ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಥರಸ್‌ ಕಾಲ್ತುಳಿತ ಪ್ರಕರಣ: ಬಾಬಾ ಭದ್ರತೆಗೆ ವರ್ಣ ರಂಜಿತ ‘ಖಾಸಗಿ ಸೇನೆ’

Published : 4 ಜುಲೈ 2024, 15:42 IST
Last Updated : 4 ಜುಲೈ 2024, 15:42 IST
ಫಾಲೋ ಮಾಡಿ
Comments

ಲಖನೌ: ಹಾಥರಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯಿಂದಾಗಿ ಸುದ್ದಿಯಲ್ಲಿರುವ ‘ಭೋಲೆ ಬಾಬಾ’ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಕ್ರಿಮಿನಲ್‌ ಪ್ರಕರಣಗಳಿವೆ. ಜೈಲುವಾಸವನ್ನೂ ಅನುಭವಿಸಿದ್ದಾರೆ.

ಈಗ ಅವರ ಕುರಿತು ಮತ್ತಷ್ಟೂ ಮಾಹಿತಿ ಹೊರಬರುತ್ತಿವೆ. ಭೋಲೆ ಬಾಬಾ ನಡೆ ಸುತ್ತಿರುವ ದುಂದು ವೆಚ್ಚದ ಜೀವನ, ತಮಗೆ ಹಾಗೂ ತಮ್ಮ ಆಶ್ರಮಕ್ಕೆ ಭದ್ರತೆ ಒದಗಿಸುವುದಕ್ಕಾಗಿ ‘ವರ್ಣ ರಂಜಿತ ಖಾಸಗಿ ಸೇನೆ’ ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ.

ಬಾಬಾ ತನ್ನ ವೈಯಕ್ತಿಕ ಭದ್ರತೆಗಾಗಿ ‘ವುಮೆನ್ ಬ್ಲ್ಯಾಕ್‌ ಕಮಾಂಡೊ ಬ್ರಿಗೇಡ್’ ಅನ್ನೂ ಹೊಂದಿದ್ದಾರೆ. ಬಾಬಾ ಹಮ್ಮಿಕೊಳ್ಳುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರು ಕುಳಿತುಕೊಳ್ಳುವ ಸ್ಥಳಗಳಲ್ಲಿ ಈ ಮಹಿಳಾ ಕಮಾಂಡೊಗಳನ್ನು ನಿಯೋಜಿಸಲಾಗುತ್ತದೆ.

‘ಕಪ್ಪು ವಸ್ತ್ರಧಾರಿ’ಯಾಗಿರುವ ಈ ಮಹಿಳಾ ಕಮಾಂಡೊಗಳು, ಬಾಬಾ ಕಾರ್ಯಕ್ರಮಗಳಲ್ಲಿ ಭಕ್ತರ ನಡುವೆ ಓಡಾಡುವ ದೃಶ್ಯಗಳಿವೆ ಎನ್ನಲಾಗುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೇವಲ ಕಪ್ಪು ವಸ್ತ್ರ ಧರಿಸಿದ ಕಮಾಂಡೊಗಳಲ್ಲ, ವಿವಿಧ ಬಣ್ಣಗಳ ಬಟ್ಟೆಗಳನ್ನು ತೊಟ್ಟ ‘ಯೋಧ’ರನ್ನು ಒಳಗೊಂಡ ‘ಖಾಸಗಿ ಸೇನೆ’ಯೂ ಇದೆ ಎಂದು ಮೂಲಗಳು ಹೇಳುತ್ತವೆ.

ಬಾಬಾ ಅವರ ‘ಖಾಸಗಿ ಸೇನೆ’ಗಳನ್ನು ‘ನಾರಾಯಣಿ ಸೇನಾ’, ‘ಗರುಡ ಯೋಧ’ ಹಾಗೂ ‘ಹರಿ ವಾಹಕ’ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಕೆಲ ಬ್ರಿಗೇಡ್‌ಗಳ ಸದಸ್ಯರು ಗುಲಾಬಿ ಬಣ್ಣದ ಅಂಗಿ ಮತ್ತು ಪ್ಯಾಂಟ್ ಧರಿಸಿದರೆ, ಇನ್ನೂ ಕೆಲ ಘಟಕಗಳ ಸದಸ್ಯ ಕಂದು ಬಣ್ಣದ ವಸ್ತ್ರ ಧರಿಸುತ್ತಾರೆ. 

ಕಾರ್ಯಕ್ರಮಗಳಲ್ಲಿ ನಿಯೋಜನೆಗೊಳ್ಳುವ ವಿವಿಧ ‘ಬ್ರಿಗೇಡ್‌’ಗಳ ಸದಸ್ಯರು ಭಕ್ತರು ಪ್ರವೇಶಿಸುವ ಮತ್ತು ನಿರ್ಗಮಿಸುವ ದ್ವಾರಗಳನ್ನು ನಿಯಂತ್ರಿಸುತ್ತಾರೆ.

‘ಭಕ್ತರು ಕಾರ್ಯಕ್ರಮದ ವಿಡಿಯೊ ಚಿತ್ರೀಕರಣ ಮಾಡದಂತೆ ಇವರು ತಡೆಯುತ್ತಾರೆ. ಮಂಗಳವಾರ ಉಂಟಾದ ಕಾಲ್ತುಳಿತವನ್ನು ಚಿತ್ರೀಕರಿಸಲು ಮುಂದಾದ ಕೆಲವರತ್ತ ಈ ಕಮಾಂಡೊಗಳು ಲಾಠಿ ಬೀಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳುತ್ತಾರೆ.

‘ಜನರು ಮತ್ತು ವಾಹನಗಳ ದಟ್ಟಣೆ ನಿಯಂತ್ರಣ, ಕಾರ್ಯಕ್ರಮಗಳಲ್ಲಿ ನೀರು, ಆಹಾರ ಪೂರೈಕೆ ಉಸ್ತುವಾರಿ ಸೇರಿದಂತೆ ಬಾಬಾ ಅವರ ಕಾರ್ಯಕ್ರಮಗಳ ಪ್ರತಿಯೊಂದು ಕಾರ್ಯವನ್ನು ಈ ಖಾಸಗಿ ಸೇನೆಗಳು ನೋಡಿಕೊಳ್ಳುತ್ತವೆ’ ಎಂದೂ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT