ನವದೆಹಲಿ: ಅಬಕಾರಿ ನೀತಿ ಹಗರಣ ಸಂಬಂಧ ಇ.ಡಿ ಸಮನ್ಸ್ ವಿಚಾರದಲ್ಲಿ ನ್ಯಾಯಾಲಯಕ್ಕೆ ಕಾಜರಾಗುವಂತೆ ದೆಹಲಿಯ ಎಸಿಎಂಎಂ ನ್ಯಾಯಾಲಯದ ಸಮನ್ಸ್ ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಅಬಕಾರಿ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಜಾರಿ ನಿರ್ದೇಶನಾಲಯ(ಇ.ಡಿ) ಸಮನ್ಸ್ ನೀಡಿದ್ದು, ಕೇಜ್ರಿವಾಲ್ ಅದಕ್ಕೆ ಸೊಪ್ಪು ಹಾಕಿಲ್ಲ. ಈ ಸಂಬಂಧ ಇ.ಡಿ, ಐಪಿಸಿ ಸೆಕ್ಷನ್ 174ರ ಅಡಿ ನ್ಯಾಯಾಲಯದಲ್ಲಿ ಎರಡು ದೂರು ದಾಖಲಿಸಿತ್ತು. ಸಂಖ್ಯೆ 4ರಿಂದ 8ರ ವರೆಗಿನ ಸಮನ್ಸ್ಗಳಿಗೆ ಪ್ರತಿಯಾಗಿ ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗಿಲ್ಲ. ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

ಈ ಸಂಬಂಧ ಮಾರ್ಚ್ 16ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಕೋರ್ಟ್ ಸಮನ್ಸ್ ನೀಡಿತ್ತು.

ಐಪಿಸಿ ಸೆಕ್ಷನ್ 174ರಡಿ ತನಿಖಾ ಸಂಸ್ಥೆ ನೀಡಿದ್ದ ಸಮನ್ಸ್ ಅನ್ನು ಒಬ್ಬ ವ್ಯಕ್ತಿ ಉಲ್ಲಂಘಿಸಿದರೆ, ಒಂದು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ₹500ರವರೆಗೆ ದಂಡ ವಿಧಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.