ಬೆಂಗಳೂರು: ಚುನಾವಣಾ ಬಾಂಡ್ ಕುರಿತು ಸಮಗ್ರ ಮಾಹಿತಿ ನೀಡುವಂತೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ತಾಕೀತು ಮಾಡಿದ್ದು, ಈ ವಿಷಯ ಮತ್ತೆ ಚರ್ಚೆಯ ಕಾವು ಪಡೆದುಕೊಂಡಿದೆ.

ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡುವ ಚುನಾವಣಾ ಬಾಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯ.

ಚುನಾವಣಾ ಬಾಂಡ್ ಕುರಿತ ಮಾಹಿತಿಯನ್ನು ಮಾರ್ಚ್ 12ರೊಳಗೆ ಚುನಾವಣಾ ಆಯೋಗಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇದಕ್ಕೆ ಜೂನ್ 30ರವರೆಗೂ ಸಮಯ ಕೋರಿದ್ದ ಎಸ್‌ಬಿಐ ಮನವಿಯನ್ನು ತಳ್ಳಿ ಹಾಕಿದ್ದ ಸುಪ್ರೀಂ ಕೋರ್ಟ್, ಸೂಚಿಸಿದ ದಿನಾಂಕದಂದೇ ನೀಡುವಂತೆ ತಾಕೀತು ಮಾಡಿತ್ತು. ಅದರಂತೆಯೇ ಎಸ್‌ಬಿಐ ಮಾರ್ಚ್ 12ರಂದು ಮಾಹಿತಿ ನೀಡಿದೆ. ಆ ಮಾಹಿತಿಯನ್ನು ಚುನಾವಣಾ ಆಯೋಗವು ತಮ್ಮ ಅಂತರ್ಜಾಲ ಪುಟದಲ್ಲಿ ಪ್ರಕಟಿಸಿದೆ.

2019ರ ಏ. 12ರಿಂದ ನಗದೀಕರಣಗೊಂಡಿರುವ ಬಾಂಡ್‌ಗಳ ವಿವರಗಳನ್ನು ಎಸ್‌ಬಿಐ ಆಯೋಗಕ್ಕೆ ಸಲ್ಲಿಸಿದೆ. ಯೋಜನೆ ಆರಂಭದಿಂದ ಇಲ್ಲಿಯವರೆಗೆ ₹16,518.10 ಕೋಟಿ ಮೊತ್ತದ ಬಾಂಡ್‌ಗಳನ್ನು ವಿತರಿಸಿದೆ ಎಂದು ತಿಳಿಸಿದೆ.

ಆದರೆ, ಆ ಮಾಹಿತಿಯು 2019ರ ಏಪ್ರಿಲ್ 12ರಿಂದ ಬಾಂಡ್ ರದ್ದುಗೊಳ್ಳುವ ಅವಧಿವರೆಗಿನ (2024ರ ಫೆಬ್ರುವರಿ 15) ಅವಧಿಯದ್ದಾಗಿತ್ತು. ಈಗ ಚುನಾವಣಾ ಆಯೋಗ ಬಿಡುಗಡೆ ಮಾಡಿರುವುದು ರಾಜಕೀಯ ಪಕ್ಷಗಳು ಬಾಂಡ್‌ಗಳನ್ನು ನಗದೀಕರಿಸಿಕೊಂಡು ಸಂಗ್ರಹಿಸಿದ ದೇಣಿಗೆ ಕುರಿತ ಮಾಹಿತಿ. ರಾಜಕೀಯ ಪಕ್ಷಗಳು, 2018ರಲ್ಲಿ ಯೋಜನೆ ಆರಂಭವಾದ ದಿನದಿಂದ 2024ರ ಸೆಪ್ಟೆಂಬರ್‌ವರೆಗಿನ ಮಾಹಿತಿಯನ್ನು ಇದುವರೆಗೆ ಹಂಚಿಕೊಂಡಿವೆ. ಆ ವಿವರವನ್ನು ಆಯೋಗ ಭಾನುವಾರ ಬಿಡುಗಡೆ ಮಾಡಿದೆ. ಕೆಲವು ರಾಜಕೀಯ ಪಕ್ಷಗಳು ಬಾಂಡ್ ನಗದೀಕರಿಸಿಕೊಂಡು ದೇಣಿಗೆ ಸಂಗ್ರಹಿಸಿದ ಮಾಹಿತಿಯನ್ನಷ್ಟೇ ಒದಗಿಸಿದ್ದು, ಯಾವ ಮೊತ್ತದ ಬಾಂಡ್‌ಗಳನ್ನು ಯಾವ ಕಂಪನಿಯಿಂದ ಪಡೆಯಲಾಗಿತ್ತು ಎಂಬ ಮಾಹಿತಿ ನೀಡಿಲ್ಲ.

ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಯಾವುದೇ ಮಾಹಿತಿಯನ್ನು ಮುಚ್ಚಿಡುವಂತಿಲ್ಲ. ಎಲ್ಲವನ್ನೂ ಬಹಿರಂಗಗೊಳಿಸಿ ಎಂದು ಎಸ್‌ಬಿಐಗೆ ತಾಕೀತು ಮಾಡಿದೆ.

ಈ ಮಾಹಿತಿಗಳನ್ನೊಳಗೊಂಡಂತೆ ಚುನಾವಣಾ ಬಾಂಡ್‌ನೊಂದಿಗೆ ಜೋಡಣೆಯಾಗಿರುವ ಪ್ರತ್ಯೇಕ ಆಲ್ಫಾ ನ್ಯೂಮರಿಕ್ ಸಂಖ್ಯೆಯನ್ನು ನೀಡುವುದು ಕಡ್ಡಾಯ ಎಂದಿದೆ.

ಹಾಗಿದ್ದರೆ ಏನಿದು ಆಲ್ಫಾ ನ್ಯೂಮರಿಕ್ ಸಂಖ್ಯೆ...?

ಚುನಾವಣಾ ಬಾಂಡ್ ವಿತರಣೆಯ ಹಕ್ಕುಗಳನ್ನು ಹೊಂದಿರುವ ಎಸ್‌ಬಿಐ ಈ ಬಾಂಡುಗಳ ವಿತರಣೆಗೆ ಒಂದು ನಿರ್ದಿಷ್ಟವಾದ ಆಲ್ಫಾ ನ್ಯೂಮರಿಕ್ ಸಂಖ್ಯೆಯೊಂದನ್ನು ನೀಡುತ್ತದೆ. ಈ ಸಂಖ್ಯೆಯು ಬಾಂಡ್ ಖರೀದಿಸುವ ವ್ಯಕ್ತಿ ಹಾಗೂ ಆ ಹಣವನ್ನು ಪಡೆಯುವ ಪಕ್ಷಗಳ ನಡುವಿನ ಅತಿ ಮುಖ್ಯ ಕೊಂಡಿಯಾಗಿದೆ. ಈ ಸಂಖ್ಯೆ ಬರಿಗಣ್ಣಿಗೆ ಕಾಣುವಂತದ್ದಲ್ಲ. ಭದ್ರತೆಗಾಗಿ ಬಾಂಡ್ ಮೇಲೆ ಸುರಕ್ಷತಾ ಪಟ್ಟಿ ಹೊಂದಿರುವ ಇದನ್ನು ಓದಲು ಅತಿನೇರಳೆ ಕಿರಣ ಹಾಯಿಸಬೇಕಿರುವುದು ಕಡ್ಡಾಯ.

ಈ ಆಲ್ಫಾ ನ್ಯೂಮರಿಕ್ ಸಂಖ್ಯೆಯ ಬಳಕೆಯು ಪಾರದರ್ಶಕತೆಗೆ ಅತ್ಯಂತ ಅಗತ್ಯ. ಇದು ಬಹಿರಂಗಗೊಂಡರೆ, ದೇಣಿಗೆ ನೀಡಿದವರು ಹಾಗೂ ಸ್ವೀಕರಿಸಿದವರ ಮಾಹಿತಿ ಸುಲಭವಾಗಿ ಸಿಗಲಿದೆ. ಚುನಾವಣಾ ಪ್ರಕ್ರಿಯೆಯ ಘನತೆ ಎತ್ತಿ ಹಿಡಿಯಲು ಮತ್ತು ರಾಜಕೀಯ ಪಕ್ಷಗಳ ಹೊಣೆಗಾರಿಕೆಯನ್ನು ಖಾತ್ರಿಪಡಿಸಲು ಇದು ಅತಿಮುಖ್ಯ.

ಸುಪ್ರೀಂ ಕೋರ್ಟ್‌ನ ಈ ಹಿಂದಿನ ಆದೇಶದಂತೆ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಮಾಹಿತಿಯನ್ನು ಎಸ್‌ಬಿಐ ಚುನಾವಣಾ ಆಯೋಗಕ್ಕೆ ನೀಡಿತ್ತು. ಅದರಲ್ಲಿ ಆಲ್ಫಾ ನ್ಯೂಮರಿಕ್ ಸಂಖ್ಯೆಯೂ ಇತ್ತು. ಆದರೆ ಇದನ್ನು ನೀಡುವಲ್ಲಿ ವಿಳಂಬ ಮಾಡಿತ್ತು.

‘ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನೂ ಎಸ್‌ಬಿಐ ಹಂಚಿಕೊಳ್ಳಬೇಕು. ಅದರಲ್ಲಿ ಆಯ್ದ ಮಾಹಿತಿಯನ್ನಷ್ಟೇ ನೀಡುವಂತಿಲ್ಲ’ ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

ಎಸ್‌ಬಿಐ ಪ್ರತಿನಿಧಿಸುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಮಾಹಿತಿ ನೀಡುವ ಕುರಿತು ನ್ಯಾಯಾಲಯಕ್ಕೆ ಖಾತ್ರಿ ನೀಡಿದರು. ಅಗತ್ಯವಿದ್ದರೆ ಚುನಾವಣಾ ಬಾಂಡ್ ಜತೆ ಜೋಡಣೆಯಾಗಿರುವ ಸಂಖ್ಯೆಗಳನ್ನೂ ನೀಡಲಿದೆ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.