ಬೆಂಗಳೂರು: ಗೆಳೆಯನಿಗಾಗಿ ಗಡಿ ನುಸುಳಿ ಭಾರತಕ್ಕೆ ಬಂದು ಸುದ್ದಿಯಾಗಿದ್ದ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಗರ್ಭಿಣಿಯಾಗಿದ್ದಾರೆ.

ಈ ಕುರಿತು ಇಂಡಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ.

ನಾನು ನನ್ನ ಪತಿ ಸಚಿನ್ ಮಗುವಿಗೆ ತಾಯಿಯಾಗುತ್ತಿದ್ದು, 2024 ಹೊಸ ವರ್ಷ ನಮಗೆ ಹೊಸ ಸಂತಸ ತಂದಿದೆ ಎಂದು ಇಂಡಿಯಾ ಟುಡೇ ವಾಹಿನಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ಸೀಮಾ ಹೈದರ್ ಅವರು ಪಬ್‌ಜಿ (PubG) ಆನ್‌ಲೈನ್ ಗೇಮ್ ಮೂಲಕ ಭಾರತದ ಸಚಿನ್ ಮೀನಾ ಅವರಿಗೆ ಪರಿಚಿತರಾಗಿದ್ದರು. ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಬಳಿಕ 2023ರ ಮೇ ತಿಂಗಳಲ್ಲಿ ತಮ್ಮ ನಾಲ್ವರು ಮಕ್ಕಳೊಂದಿಗೆ ಉತ್ತರಪ್ರದೇಶದ ನೊಯ್ಡಾಕ್ಕೆ ಬಂದಿದ್ದ ಸೀಮಾ ಅವರು ಸಚಿನ್ ಅವರನ್ನು ವಿವಾಹವಾಗಿದ್ದರು.

ವೀಸಾ ಇಲ್ಲದೆ ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿದ್ದ ಸೀಮಾ ಅವರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದರು.

ಸೀಮಾ ಅವರನ್ನು ಜುಲೈ 4ರಂದು ಪೊಲೀಸರು ಬಂಧಿಸಿದ್ದರು. ಸ್ಥಳೀಯ ನ್ಯಾಯಾಲಯ ಅವರಿಗೆ ಜುಲೈ 7ರಂದು ಜಾಮೀನು ನೀಡಿತ್ತು.

ಗಡಿ ದಾಟಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
.ಮೋದಿ, ಶಾ, ಭಾಗವತ್ಗೆ ರಾಖಿ ಕಳುಹಿಸಿದ ಪಾಕ್ ಪ್ರಜೆ ಸೀಮಾ ಹೈದರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.