ಮೂಲ್ಕಿ: ‘ಮೂಡುಬಿದಿರೆ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಪರವಾದ ಅಲೆ ಇದ್ದು, ಇದಕ್ಕೆ ಪೂರಕವಾಗಿ ರಾಷ್ಟ್ರದ ಯುವ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಭೇಟಿಯಿಂದ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ. ಮೇ 7ರಂದು ಮೂಲ್ಕಿಯಲ್ಲಿ ನಡೆಯುವ ಸಮಾವೇಶವು ಪಕ್ಷಕ್ಕೆ ದಿಕ್ಸೂಚಿಯಾಗಲಿದೆ. ಅಂದು ಸುಮಾರು 30 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದರು.

ಕಿನ್ನಿಗೋಳಿಯ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕ್ಷೇತ್ರದ ಎಲ್ಲಾ ಬೂತ್ಗಳಿಂದಲೂ ಕಾರ್ಯಕರ್ತರ ಉತ್ತಮ ನಡೆಯು ಪಕ್ಷಕ್ಕೆ ಅನುಕೂಲವಾಗಿದೆ. ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಅಪಪ್ರಚಾರ ನಡೆಸಿದರೂ ನನ್ನ ಸಾಮಾಜಿಕ ಸೇವೆಯನ್ನು ಜನರೇ ಗುರುತಿಸುತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರಕ್ಕೆ ಚುನಾವಣೆಯು ತಕ್ಕ ಉತ್ತರವಾಗಿದೆ. ಪ್ರತೀ ಗ್ರಾಮೀಣ ಭಾಗದಲ್ಲಿಯೂ ಪಕ್ಷದ ಬಗ್ಗೆ ಇರುವ ಅಭಿಪ್ರಾಯವೇ ನಮಗೆ ಗೆಲುವಿನ ಸೇತುವೆಯಾಗಲಿದೆ’ ಎಂದರು.

ಕೆಪಿಸಿಸಿಯ ಸಂಯೋಜಕ ಎಚ್.ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪ್ರಮುಖರಾದ ಗಣೇಶ್ ಪ್ರಸಾದ್ ಮೂಡಬಿದಿರೆ, ಪ್ರವೀಣ್ ಪೂಜಾರಿ, ಧರ್ಮಾನಂದ ಶೆಟ್ಟಿಗಾರ್, ಸತೀಶ್ ಕೋಟ್ಯಾನ್, ಚಂದ್ರಕುಮಾರ್ ಸಸಿಹಿತ್ಲು, ಅಬ್ದುಕ್ ಅಜೀಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.