ಹೈದರಾಬಾದ್: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ತೆಲುಗು ಟೈಟನ್ಸ್ ತಂಡವು ಪ್ರೊ ಕಬಡ್ಡಿ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲುಣಿಸಿತು.

ಟೈಟನ್ಸ್ ತಂಡವು 37–29 ಪಾಯಿಂಟ್ಗಳಿಂದ ಬೆಂಗಳೂರು ತಂಡವನ್ನು ಮಣಿಸಿತು.

ಇಲ್ಲಿಯ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಉಭಯ ತಂಡಗಳ ನಡುವಣ ಹಣಾಹಣಿ ಕುತೂಹಲ ಕೆರಳಿಸಿತು. ತೆಲುಗು ಟೈಟನ್ಸ್ ತಂಡವು ಆರಂಭದಲ್ಲೇ ಮೇಲುಗೈ ಸಾಧಿಸುತ್ತ ಸಾಗಿತು.

ಪ್ರಥಮಾರ್ಧದಲ್ಲಿ ಮೇಲುಗೈ ಪಡೆಯಿತು. ಬೆಂಗಳೂರು ದ್ವಿತೀಯಾರ್ಧದಲ್ಲಿ ಒಂದಿಷ್ಟು ಪೈಪೋಟಿ ನೀಡಿದರೂ ಪ್ರಯೋಜನವಾಗಲಿಲ್ಲ.

ತೆಲುಗು ಟೈಟನ್ಸ್ ಪರ ನಾಯಕ ಪವನ್ ಸೆಹ್ರಾವತ್ 13 ಪಾಯಿಂಟ್ಸ್ ಗಳಿಸಿ ಮಿಂಚಿದರು. ಡಿಫೆಂಡರ್ ಕ್ರಿಶನ್ ಆರು ಪಾಯಿಂಟ್ಸ್ ಕಲೆ ಹಾಕಿದರು. ಅಂಕಿತ್ ಮತ್ತು ಸಾಗರ್ ತಲಾ ಮೂರು ಪಾಯಿಂಟ್ಸ್ ಗಳಿಸಿದರು.

ನೂತನ ನಾಯಕ ಪ್ರದೀಪ್ ನರ್ವಾಲ್ ನಿರೀಕ್ಷೆಗೆ ತಕ್ಕ ಆಟವಾಡುವಲ್ಲಿ ವಿಫಲವಾದದ್ದು ಬೆಂಗಳೂರು ತಂಡಕ್ಕೆ ಮುಳುವಾಯಿತು. ಅವರು ಕೇವಲ ಮೂರು ಪಾಯಿಂಟ್ಸ್ ಗಳಿಸಿದರು. ಸುರೇಂದರ್ ದಹಲ್ (5 ಪಾಯಿಂಟ್) ಆಟ ಸಾಕಾಗಲಿಲ್ಲ. ಜೈ ಭಗವಾನ್, ಸೌರಭ್ ನಂದಾಲ್, ನಿತಿನ್ ರಾವಲ್ ತಲಾ 3 ಪಾಯಿಂಟ್ ಕಲೆಹಾಕಿದರು.

ಪವನ್ ಸೆಹ್ರಾವತ್ ಟೂರ್ನಿಯಲ್ಲಿ 1200 ಪಾಯಿಂಟ್ಸ್ ಗಳಿಸಿದ ಸಾಧನೆ ಮಾಡಿದರು.

ದಿನದ ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವು 36-28ರಿಂದ ಯು ಮುಂಬಾ ಎದುರು ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.