ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿಯ ಗುಣಮಟ್ಟ ಸೂಚ್ಯಂಕವು 324 (ಎಕ್ಯೂಐ) ದಾಖಲಾಗಿದ್ದು, ಸೋಮವಾರ ಅತ್ಯಂತ ಕಳಪೆ ಆದ್ರರ್ತೆ ಪ್ರಮಾಣ ಎಂದು ಐಎಂಡಿ ಹೇಳಿದೆ.

ವಾಯು ಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ವ್ಯವಸ್ಥೆಯ(ಎಸ್ಎಎಫ್ಎಆರ್) ದತ್ತಾಂಶವು ಸೋಮವಾರ ಸತತ ಎರಡನೇ ದಿನವು ಅತ್ಯಂತ ಕಳಪೆ ಎಂದು ಹೇಳಿದೆ. ಭಾನುವಾರ ಗಾಳಿಯ ಗುಣಮಟ್ಟ ಸೂಚ್ಯಂಕವು 373 ದಾಖಲಾಗಿತ್ತು. ಹೀಗಾಗಿ 'ಅತ್ಯಂತ ಕಳಪೆ' ಎಂದು ಪರಿಗಣಿಸಲಾಗಿತ್ತು ಎಂದು ತಿಳಿಸಿದೆ.

ಉಳಿದಂತೆ ಮಥುರಾ ರಸ್ತೆಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 397(ಎಕ್ಯೂಐ) ನಲ್ಲಿ ಅತ್ಯಧಿಕವಾಗಿದೆ, ಅಯಾನಗರ್ ಮತ್ತು ದೆಹಲಿ ವಿಶ್ವವಿದ್ಯಾನಿಲಯವು 332, ಪೂಸಾ 324, ಲೋಧಿ ರಸ್ತೆ 319 ಹಾಗೂ ಐಜಿಐ ವಿಮಾನ ನಿಲ್ದಾಣ 317ರಷ್ಟು ಗಾಳಿಯ ಗುಣಮಟ್ಟ ದಾಖಲಾಗಿದೆ. ಮಂಗಳವಾರವೂ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’ ಪ್ರಮಾಣದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಎಸ್ಎಎಫ್ಎಆರ್ ಮುನ್ಸೂಚನೆ ನೀಡಿದೆ.

ಸೋಮವಾರ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಲಘುವಾಗಿ ಮಳೆಯಾಗಲಿದೆ. ಮಂಗಳವಾರದಿಂದ ಗುರುವಾರದವರೆಗೆ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ. ಮುಂದಿನ ಐದು ದಿನಗಳಲ್ಲಿ ವಾಯುವ್ಯ ಮತ್ತು ಮಧ್ಯ ಭಾರತದ ಬಹುತೇಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಮೂರು ದಿನಗಳಲ್ಲಿ ಪೂರ್ವ ಭಾರತದ ಹಲವು ಪದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ದೆಹಲಿ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ಪ್ರಮಾಣದಲ್ಲಿ ದಾಖಲಾಗುತ್ತಿರುವುದು ಅಲ್ಲಿನ ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೈಗಾರಿಕೆಗಳಿಂದ ಬಿಡುಗಡೆಯಾಗುವ ಅನಿಲಗಳು ವಾತಾವರಣದ ಗಾಳಿ ಕಲುಷಿತಗೊಳ್ಳಲು ಕಾರಣವಾಗಿದೆ. ದೇಶದ ಅತ್ಯಂತ ಮಾಲಿನ್ಯಕಾರಕ ನಗರ ಎಂಬ ಕುಖ್ಯಾತಿಗೆ ದೆಹಲಿ ಗುರಿಯಾಗಿದೆ.

ಇದನ್ನು ಓದಿ: ತಮಿಳುನಾಡಿನಲ್ಲಿ ಟಿವಿ ಚಾನೆಲ್ ಆರಂಭಿಸಲಿರುವ ಬಿಜೆಪಿ: ಅಣ್ಣಾಮಲೈ ಉಸ್ತುವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.