ನವದೆಹಲಿ: ಭಾರತೀಯ ಪ್ರಜೆಗಳನ್ನು ರಷ್ಯಾ-ಉಕ್ರೇನ್ ಯುದ್ಧ ವಲಯಕ್ಕೆ ತಳ್ಳಿದ ಮಾನವ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಷ್ಯಾದ ರಕ್ಷಣಾ ಸಚಿವಾಲಯದ ಗುತ್ತಿಗೆ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳದ ತಿರುವನಂತಪುರದಲ್ಲಿ ಅರುಣ್ ಮತ್ತು ಯೇಸುದಾಸ್ ಜೂನಿಯರ್ ಅಲಿಯಾಸ್ ಪ್ರಿಯಾನ್ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಇತರ ಇಬ್ಬರು ಆರೋಪಿಗಳಾದ ರಷ್ಯಾದ ರಕ್ಷಣಾ ಸಚಿವಾಲಯದ ಗುತ್ತಿಗೆ ಸಿಬ್ಬಂದಿ ನಿಜಿಲ್ ಜೋಬಿ ಬೆನ್ಸಮ್ ಮತ್ತು ಮುಂಬೈ ನಿವಾಸಿ ಆ್ಯಂಟನಿ ಮೈಕೆಲ್ ಆಂಥೋನಿ ಅವರನ್ನು ಏಪ್ರಿಲ್ 24ರಂದು ಬಂಧಿಸಲಾಗಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆನ್ಸಮ್ ಮತ್ತು ಆ್ಯಂಟನಿ ಮೈಕೆಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಬೆನ್ಸಮ್ ರಷ್ಯಾದ ರಕ್ಷಣಾ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ರಷ್ಯಾದ ಸೈನ್ಯದಲ್ಲಿ ಭಾರತೀಯ ಪ್ರಜೆಗಳ ನೇಮಕಾತಿಗೆ ಅನುಕೂಲವಾಗುವಂತೆ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಟ್ವರ್ಕ್ನ ಪ್ರಮುಖ ಸದಸ್ಯನಾಗಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೈಕೆಲ್ ಆಂಥೋನಿಯು ದುಬೈನಲ್ಲಿ ನೆಲೆಸಿರುವ ಫೈಸಲ್ ಬಾಬಾ ಜತೆಗೂಡಿ ಸಂತ್ರಸ್ತರಿಗೆ ರಷ್ಯಾಕ್ಕೆ ಪ್ರಯಾಣಿಸಲು ವೀಸಾ ಪ್ರಕ್ರಿಯೆ ಮತ್ತು ವಿಮಾನ ಟಿಕೆಟ್ ಕಾಯ್ದಿರಿಸಲು ಅನುಕೂಲ ಮಾಡುತ್ತಿದ್ದರು ಎಂದು ಸಿಬಿಐ ಹೇಳಿಕೆ ನೀಡಿದೆ.

ಅರುಣ್ ಮತ್ತು ಯೇಸುದಾಸ್ ಜೂನಿಯರ್ ಅಲಿಯಾಸ್ ಪ್ರಿಯಾನ್ ಅವರು ಕೇರಳ ಮತ್ತು ತಮಿಳುನಾಡು ಮೂಲದ ಭಾರತೀಯ ಪ್ರಜೆಗಳನ್ನು ರಷ್ಯಾದ ಸೈನ್ಯಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಮಾನವ ಕಳ್ಳಸಾಗಣೆಗೆ ಸಂಬಂಧಿಸಿ 17 ವೀಸಾ ಕನ್ಸಲ್ಟೆನ್ಸಿ ಕಂಪನಿಗಳ ಮಾಲೀಕರು ಮತ್ತು ಏಜೆಂಟರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
.ರಷ್ಯಾ ಸೇನೆಯಲ್ಲಿದ್ದ 10 ಭಾರತೀಯರು ವಾಪಸ್: ರಣ್ಧೀರ್ ಜೈಸ್ವಾಲ್.ಭಾರತೀಯರ ಕರೆ ತರಲು ರಷ್ಯಾ ಮೇಲೆ ಒತ್ತಡ.ಉಕ್ರೇನ್ ಯುದ್ಧದಲ್ಲಿ ರಷ್ಯಾ ಸೇನೆ ಜೊತೆಗಿದ್ದ ತೆಲಂಗಾಣದ ಯುವಕ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.