ನವದೆಹಲಿ: ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆ ಕಾರಣಕ್ಕೆ ಬಿಜೆಪಿಯಿಂದ ಅಮಾನತುಗೊಂಡ ನೂಪುರ್ ಶರ್ಮಾ ಅವರ ಪರವಾಗಿ ಟ್ವೀಟ್ ಮಾಡಿದ್ದಕ್ಕೆ ಜೀವ ಬೆದರಿಕೆಗಳು ಬಂದಿವೆ ಎಂದು ಡಚ್ ಸಂಸದ, ’ಪಾರ್ಟಿ ಫಾರ್ ಫ್ರೀಡಂ’ನ ಮುಖ್ಯಸ್ಥ ಗೀರ್ಟ್ ವೈಲ್ಡರ್ಸ್ ಹೇಳಿದ್ದಾರೆ.

ತಮಗೆ ಬಂದ ಸಂದೇಶಗಳನ್ನು ಅವರು ಸಾಮಾಜಿಕ ಮಾಧ್ಯಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಇದಕ್ಕಾಗಿಯೇ ನಾನು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದು. ನೂರಾರು ಕೊಲೆ ಬೆದರಿಕೆಗಳು ನನಗೆ ಬಂದಿವೆ. ಇವುಗಳು, ನಾನು ಮತ್ತಷ್ಟು ದೃಢವಾಗಿ ಮತ್ತು ಹೆಮ್ಮೆಯಿಂದ ಅವರನ್ನು ಬೆಂಬಲಿಸುವಂತೆ ಮಾಡಿವೆ. ಯಾಕೆಂದರೆ ಕೆಟ್ಟದ್ದು ಎಂದಿಗೂ ಗೆಲ್ಲಲಾರದು.... ಎಂದಿಗೂ...’ ಎಂದು ಗೀರ್ಟ್ ವೈಲ್ಡರ್ಸ್ ಬರೆದುಕೊಂಡಿದ್ದಾರೆ.

ಪ್ರವಾದಿ ಮೊಹಮ್ಮದ್ ಅವರ ಕುರಿತು ಮಾಧ್ಯಮವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಪಕ್ಷದ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಿಜೆಪಿಯು ಪಕ್ಷದಿಂದ ಅಮಾನತುಗೊಳಿಸಿದೆ.

ಏನು ಹೇಳಿದ್ದರು ಗೀರ್ಟ್ ವೈಲ್ಡರ್ಸ್?
‘ನಾನು ಭಾರತೀಯನೂ ಅಲ್ಲ, ಹಿಂದುವೂ ಅಲ್ಲ. ಆದರೆ ನನಗೆ ಒಂದು ವಿಷಯ ಗೊತ್ತು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವುದನ್ನು ಸಮರ್ಥಿಸುವುದು, ಪ್ರವಾದಿ ಬಗ್ಗೆ ಸತ್ಯ ಹೇಳುವುದು ಸರಿಯಲ್ಲ ಎಂಬ ವಾದವೇ ಜಾತ್ಯತೀತತೆಯ ಅರ್ಥ ಆಗಬಾರದು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವ ಸಂದರ್ಭದಲ್ಲಿ ನೂಪುರ್ ಶರ್ಮಾ ಪ್ರತಿಕ್ರಿಯಿಸಿರುವುದು ಸಂಪೂರ್ಣ ಸಮರ್ಥನೀಯ’ ಎಂದು ಗೀರ್ಟ್ ವೈಲ್ಡರ್ಸ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.