ಶಿಕಾರಿಪುರ: ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮನೆ ಗೋಡೆ ಕುಸಿದು ನಾಲ್ವರಿಗೆ ಗಾಯಗಳಾಗಿವೆ.

ರಾತ್ರಿ ಸುರಿದ ಮಳೆಗೆ ಕಪ್ಪನಹಳ್ಳಿ ಗ್ರಾಮದ ನಿವಾಸಿ ಶಿವಮೂರ್ತಿ ಮನೆ ಗೋಡೆ ಕುಸಿದಿದೆ. ರಾತ್ರಿ ಸಂದರ್ಭದಲ್ಲಿ ಕುಟುಂಬದವರೆಲ್ಲರೂ ಮಲಗಿದ ಸಂದರ್ಭದಲ್ಲಿ ಮನೆ ಕುಸಿದಿದೆ. ತಂದೆ ಶಿವಮೂರ್ತಿ(40) ತಾಯಿ ಚೇತನಾ(35),ಮಕ್ಕಳಾದ ಯುವರಾಜ(13) ಕೃಷ್ಣ(11) ಗಾಯಗೊಂಡಿದ್ದಾರೆ.

ತಕ್ಷಣ ಗ್ರಾಮಸ್ಥರು ಗೋಡೆ ಕುಸಿದ ಮಣ್ಣನ್ನು ತೆಗೆದು ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದೇ ರೀತಿ ನಾಗರಾಜಪ್ಪ ಮನೆ ಗೋಡೆ ಕುಸಿದಿದೆ. ಆದರೆ ಮನೆಯಲ್ಲಿ ಯಾರು ಇರಲಿಲ್ಲ.

ತುಂಗೆಗೆ ಬಾಗಿನ ಅರ್ಪಣೆ..

ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಅಣೆಕಟ್ಟೆ ಭರ್ತಿಯಾಗಿದೆ. ಶನಿವಾರ ಸಂಸದ ಬಿ.ವೈ. ರಾಘವೇಂದ್ರ ಬಾಗಿನ ಸಮರ್ಪಿಸಿದರು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ಹಾಗೂ ಬೆಂಬಲಿಗರು ಇದ್ದರು.
.ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಮುಂದುವರಿಕೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.