ಪಟ್ನಾ: ತನ್ನನ್ನು ದೇವರು ಕಳಿಸಿದ್ದಾನೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ವ್ಯಂಗ್ಯ ಮಾಡಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಜೂನ್ 4ರ ನಂತರ ‘ಇಂಡಿಯಾ’ ಕೂಟವು ಸರ್ಕಾರ ರಚಿಸಲಿದೆ ಎಂದು ಪ್ರತಿಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೋದಿ ಅವರು ತಮ್ಮನ್ನು ದೇವರ ಅವತಾರ ಎಂದು ಕರೆದುಕೊಳ್ಳುತ್ತಾರೆ. ತಾವು ಜೈವಿಕವಾಗಿ ಜನಿಸಿಲ್ಲ ಎನ್ನುತ್ತಾರೆ. ಫಲಿತಾಂಶ ಶೀಘ್ರದಲ್ಲೇ ತಿಳಿಯಲಿದೆ. ಪ್ರಧಾನಿ ಮೋದಿ ಇನ್ನು ಇರುವುದಿಲ್ಲ. ‘ಇಂಡಿಯಾ’ ಕೂಟವು ಸರ್ಕಾರ ರಚಿಸಲಿದೆ’ ಎಂದು ಹೇಳಿದರು.

‘ಒಂದು ವೇಳೆ ಮೋದಿ ಮೂರನೇ ಅವಧಿಗೆ ಅಧಿಕಾರ ಹಿಡಿದರೆ, ಅವರು ಸಂವಿಧಾನವನ್ನು ಬದಲಿಸುತ್ತಾರೆ ಮತ್ತು ಮೀಸಲಾತಿ ಅಂತ್ಯಗೊಳಿಸುತ್ತಾರೆ’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.