ನವದೆಹಲಿ: ದ್ವಿಪಕ್ಷೀಯ ಸೇನಾ ಸಹಕಾರ ವೃದ್ಧಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಅವರು ಒಮನ್ಗೆ ತೆರಳಿದ್ದಾರೆ.

ಮೂರು ದಿನಗಳ ಪ್ರವಾಸ ಇದಾಗಿದ್ದು, ಭಾನುವಾರ ಅವರು ಮಸ್ಕತ್ನ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಒಮನ್ ರಾಯಲ್ ನೇವಿಯ ರೇರ್ ಅಡ್ಮಿರಲ್ ಸೈಫ್ ಬಿನ್ ನಾಸಿರ್ ಬಿನ್ ಮೊಹ್ಸಿನ್ ಅಲ್– ರಾಹ್ಬಿ ಅವರು ಹರಿಕುಮಾರ್ ಅವರನ್ನು ಬರಮಾಡಿಕೊಂಡರು.

‘ಹರಿಕುಮಾರ್ ಅವರು ಒಮನ್ನ ಸೇನಾ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಜೊತೆಗೆ, ಅಲ್ಲಿಯ ಸೇನಾ ತರಬೇತಿ ಸಂಸ್ಥೆಗಳಲ್ಲಿ ನಡೆಯಲಿರುವ ಚರ್ಚೆಗಳಲ್ಲಿ ಭಾಗಿಯಾಗಲಿದ್ದಾರೆ’ ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿದೆ.

ಹರಿಕುಮಾರ್ ಅವರು ಒಮನ್ಗೆ ತೆರಳಿರುವ ವೇಳೆಯೇ, ದೇಶಿ ನಿರ್ಮಾಣದ ‘ಐಎನ್ಎಸ್ ವಿಶಾಕಪಟ್ಟಣ’ ಒಮನ್ನ ಪೋರ್ಟ್ ಸುಲ್ತಾನ್ ಖಬೂಸ್ಗೆ ಭಾನುವಾರ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.