿ ಸಿಗಲಿದೆ. ಹೊಂದಾಣಿಕೆ ಅಗತ್ಯ.
ಕನ್ಯಾ
ಆರನೇ ಇಂದ್ರಿಯದ ಮಾತಿಗೆ ಬೆಲೆ ಕೊಡುವುದು ಸರಿಯಾದ ತೀರ್ಮಾನ. ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಸಂಬಂಧಗಳಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಆತ್ಮಾಭಿಮಾನ ಕಾಪಾಡಿಕೊಳ್ಳಿರಿ.
ತುಲಾ
ಆಸೆ ಆಕಾಂಕ್ಷೆಗೂ ಪ್ರಚಲಿತ ವಿದ್ಯಮಾನಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಮನೆಯವರೊಂದಿಗೆ ಚರ್ಚಿಸಿ. ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಸಿದ್ಧರಾಗಬೇಕಾಗುತ್ತದೆ. ಷೇರು ಕೊಳ್ಳುವ ಬಗ್ಗೆ ಆಲೋಚಿಸುವಿರಿ.
ವೃಶ್ಚಿಕ
ಸಹೋದರರ ಕೋಪವನ್ನು ಉಪಶಮನಗೊಳಿಸುವ ಕೆಲಸದಿಂದ ಕೌಟುಂಬಿಕ ಸೌಖ್ಯ ಹೆಚ್ಚುವುದು. ಸಂಸ್ಥೆಯ ಮುಖಾಂತರ ಹೆಚ್ಚಿನ ತರಬೇತಿಗಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು
ಧನು
ಹೆಚ್ಚಿನ ಜವಾಬ್ದಾರಿಯುತವಾದ ಹುದ್ದೆಯನ್ನು ಅಲಂಕರಿಸಲು ಅವಕಾಶ ಮತ್ತು ಆಸೆ ಇದ್ದರೂ ಸಾಮರ್ಥ್ಯದ ಕೊರತೆ ಕಾಣುವುದು. ಮನಸ್ಸಿನ ಅಸ್ಥಿರತೆಯು ಆಧ್ಯಾತ್ಮ ಚಿಂತನೆಗೆ ತೊಂದರೆ ಮಾಡುವುದು.
ಮಕರ
ಸ್ನೇಹಿತರೊಂದಿಗೆ ಪ್ರವಾಸ ಹೊರಡುವ ಸಾಧ್ಯತೆ ಇದೆ. ವಾಹನ, ಎಲೆಕ್ಟ್ರಿಕಲ್‌ ವಸ್ತುಗಳ ರಿಪೇರಿಯಿಂದ ಖರ್ಚು ಸಂಭವಿಸಲಿದೆ. ಸಮೀಪವರ್ತಿಗಳ ಆಶ್ವಾಸನೆ ದೊರೆತು ಶುಭ ಕಾರ್ಯಗಳತ್ತ ಗಮನ ಹರಿಸುವಿರಿ
ಕುಂಭ
ಕೆಲಸದಲ್ಲಿನ ನಿಮಗಿರುವ ಹೆಚ್ಚಿನ ದಕ್ಷತೆಯಿಂದಾಗಿ ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ. ಹಣದ ವಿಚಾರದಲ್ಲಿ ಸರಿಯಾಗಿ ಲೆಕ್ಕಪತ್ರವನ್ನು ಕಾಪಾಡು ವುದು ಅಗತ್ಯ. ಸಾಹಿತ್ಯ –ಸಂಗೀತ ವಿಷಯಗಳತ್ತ ಮನಸ್ಸು ತಿರುಗುವುದು.
ಮೀನ
ನಿಶ್ಚಿತ ವರ-ವಧುಗಳ ಮಧ್ಯದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ, ಸೋಲೊಪ್ಪದ ಮನಸ್ಥಿತಿಯಿಂದ ಭಿನ್ನಾಭಿಪ್ರಾಯ ಬರುವ ಸಂಭವವಿದೆ. ವಾಹನಗಳಿಂದ ಅಧಿಕ ಲಾಭ. ಗಣ್ಯ ವ್ಯಕ್ತಿಗಳ ಪರಿಚಯವಾಗಲಿದೆ.
ADVERTISEMENT
ADVERTISEMENT