ಶನಿವಾರ, 19 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರಿಗೆ ಇಂದು ಚಿನ್ನ ಖರೀದಿ ಯೋಗ ಇದೆ
Published 18 ಅಕ್ಟೋಬರ್ 2024, 23:02 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅನ್ಯರಿಂದ ಆರ್ಥಿಕ ಸಹಾಯ ನಿರೀಕ್ಷಿಸುವುದು ಸರಿಯಲ್ಲ ಹಾಗೂ ನಿಮ್ಮಿಂದ ಅದು ಸಾಧ್ಯವಾಗುವುದೂ ಇಲ್ಲ. ಹಿರಿಯರು ಹೇಳಿದಂತೆ ದೂರ ದೃಷ್ಟಿಯನ್ನು ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗುವುದನ್ನು ಕಲಿಯಿರಿ.
ವೃಷಭ
ವಾಣಿಜ್ಯ ಸಂಸ್ಥೆಯೊಂದರಲ್ಲಿ ಕಾಂಟ್ರಾಕ್ಟ್ ಪಡೆಯುವ ಪ್ರಯತ್ನವು ಫಲಕಾರಿ ಆಗಲಿದೆ. ಆದರೆ ಉದ್ಯೋಗಕ್ಕಾಗಿ ನಿಮ್ಮ ಖಾಸಗಿ ಜೀವನವನ್ನೇ ತ್ಯಾಗ ಮಾಡಬೇಕಾಗಬಹುದು. ಧ್ಯಾನ, ಭಜನೆಗಳತ್ತ ಮನಸ್ಸು ವಾಲುವುದು.
ಮಿಥುನ
ವಿಮೆ ಸಲಹೆಗಾರರಿಗೆ ವೃತ್ತಿ ರಂಗದಲ್ಲಿ ಉತ್ತಮ ಪ್ರಚೋದನೆಯಿಂದ ಯಶಸ್ಸು ಸಿಗಲಿದೆ. ಗೊತ್ತಿಲ್ಲದ ವಿಚಾರಗಳನ್ನು ಕೇಳಿ ತಿಳಿದುಕೊಳ್ಳುವ ಮೂಲಕ ಕೆಲಸಗಳು ಸುಗಮವಾಗುವುದು. ಬಂಧುಗಳ ಆಗಮನ ಸಂತೋಷ ಕೊಡಲಿದೆ.
ಕರ್ಕಾಟಕ
ಹೆಚ್ಚು ಜವಾಬ್ದಾರಿಯುತವಾದ ಹುದ್ದೆ ನಿಮ್ಮ ಪಾಲಿಗೆ ಬರಲಿದೆ. ಆದ್ದರಿಂದ ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಗಮನಹರಿಸಿ. ನವದಂಪತಿಗಳಿಗೆ ಸಂತಾನ ಭಾಗ್ಯ ದೊರೆತು ಸಂತೋಷವಾಗುವುದು.
ಸಿಂಹ
ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಪಶುಸಂಗೋಪನೆ ಯಿಂದ ಹೆಚ್ಚಿನ ಲಾಭ ಇರುವುದು. ವೃತ್ತಿ ಬರಹಗಾರರಿಗೆ ಅವಕಾಶಗಳು ಹಾಗೂ ಸರಕುಸಾಗಣಿಕೆ ಮತ್ತು ಸಾರಿಗೆ ವ್ಯವಸ್ಥೆಯವರಿಗೆ ವಿಫುಲ ಆದಾಯ ಇರುತ್ತದೆ.
ಕನ್ಯಾ
ದೇವರ ಮತ್ತು ಹಿರಿಯರ ಅನುಗ್ರಹದಿಂದ ಕುಟುಂಬದಲ್ಲಿನ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ವ್ಯವಹಾರಗಳಲ್ಲಿ ಮುಂದಾಲೋಚನೆ ಇಲ್ಲದೇ ಯಾವುದೇ ಭರವಸೆ ನೀಡಬೇಡಿ. ಚಿನ್ನ ಖರೀದಿ ಯೋಗ ಇದೆ.
ತುಲಾ
ಮನಸ್ಸು ಚಂಚಲವಾಗಿರುವುದು ಆದರೆ ದೇವಬಲವಿರುವ ಕಾರಣದಿಂದ ಕೈಹಾಕಿದ ಕೆಲಸ ಜಯದ ಜೊತೆಯಲ್ಲಿ ಪೂರ್ಣಗೊಳ್ಳುವುದು. ಕೆಲಸಗಳು ತೀವ್ರಗತಿಯಲ್ಲಿ ಸಾಗುತ್ತಿರುವುದು ತುಸು ಸಂತಸವೆನಿಸುವುದು.
ವೃಶ್ಚಿಕ
ಈ ದಿನದಂದು ಒಂದು ವಿಚಾರದ ಬಗೆಗಿನ ಯೋಚನೆಯಿಂದಾಗಿ ಉಳಿದೆಲ್ಲಾ ಕೆಲಸದಲ್ಲಿ ಮನಸ್ಸಿಲ್ಲದಂತಾಗುವುದು. ಹೊಸದನ್ನು ಕಲಿಯುವ ಉತ್ಸಾಹದಿಂದ ಮುನ್ನುಗ್ಗಿದಲ್ಲಿ ಯಶಸ್ಸು ಖಂಡಿತವಾಗಿ ಲಭಿಸುವುದು.
ಧನು
ಆರ್ಥಿಕ, ಮಾನಸಿಕ ಹಾಗು ದೈಹಿಕ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ಅಪೇಕ್ಷಿಸಬಹುದು. ಕಂಪನಿಯ ರಾಜಕೀಯ ಸನ್ನಿವೇಶಗಳು ನಿಮಗೆ ಅನುಕೂಲಕರವಾಗಿರುತ್ತದೆ, ಸ್ವಲ್ಪ ಜಾಣತನ ಪ್ರದರ್ಶಿಸಿ.
ಮಕರ
ಸಂಗೀತಗಾರರಿಗೆ ಪ್ರತಿಭೆ ಹೊರಹಾಕಲು ಹಾಗೂ ಜನಪ್ರಿಯರಾಗಲು ಉತ್ತಮ ವೇದಿಕೆ ಸಿಗಲಿದೆ. ಮಗನ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿ ಆತಂಕಗಳು ಬಾರದಂತೆ ತಾಯಿ ಶ್ರೀ ಶಾರದಾ ದೇವಿಯನ್ನು ಪ್ರಾರ್ಥಿಸಿ.
ಕುಂಭ
ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಪರಿಚಿತರಿಂದ ಆರ್ಥಿಕ ಬಲ ಸಿಗಲಿದೆ. ಆಫೀಸಿನಲ್ಲಿ ನಡೆಯುವ ವಿಚಾರಗಳಿಗೆ ಸಂಬಂಧಿಸಿ ಅಧಿಕಾರಿಗಳು ನಿಮ್ಮ ಪರವಾಗಿ ಇರುತ್ತಾರೆ. ಅವಿವಾಹಿತರಿಗೆ ಶುಭ ಫಲಗಳು ಲಭಿಸುವುದು.
ಮೀನ
ಉದ್ಯೋಗಾಕಾಂಕ್ಷಿಗಳು ಸಂದರ್ಶನ ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳಿ. ಎಲ್ಲಾ ಕೆಲಸಗಳೂ ಉತ್ತಮ ಉದ್ದೇಶವನ್ನೇ ಹೊಂದಿರುವುದು. ಹಸಿರು ಬಣ್ಣ ಅದೃಷ್ಟ ತರುವುದು.
ADVERTISEMENT
ADVERTISEMENT