ನವದೆಹಲಿ: ದೇಶದಲ್ಲಿ ಸೈಬರ್ ಅಪರಾಧಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರದ ಗೃಹ ಸಚಿವಾಲಯ ಆರಂಭಿಸಿರುವ ಭಾರತದ ಸೈಬರ್ ಅಪರಾಧಗಳ ಸಮನ್ವಯ ಕೇಂದ್ರದ(ಐ4ಸಿ) ರಾಷ್ಟ್ರೀಯ ಬ್ರಾಂಡ್ ಅಬಾಸಿಡರ್ ಆಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರನ್ನು ನೇಮಕ ಮಾಡಲಾಗಿದೆ.

ಕಿರಿಕ್ ಪಾರ್ಟಿ, ಪುಷ್ಪ, ಡಿಯರ್ ಕಾಮ್ರೇಡ್, ಅನಿಮಲ್ ಮುಂತಾದ ಹಿಟ್ ಚಿತ್ರಗಳ ಮೂಲಕ ಹೆಸರುವಾಸಿಯಾಗಿರುವ ರಶ್ಮಿಕಾ ಅವರ ಡೀಪ್ಫೇಕ್ ವಿಡಿಯೊವೊಂದು ಈ ವರ್ಷದ ಆರಂಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ನಮ್ಮ ಆನ್ಲೈನ್ ಜಗತ್ತಿನ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಇದು ಸೂಕ್ತ ಸಮಯ ಎಂದು ಅವರು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಈ ಕುರಿತಂತೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ರಶ್ಮಿಕಾ, ‘ಕೆಲ ತಿಂಗಳ ಹಿಂದೆ ನನ್ನ ಡೀಪ್ಫೇಕ್ ವಿಡಿಯೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಆ ಘಟನೆ ಬಳಿಕ ಸೈಬರ್ ಅಪರಾಧಗಳ ವಿರುದ್ಧ ನಿಲುವು ತೆಗೆದುಕೊಳ್ಳಲು ಮತ್ತು ಆ ಕುರಿತಂತೆ ಜಾಗೃತಿ ಮೂಡಿಸಲು ನಿರ್ಧರಿಸಿದೆ. ಇದಕ್ಕೆ ಭಾರತ ಸರ್ಕಾರದ ಸಾಥ್ ಸಿಕ್ಕಿರುವುದನ್ನು ಘೋಷಿಸಲು ಅತ್ಯಂತ ಸಂತೋಷವಾಗುತ್ತಿದೆ. ಕೇಂದ್ರದ ಗೃಹ ಸಚಿವಾಲಯ ಆರಂಭಿಸಿರುವ ಭಾರತದ ಸೈಬರ್ ಅಪರಾಧಗಳ ಸಮನ್ವಯ ಕೇಂದ್ರದ(ಐ4ಸಿ) ರಾಷ್ಟ್ರೀಯ ಬ್ರಾಂಡ್ ಅಬಾಸಿಡರ್ ಆಗಿ ನನ್ನನ್ನು ನೇಮಕ ಮಾಡಲಾಗಿದೆ. ಸೈಬರ್ ಕ್ರಿಮಿನಲ್ಗಳು ಭಿನ್ನ ರೀತಿಯಲ್ಲಿ ಪ್ರತಿಯೊಬ್ಬರನ್ನೂ ಟಾರ್ಗೆಟ್ ಮಾಡುತ್ತಾರೆ. ಕೇವಲ ಜಾಗೃತರಾಗಿದ್ದರೆ ಸಾಲದು. ಇವುಗಳಿಂದ ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳಬೇಕು. ಅದನ್ನು ನಿಗ್ರಹಿಸುವತ್ತಲೂ ಗಮನ ಹರಿಸಬೇಕಿದೆ. ಐ4ಸಿ ಅಂಬಾಸಿಡರ್ ಆಗಿ ನಾನು ನಿಮ್ಮನ್ನು ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿರಿಸುತ್ತಿರುತ್ತೇನೆ. ಎಲ್ಲರೂ ಒಟ್ಟಾಗಿ ಭಾರತವನ್ನು ಸೈಬರ್ ಅಪರಾಧಗಳಿಂದ ಮುಕ್ತಗೊಳಿಸೋಣ’ಎಂದು ಹೇಳಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ 4.42 ಕೋಟಿ ಅನುಯಾಯಿಗಳು, ಎಕ್ಸ್ನಲ್ಲಿ 49 ಲಕ್ಷ ಅನುಯಾಯಿಗಳನ್ನು ಹೊಂದಿರುವ ರಶ್ಮಿಕಾ, 1930ಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಸೈಬರ್ ಅಪರಾಧಗಳ ಬಗ್ಗೆ ವರದಿ ಮಾಡುವಂತೆ ಮನವಿ ಮಾಡಿದ್ದಾರೆ.

'ಐ4ಸಿಯ ರಾಷ್ಟ್ರೀಯ ಬ್ರಾಂಡ್ ಅಂಬಾಸಿಡರ್ ಆಗಿ ಪ್ಯಾನ್ ಇಂಡಿಯಾ ತಾರೆ ರಶ್ಮಿಕಾ ಅವರನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಾವು ಭಾರತದ ಡಿಜಿಟಲ್ ಲ್ಯಾಂಡ್ಸ್ಕೇಪ್ ಅನ್ನು ಬಲಪಡಿಸಲು ಒಟ್ಟಾಗುತ್ತಿದ್ದೇವೆ, ನಾವು ಸೈಬರ್ ಅಪರಾಧಗಳನ್ನು ನೇರ ನಿಭಾಯಿಸುತ್ತೇವೆ’ಎಂದು ಕೇಂದ್ರದ ಗೃಹ ಸಚಿವಾಲಯ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಸೈಬರ್ ಅಪರಾಧವನ್ನು ಸಂಘಟಿತ ಮತ್ತು ಸಮಗ್ರ ರೀತಿಯಲ್ಲಿ ನಿರ್ವಹಿಸುವಾಗ ಕಾನೂನು ಜಾರಿ ಸಂಸ್ಥೆಗಳಿಗೆ ಒಂದು ನಿರ್ದಿಷ್ಟ ಚೌಕಟ್ಟು ಮತ್ತು ಪರಿಸರ ವ್ಯವಸ್ಥೆಯನ್ನು ಒದಗಿಸಲು ಐ4ಸಿ ಅನ್ನು ಗೃಹ ಸಚಿವಾಲಯ ಸ್ಥಾಪಿಸಿದೆ.

ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೂಲ್’ಡಿಸೆಂಬರ್ 6ರಂದು ತೆರೆಗೆ ಬರಲಿದೆ.
.ಡೀಪ್ಫೇಕ್ ವಿಡಿಯೊ: ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.