ನವದೆಹಲಿ (ಪಿಟಿಐ): ಜನವರಿ 26ರಂದು ಕರ್ತವ್ಯಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾರತೀಯ ವಾಯುಪಡೆಯ ತಂಡವನ್ನು ಸ್ಕ್ವಾಡ್ರನ್ ಲೀಡರ್ ರಶ್ಮಿ ಠಾಕೂರ್ ಮುನ್ನಡೆಸಲಿದ್ದಾರೆ.

ಅದೇ ದಿನ ನಡೆಯುವ ವಿಮಾನಗಳ ವೈಮಾನಿಕ ಪ್ರದರ್ಶನದಲ್ಲಿ ವಾಯುಪಡೆಯ 15 ಮಹಿಳಾ ಪೈಲಟ್‌ಗಳು ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಯುಪಡೆಯ ತಂಡದ ಜೊತೆಗೆ ಮೂರು ಸೇನಾಪಡೆಗಳ ಅಗ್ನಿವೀರರ (ಮಹಿಳೆಯರು) ತಂಡವು ಪಥಸಂಚಲನದಲ್ಲಿ ಭಾಗವಹಿಸಲಿದೆ. ಒಟ್ಟು 48 ಮಹಿಳಾ ಅಗ್ನಿವೀರರು ಪಾಲ್ಗೊಳ್ಳಲಿದ್ದು, ಫ್ಲೈಟ್ ಲೆಫ್ಟಿನೆಂಟ್ ಸೃಷ್ಟಿ ವರ್ಮಾ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಾರಿಯ ವಾಯುಪಡೆಯ ಸ್ತಬ್ಧಚಿತ್ರದ ವಿಷಯವು ‘ಭಾರತೀಯ ವಾಯುಪಡೆ: ಸಕ್ಷಂ, ಸಶಕ್ತ, ಆತ್ಮನಿರ್ಭರ’ವಾಗಿದ್ದು, ಫೈಟ್ ಲೆಫ್ಟಿನೆಂಟ್ ಅನನ್ಯಾ ಶರ್ಮಾ ಮತ್ತು ಫ್ಲೈಯಿಂಗ್ ಅಧಿಕಾರಿ ಆಸ್ಮಾ ಶೇಖ್ ಅವರು ಸ್ತಬ್ಧಚಿತ್ರದಲ್ಲಿ ಇರಲಿದ್ದಾರೆ ಎಂದು ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.