ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ-ವಿಭಾಗ ಮೊಳೆಯೂರು ವಲಯದಲ್ಲಿ ಗುರುವಾರ ಹುಲಿಯೊಂದರ ಮೃತದೇಹ ಪತ್ತೆಯಾಗಿದೆ.

ಮೊಳೆಯೂರು ಶಾಖೆಯ ನಡಾಡಿ ಗಸ್ತಿನಲ್ಲಿ ಸಿಬ್ಬಂದಿಗೆ ಕಳೇಬರ ಕಂಡು ಬಂದಿದ್ದು, ಹುಲಿಗೆ 1ರಿಂದ 2 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. ಹುಲಿಯು ಗಂಡು ಅಥವಾ ಹೆಣ್ಣು ಎಂಬುದು ಗೊತ್ತಾಗಿಲ್ಲ.

ಪಶುವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಅವರು ಮರಣೋತ್ತರ ಪರೀಕ್ಷೆ ನಡೆಸಿದರು.

ಮತ್ತೊಂದು ಹುಲಿಯ ಜೊತೆ ನಡೆದ ಕಾದಾಟದಲ್ಲಿ ಕತ್ತು ಮುರಿದಿರುವುದರಿಂದ ಅದು ಸತ್ತಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಮೃತದೇಹವನ್ನು ಕಾಡುನಾಯಿಗಳು ಸೇರಿದಂತೆ ಇತರೆ ಜೀವಿಗಳು ತಿಂದಿರುವುದರಿಂದ ಲಿಂಗ ಪತ್ತೆಯೂ ಸಾಧ್ಯವಾಗಿಲ್ಲ.

ಹುಲಿ ಯೋಜನೆಯ ಎಪಿಸಿಸಿಎಫ್, ಆನೆ ಯೋಜನೆ ಎಪಿಸಿಸಿಎಫ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಸೇರಿದಂತೆ ಅಧಿಕಾರಿಗಳು, ಇಲಾಖಾ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
.ಬಂಡೀಪುರ: ಮುಳ್ಳುಹಂದಿ ತಿಂದಿದ್ದ ಹುಲಿ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.