ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಡಳಿತ ವೈಖರಿಗೆ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್10ಕ್ಕೆ ಶೂನ್ಯ ಅಂಕ ನೀಡಿದ್ದು, ಬಿಜೆಡಿ ಪಕ್ಷದ ಭ್ರಷ್ಟಾಚಾರ ಮಿತಿಮೀರಿದೆ ಎಂದು ಹೇಳಿವೆ.

ಕಾರ್ಯಕ್ರಮವೊಂದರಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಮೋದಿ ಸರ್ಕಾರದ ಆಡಳಿತವನ್ನು ಶ್ಲಾಘಿಸಿ 10ಕ್ಕೆ 8 ಅಂಕಗಳನ್ನು ನೀಡಿದ್ದರು. ಬಡತನ ನಿರ್ಮೂಲನೆ, ವಿದೇಶಿ ನಿಯಮಗಳು ಸೇರಿದಂತೆ ಮೋದಿ ಸಂಪುಟ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಪ್ರಧಾನಿ ಮೋದಿ ಅವರ ಆಡಳಿತವು ಭ್ರಷ್ಟಚಾರರಹಿತವಾಗಿದ್ದು 10ಕ್ಕೆ 10 ಅಂಕಗಳನ್ನು ನೀಡಬಹುದು. ಆದರೆ, ನವೀನ್ ಪಟ್ನಾಯಕ್ ಆಡಳಿತ ಒಟ್ಟಾರೆ ವೈಫಲ್ಯ ಕಂಡಿದ್ದು, 10ಕ್ಕೆ ಸೊನ್ನೆ ಅಂಕ ನೀಡಬಹುದು‘ ಎಂದು ಬಿಜೆಪಿ ಪಕ್ಷದ ನಾಯಕ ಜಯನಾರಾಯಣ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತಕ್ಕೆ ಶೂನ್ಯ ಅಂಕ ನೀಡುವುದು ಉತ್ತಮ ಎಂದು ಕಾಂಗ್ರೆಸ್ ಶಾಸಕ ತಾರಾಪ್ರಸಾದ್ ಹೇಳಿದ್ದಾರೆ.

ನವೀನ್ ಪಟ್ನಾಯಕ್ ಅವರ ಆಡಳಿತಕ್ಕೆ ಮಿಶ್ರಾ ಹಾಗೂ ಪ್ರಸಾದ್ ಅವರು ಅಂಕ ನೀಡುವ ಅಗತ್ಯವಿಲ್ಲ. ಒಡಿಶಾ ಜನರೇ ಅವರನ್ನು ಐದು ಬಾರಿ ಮುಖ್ಯಮಂತ್ರಿ ಮಾಡಿ ಉತ್ತಮ ಅಂಕ ನೀಡಿದ್ದಾರೆಂದು ಬಿಜೆಡಿ ಪಕ್ಷದ ಶಾಸಕ ಶಶಿ ಭೂಷಣ್ ಬೆಹೆರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.