ಹಾವೇರಿ: ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಮಾಲೀಕತ್ವದ ಹೋಟೆಲ್ ಮೇಲೆ ಸೋಮವಾರ ರಾತ್ರಿ ಚುನಾವಣೆ ಅಧಿಕಾರಿಗಳಿಂದ (ಫ್ಲೈಯಿಂಗ್ ಸ್ಕ್ವಾಡ್) ದಾಳಿ ನಡೆದಿದೆ.

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಟೋಲ್ ನಾಕಾ ಬಳಿ ಇರುವ ಎನ್ ಎಚ್-4 ಗ್ರ್ಯಾಂಡ್ ಹೋಟೆಲ್ ಮೇಲೆ ದಾಳಿ ನಡೆದಿದೆ.

ಮತದಾರರಿಗೆ ಹಂಚಲು ಕವರ್ ಗಳಲ್ಲಿ ಇಟ್ಟಿದ್ದ ಸುಮಾರು ₹6 ಲಕ್ಷ ನಗದನ್ನು ಜಪ್ತಿ ಮಾಡಲಾಗಿದೆ. ತಲಾ ಕವರ್ ನಲ್ಲಿ ₹ 3 ಸಾವಿರ ನಗದು ಇತ್ತು ಎನ್ನಲಾಗಿದೆ.

ಹಣ ಜಪ್ತಿ ಮಾಡಿದ ಚುನಾವಣಾ ಅಧಿಕಾರಿಗಳು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ತೆರಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿದ್ದ ಯಾಸಿರ್ ಖಾನ್ ಪಠಾಣ್ ಒಡೆತನದ ಹೋಟೆಲ್ ಮೇಲೆ ಚುನಾವಣೆ ಸಂದರ್ಭ ದಾಳಿ ನಡೆದಿರುವುದಕ್ಕೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.