ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಕೌಟುಂಬಿಕ ವಿಷಯಗಳ ಗೋಪ್ಯತೆ ಕಾಪಾಡಿಕೊಳ್ಳುವುದು ಉತ್ತಮ
Published 8 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೌಟುಂಬಿಕ ವಿಷಯಗಳ ಗೋಪ್ಯತೆಯನ್ನು ಕಾಪಾಡಿಕೊಂಡು ಹೋಗುವುದು ಉತ್ತಮ. ಬಾಕಿ ಕೆಲಸಗಳ ಈಡೇರಿಕೆಗೆ ದೀರ್ಘ ಪ್ರಯಾಣ ಕೈಗೊಳ್ಳಬೇಕಾದ ಅನಿವಾರ್ಯತೆ ಮೂಡಲಿದೆ.
ವೃಷಭ
ಹಲವಾರು ವಿಚಾರಗಳಲ್ಲಿ ಪದೇಪದೆ ತೊಂದರೆ ಕಂಡುಬಂದರೂ, ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿವೆ. ಕೌಟುಂಬಿಕ ವಿಚಾರಗಳಲ್ಲಿ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿ.
ಮಿಥುನ
ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಅಳವಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ. ಪುತ್ರನ ಸಾಧನೆಗಳಿಂದ ಸಂತೋಷ ಉಂಟಾಗಲಿದೆ.
ಕರ್ಕಾಟಕ
ಲೇವಾದೇವಿ ವ್ಯವಹಾರದವರಿಗೆ ಅತಿ ವಿಶ್ವಾಸದ ವ್ಯಕ್ತಿಗಳಿಂದಲೇ ನಂಬಿಕೆದ್ರೋಹ ಉಂಟಾಗಬಹುದು. ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಲು ರಾಜಕೀಯ ಗುರುವನ್ನು ಭೇಟಿಯಾಗುವ ಸಾಧ್ಯತೆ ಇರಲಿದೆ.
ಸಿಂಹ
ಲೋಪ ದೋಷಗಳನ್ನು ತಿದ್ದಿಕೊಳ್ಳುವಂತೆ ಹಿರಿಯರು ತಮ್ಮ ಅನುಭವದ ಮಾತುಗಳನ್ನು ಹೇಳಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬಂಡು ಮಕ್ಕಳೊಡನೆ ಆಟ ಪಾಠಗಳಲ್ಲಿ ತೊಡಗಿಕೊಳ್ಳುವಿರಿ.
ಕನ್ಯಾ
ಆಸ್ತಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಹಾಗೂ ಸರಕಾರಿ ಕೆಲಸಗಳು ಮೇಲಧಿಕಾರಿಗಳ ಸಹಾಯದಿಂದ ಸಂಪನ್ನಗೊಳ್ಳಲಿವೆ. ಆಯಕಟ್ಟಿನ ಹುದ್ದೆಗಾಗಿ ಸಮಬಲದಿಂದ ಹೋರಾಡಲು ತೀರ್ಮಾನಿಸಬಹುದು.
ತುಲಾ
ನಿಮ್ಮ ಸಲಹೆ ಸೂಚನೆಗಳನ್ನು ಮೇಲಧಿಕಾರಿಗಳು ಯಥಾವತ್ತಾಗಿ ಒಪ್ಪಿಕೊಳ್ಳುವರು. ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷ್ಯ ಬೇಡ ಹಾಗೂ ಮನೆಮದ್ದು ಪ್ರಯೋಗಿಸುವುದು ಸೂಕ್ತವಲ್ಲ.
ವೃಶ್ಚಿಕ
ಸಂಸ್ಥೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆಯ ಬಗ್ಗೆ ಹೆಚ್ಚಿನ ಅಧ್ಯಯನ ನೆಡೆಸುವುದು ಉತ್ತಮ. ನೂತನ ಯೋಜನೆ ರೂಪಿಸುವ ಬಗ್ಗೆ ತಜ್ಞರೊಂದಿಗೆ ಚರ್ಚಿಸಲು ಈ ದಿನ ಸೂಕ್ತವಾಗಿದೆ.
ಧನು
ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹೂಡಲು ತಂದೆಯವರ ಸಮ್ಮತಿಯನ್ನು ಪಡೆಯುವುದು ಒಳ್ಳೆಯದು. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಆನಂದ, ನೆಮ್ಮದಿ ಮೂಡಲಿದೆ.
ಮಕರ
ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಕನಸಿನ ಅವಕಾಶಗಳು ಅರಸಿ ಬರಲಿವೆ. ನಿಮ್ಮೊಳಗಿನ ನಾಯಕತ್ವದ ಗುಣವು ಸಹೋದ್ಯೋಗಿಗಳ ಸಹಕಾರದಿಂದ ಅಭಿವೃದ್ಧಿಯಾಗುತ್ತದೆ.
ಕುಂಭ
ವ್ಯಾಪಾರ ವ್ಯವಹಾರದಲ್ಲಿ ನಿಮಗಾಗಿರುವ ಮೋಸ, ವಂಚಕರ ಕೈವಾಡದಂತಹ ಸಂಗತಿಗಳು ಬೆಳಕಿಗೆ ಬರುತ್ತದೆ. ಸೋದರಿಯ ವಿಷಯದಲ್ಲಿ ಅನುಕಂಪ ಮೂಡಲಿದೆ. ವಿದೇಶಯಾನ ಮಾಡಬೇಕಾಗಬಹುದು.
ಮೀನ
ಅಧಿಕಾರಿಗಳು ಎಚ್ಚರಿಕೆಯಿಂದ ಪರಿಸ್ಥಿತಿ ಅವಲೋಕಿಸಿ ಮುಂದಿನ ಹೆಜ್ಜೆ ಇರಿಸಿ. ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಮೊದಲು ಮಹಾಗಣಪತಿಯನ್ನು ಸ್ತುತಿಸಿ. ದಿನ ನಿತ್ಯದ ಕೆಲಸಗಳು ಎಂದಿನಂತೆ ಸಾಗಲಿವೆ.
ADVERTISEMENT
ADVERTISEMENT