ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Asia Rugby Sevens: ಬೆಳ್ಳಿ ಗೆದ್ದ ಭಾರತದ ಮಹಿಳೆಯರ ತಂಡ

Published : 6 ಅಕ್ಟೋಬರ್ 2024, 8:10 IST
Last Updated : 6 ಅಕ್ಟೋಬರ್ 2024, 8:10 IST
ಫಾಲೋ ಮಾಡಿ
Comments

ಮುಂಬೈ: ನೇಪಾಳದ ಕಠ್ಮಂಡುವಿನಲ್ಲಿ ನಡೆದ ಏಷ್ಯಾ ರಗ್ಬಿ ಎಮಿರೇಟ್ಸ್ ಸೆವೆನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತದ ಮಹಿಳೆಯರ ರಗ್ಬಿ ತಂಡವು ಫಿಲಿಪ್ಪೀನ್ಸ್‌ ಎದುರು 5-7 ಅಂತರದಲ್ಲಿ ಸೋತು ಬೆಳ್ಳಿ ಗೆದ್ದುಕೊಂಡಿತು.

ಶಿಖಾ ಯಾದವ್ ನೇತೃತ್ವದ ತಂಡವು ಸೆಮಿಫೈನಲ್‌ನಲ್ಲಿ ಗುವಾಮ್‌ ತಂಡವನ್ನು 24-7 ಅಂತರದಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಲುಪುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಲೀಗ್ ಸುತ್ತಿನಲ್ಲಿ, ಭಾರತವು ಶ್ರೀಲಂಕಾವನ್ನು 29-10 ಮತ್ತು ಇಂಡೋನೇಷ್ಯಾವನ್ನು 17-10ರಿಂದ ಸೋಲಿಸಿತ್ತು.

ತಂಡದ ಬೆಳ್ಳಿ ಪದಕ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ ಭಾರತದ ನಾಯಕಿ ಶಿಖಾ ಅವರು, ಮುಂದಿನ ಸ್ಪರ್ಧೆಗಳಲ್ಲಿ ಚಿನ್ನಕ್ಕಾಗಿ ಶ್ರಮಿಸುವುದಾಗಿ ಹೇಳಿದ್ದಾರೆ, ಇದೇವೇಳೆ, ತಮ್ಮ ತರಬೇತುದಾರ ವೈಸಾಲೆ ಸೆರೆವಿ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.

‘ಮತ್ತೆ ಬೆಳ್ಳಿ ಗೆದ್ದಿರುವುದು ವಿಶೇಷವಾಗಿದೆ. ಆದರೆ, ಈ ಪದಕದ ಬಣ್ಣವನ್ನು ಬದಲಿಸಲು ಪ್ರತಿಯೊಬ್ಬ ಆಟಗಾರ್ತಿಯೂ ತಮ್ಮ ಶ್ರಮ ಮುಂದುವರಿಸುತ್ತಾರೆ. ತಂಡವು ಅಸಾಧಾರಣ ತಂಡಗಳ ವಿರುದ್ಧ ಆಡಿದ ರೀತಿ ಮತ್ತು ಅಂತಹ ಉನ್ನತ ಹಂತದಲ್ಲಿ ಶ್ರೇಷ್ಠ ಆಟವನ್ನು ಪ್ರದರ್ಶಿಸಿದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇದು ತಂಡಕ್ಕೆ ವರ್ಷದ ಪ್ರಮುಖ ಕೂಟವಾಗಿತ್ತು. ನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT