ಹೈದರಾಬಾದ್: ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಅಧ್ಯಕ್ಷರನ್ನಾಗಿ ಆಯ್ಕೆಯಾದರು.

ಶುಕ್ರವಾರ ನಡೆದ ಚುನಾವಣೆಯಲ್ಲಿ ಅಜರುದ್ದೀನ್ 173 ಮತಗಳನ್ನು ಗಳಿಸಿದರು. ಅವರ ಎದುರಾಳಿಯಾಗಿದ್ದ ಪ್ರಕಾಶಚಂದ್ ಜೈನ್ 73 ಮತಗಳನ್ನು ಪಡೆದರು. ಅಜರ್ ಬೆಂಬಲಿತ ಅಭ್ಯರ್ಥಿಗಳು ಬೇರೆ ಬೇರೆ ಸ್ಥಾನಗಳಿಗೆ ಆಯ್ಕೆಯಾದರು.

ಎಚ್‌ಪಿಸಿಎಗೆ ಅರುಣ್ ಧುಮಾಲ್ ಅಧ್ಯಕ್ಷ: ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಾಲ್ ಅವರು ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಧರ್ಮಶಾಲಾದಲ್ಲಿ ಸರ್ವಸದಸ್ಯರ ಸಭೆ ನಡೆಯಿತು.

ಜೈಲಿನಿಂದ ಮತ ಚಲಾಯಿಸಿದ ಬೆಹೆರಾ: ಒಡಿಶಾ ಕ್ರಿಕೆಟ್ ಸಂಸ್ಥೆ (ಒಸಿಎ) ಕಾರ್ಯದರ್ಶಿಯಾಗಿ ಸಂಜಯ್ ಬೆಹೆರಾ ಆಯ್ಕೆಯಾದರು. ಅವರ ತಂದೆ ಮತ್ತು ಕ್ರೀಡಾ ಆಡಳಿತಗಾರ ಆಶಿರ್ವಾದ್ ಬೆಹೆರಾ ಅವರು ಈ ಹಿಂದೆ ಅವ್ಯವಹಾರದ ಆರೋಪದಲ್ಲಿ ಬಂಧಿತರಾಗಿದ್ದರು. ಶುಕ್ರವಾರ ಅವರು ಜೈಲಿನಿಂದಲೇ ಮತ ಚಲಾಯಿಸಿದರು.

ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)ಯ ಅಕ್ಟೋಬರ್ 4ರಂದು ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.