ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಾ ಓಪನ್‌: ಅಲ್ಕರಾಜ್‌ಗೆ ಕಿರೀಟ

Published : 2 ಅಕ್ಟೋಬರ್ 2024, 23:46 IST
Last Updated : 2 ಅಕ್ಟೋಬರ್ 2024, 23:46 IST
ಫಾಲೋ ಮಾಡಿ
Comments

ಬೀಜಿಂಗ್‌: ಎರಡನೇ ಶ್ರೇಯಾಂಕದ ಕಾರ್ಲೊಸ್ ಅಲ್ಕರಾಜ್‌ ಅವರು ಬುಧವಾರ ಚೀನಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಯಾನಿಕ್‌ ಸಿನ್ನರ್‌ ಅವರನ್ನು ಮೂರು ಸೆಟ್‌ಗಳ ಹೋರಾಟದಲ್ಲಿ ಮಣಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ನಾಲ್ಕು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ 21 ವರ್ಷ ವಯಸ್ಸಿನ ಅಲ್ಕರಾಜ್‌ 6-7 (6/8), 6-4, 7-6(7/3)ರಿಂದ ಇಟಲಿಯ 23 ವರ್ಷ ವಯಸ್ಸಿನ ಸಿನ್ನರ್‌ ಅವರನ್ನು ಹಿಮ್ಮೆಟ್ಟಿಸಿದರು. ಸ್ಪೇನ್‌ ಆಟಗಾರನಿಗೆ ಇದು ವರ್ಷದ ನಾಲ್ಕನೇ ಎಟಿಪಿ ಕಿರೀಟ ಮತ್ತು ಒಟ್ಟಾರೆ 16ನೇ ಪ್ರಶಸ್ತಿ. ಮೂರು ಗಂಟೆ 21 ನಿಮಿಷ ನಡೆದ ಹೋರಾಟದ ಮೊದಲ ಸೆಟ್‌ ಅನ್ನು ಟೈ ಬ್ರೇಕರ್‌ನಲ್ಲಿ ಕಳೆದುಕೊಂಡ ಅಲ್ಕರಾಜ್‌, ಎರಡನೇ ಸೆಟ್‌ನಲ್ಲಿ ಲಯ ಕಂಡುಕೊಂಡು ತಿರುಗೇಟು ನೀಡಿದರು. ಸಮಬಲದ ಪೈಪೋಟಿ ಕಂಡುಬಂದ ನಿರ್ಣಾಯಕ ಸೆಟ್‌ ಅನ್ನು ಟೈ ಬ್ರೇಕರ್‌ನಲ್ಲಿ ವಶಪಡಿಸಿಕೊಂಡ ಸ್ಪೇನ್‌ ಆಟಗಾರ ಪ್ರಶಸ್ತಿಗೆ ಮುತ್ತಿಕ್ಕಿದರು.

ಆಸ್ಟ್ರೇಲಿಯಾ ಮತ್ತು ಅಮೆರಿಕ ಓಪನ್‌ ಚಾಂಪಿಯನ್‌ ಸಿನ್ನರ್ ಮೇಲಿನ ಉದ್ದೀಪನ ಮದ್ದುಸೇವನೆ ಪ್ರಕರಣ ಕಳೆದ ವಾರ ಮರುಜೀವ ಪಡೆದಿದೆ. ಅವರನ್ನು ದೋಷ ಮುಕ್ತ ಗೊಳಿಸಿರುವುದರ ವಿರುದ್ಧ ವಾಡಾ ಮೇಲ್ಮನವಿ ಸಲ್ಲಿಸಿದೆ. ಹೀಗಾಗಿ, ಕೆಲ ದಿನಗಳಿಂದ ಒತ್ತಡದಲ್ಲಿರುವುದನ್ನು ಅವರು ಒಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT