ಹೈದರಾಬಾದ್: ಅಲ್ಲು ಅರ್ಜುನ್ ಅಭಿನಯದ ಅಭೂತಪೂರ್ವ ಯಶಸ್ಸು ಗಳಿಸಿದ ತೆಲುಗಿನ ‘ಪುಷ್ಪ' ಚಿತ್ರದ ಭಾಗ–2 ‘ಪುಷ್ಪ–ದಿ ರೂಲ್’ ಟೀಸರ್ ಬಿಡುಗಡೆಗೊಂಡಿದೆ.

ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.

ತಿರುಪತಿ ಜೈಲಿನಿಂದ ತಪ್ಪಿಸಿಕೊಂಡಿರುವ ಪುಷ್ಪ. ಪೊಲೀಸರು ಹುಡುಕಾಡುತ್ತಿರುವ ದೃಶ್ಯದಿಂದ ಟೀಸರ್ ಆರಂಭವಾಗುತ್ತದೆ. ಇದೇವೇಳೆ, ಪೊಲೀಸರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಪುಷ್ಪಾ ತೀವ್ರ ಗಾಯಗೊಂಡಿದ್ದಾನೆ. ಬದುಕಿರುವ ಸಾಧ್ಯತೆ ಇಲ್ಲ ಎಂಬ ವದಂತಿ ಹಬ್ಬುತ್ತಿದ್ದಂತೆ ಗಲಭೆಗಳು ಆರಂಭವಾಗುತ್ತವೆ. ಈ ನಡುವೆ ಜನ ಪುಷ್ಪ ಮಾಡಿದ ಸಹಾಯವನ್ನು ನೆನೆಯುತ್ತಾ ಪೊಲೀಸರೇ ಅವನನ್ನು ಕೊಂದಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇತ್ತ, ಸಿಸಿಟಿವಿವೊಂದರಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಪುಷ್ಪಾನನ್ನು ಕಂಡು ಹುಲಿ ಎರಡು ಹೆಜ್ಜೆ ಹಿಂದಕ್ಕಿಟ್ಟಿರುವ ದೃಶ್ಯವನ್ನು ಸುದ್ದಿವಾಹಿನಿಯೊಂದು ಪ್ರಸಾರ ಮಾಡುತ್ತೆ. ಈ ಸಂದರ್ಭ ಪುಷ್ಪಾ ಬದುಕಿರುವ ಮಾಹಿತಿ ತಿಳಿದ ಜನರು ನಿಟ್ಟುಸಿರುಬಿಡುತ್ತಾರೆ. ಶಾಲನ್ನು ಸುತ್ತಿಕೊಂಡಿರುವ ಪುಷ್ಪ, ಕುತ್ತಿಗೆಯನ್ನು ಪಕ್ಕಕ್ಕೆ ತಿರುಗಿಸಿ ಮಾಸ್ ಡೈಲಾಗ್ ಹೊಡೆಯುತ್ತಾನೆ. ಅಲ್ಲಿಗೆ ಟೀಸರ್ ಕೊನೆಗೊಳುತ್ತದೆ.

‘ಕಾಡಿನಲ್ಲಿ ಪ್ರಾಣಿಗಳೆಲ್ಲ ಹಿಂದೆ ಹೋಗುತ್ತಿವೆ ಎಂದರೆ ಅಲ್ಲಿ ಹುಲಿ ಬಂದಿದೆ ಎಂದು ಅರ್ಥ. ಅದೇ ಹುಲಿ ಎರಡು ಹೆಜ್ಜೆ ಹಿಂದೆ ಇಡುತ್ತಿದೆ ಎಂದರೆ ಪುಷ್ಪ ಬಂದಿದ್ದಾನೆ ಎಂದರ್ಥ’ ಎಂಬ ಮಾಸ್ ಡೈಲಾಗ್ ಮೂಲಕ ಅಲ್ಲು ಅರ್ಜುನ್ ಎಂಟ್ರಿ ಕೊಟ್ಟಿದ್ದಾರೆ.

ಟೀಸರ್ ಬಿಡುಗಡೆ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಚಿತ್ರದ ಕುರಿತಂತೆ ತಮ್ಮ ಕ್ರೇಜ್ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಅಲ್ಲು ಅರ್ಜುನ್ ಸಹ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಪುಷ್ಪ–ದಿ ರೂಲ್' ಚಿತ್ರದ ವಿಶಿಷ್ಟ ಪೋಸ್ಟರ್ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.