ಜೆರುಸಲೇಂ: ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆ ಮಾಡಲು ನಡೆದ ಪ್ರಯತ್ನವು, ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿಯನ್ನು ಹೊಡೆದುರುಳಿಸಲು ನಮಗೆ ಕಾನೂನುಸಮ್ಮತಿ ನೀಡಿದಂತಾಗಿದೆ ಎಂದು ಇಸ್ರೇಲ್ ಗುಪ್ತಚರ ಸಂಸ್ಥೆ 'ಮೊಸ್ಸಾದ್' ಹೇಳಿದೆ.

ಇಸ್ರೇಲ್ ಕರಾವಳಿಯ ಕೆಸರಿಯಾ ನಗರದಲ್ಲಿರುವ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಶನಿವಾರ ಡ್ರೋನ್ ದಾಳಿ ನಡೆದಿತ್ತು.

ಇಸ್ರೇಲ್ನ ಗುಪ್ತಚರ ಮತ್ತು ವಿಶೇಷ ಕಾರ್ಯಾಚರಣೆಗಳ ಸಂಸ್ಥೆ ಮೊಸ್ಸಾದ್ ಈ ಘಟನೆ ಬೆನ್ನಲ್ಲೇ ಪ್ರತಿಕ್ರಿಯಿಸಿದೆ.

'ಪ್ರಧಾನಿ ಹತ್ಯೆಗೆ ನಡೆದಿರುವ ಯತ್ನವು ಖಮೇನಿಯನ್ನು ಹೊಡೆದು ಹಾಕಲು ಸಂಪೂರ್ಣ ಕಾನೂನುಸಮ್ಮತಿ ನೀಡಿದೆ' ಎಂದು ಟ್ವೀಟ್ ಮಾಡುವ ಮೂಲಕ ಇರಾನ್ಗೆ ಎಚ್ಚರಿಕೆ ನಿಡಿದೆ.

ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ನೆತನ್ಯಾಹು ಹತ್ಯೆಗೆ ಯತ್ನಿಸಿದೆ ಎನ್ನಲಾಗಿದೆ. ಆದರೆ, ಹಿಜ್ಬುಲ್ಲಾ ಅಥವಾ ಕಳೆದ ವರ್ಷ ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಹಮಾಸ್ ಸಂಘಟನೆ ಈವರೆಗೆ ಹೊಣೆ ಹೊತ್ತುಕೊಂಡಿಲ್ಲ.

ದಾಳಿ ನಡೆದಿರುವುದನ್ನು ಶನಿವಾರವೇ ಖಚಿತಪಡಿಸಿರುವ ಇಸ್ರೇಲ್ ಸೇನೆ, 'ದಾಳಿ ಆದ ಹೊತ್ತಲ್ಲಿ ಪ್ರಧಾನಿ ಅಥವಾ ಅವರ ಪತ್ನಿ, ನಿವಾಸದಲ್ಲಿ ಇರಲಿಲ್ಲ. ಹಾಗಾಗಿ ಯಾರೊಬ್ಬರೂ ಗಾಯಗೊಂಡಿಲ್ಲ' ಎಂದಿದೆ.

ತಮ್ಮ ಹತ್ಯೆಗೆ ನಡೆದ ದಾಳಿಗೆ ಪ್ರತಿಕ್ರಿಯಿಸಿರುವ ನೆತನ್ಯಾಹು, 'ನನ್ನನ್ನು ಹತ್ಯೆಗೈಯಲು ಹಿಜ್ಬುಲ್ಲಾ ಸಂಘಟನೆ ನಡೆಸಿದ ಪ್ರಯತ್ನವು ಘೋರ ತಪ್ಪು' ಎಂದು ಎಚ್ಚರಿಸಿದ್ದಾರೆ.
.ನನ್ನನ್ನು ಹತ್ಯೆಗೈಯಲು ಹಿಜ್ಬುಲ್ಲಾ ನಡೆಸಿದ ಪ್ರಯತ್ನ 'ಘೋರ ತಪ್ಪು': ನೆತನ್ಯಾಹು.ಸಿನ್ವರ್ ಹತ್ಯೆ ಬೆನ್ನಲ್ಲೇ ನೆತನ್ಯಾಹು ಮನೆ ಗುರಿಯಾಗಿಸಿಕೊಂಡು ಡ್ರೋನ್ ದಾಳಿ.
ಇಸ್ರೇಲ್ ಮೇಲಿನ ದಾಳಿ ಸಮರ್ಥಿಸಿದ್ದ ಖಮೇನಿ
ಇಸ್ರೇಲ್ ಮೇಲೆ ಇರಾನ್ ಸೇನೆ ಕ್ಷಿಪಣಿ ದಾಳಿ ನಡೆಸಿದ್ದನ್ನು 'ಅತ್ಯುತ್ತಮ ಕಾರ್ಯ' ಎಂದು ಖಮೇನಿ ಇತ್ತೀಚೆಗೆ ಶ್ಲಾಘಿಸಿದ್ದರು. 'ಅಗತ್ಯಬಿದ್ದರೆ ಮತ್ತೆ ದಾಳಿ ಮಾಡಲಾಗುವುದು' ಎಂದು ಹೇಳಿದ್ದರು.

ಇರಾನ್ ರಾಜಧಾನಿಯಲ್ಲಿ ಇದೇ ತಿಂಗಳ ಮೊದಲ ಶುಕ್ರವಾರ ನಡೆದ ಪ್ರಾರ್ಥನೆ ವೇಳೆ 40 ನಿಮಿಷ ಪ್ರವಚನ ನೀಡಿದ್ದ ಖಮೇನಿ, 'ಇರಾನ್ ಮತ್ತು ಅದರ ಮಿತ್ರ ರಾಷ್ಟ್ರಗಳು ಇಸ್ರೇಲ್ ವಿರುದ್ಧದ ಹೋರಾಟವನ್ನು ಮುಂದುವರಿಸಲಿವೆ. ಕ್ಷಿಪಣಿ ದಾಳಿಯ ಮೂಲಕ ಸೇನೆಯು ಈ ಭೂ ವಲಯ ಹಾಗೂ ಇಸ್ಲಾಮಿಕ್ ಜಗತ್ತಿಗೆ ನಿರ್ಣಾಯಕವನ್ನು ಸೇವೆ ಸಲ್ಲಿಸಿದೆ' ಎಂದೂ ಪ್ರತಿಪಾದಿಸಿದ್ದರು.
.ಅಗತ್ಯ ಎನಿಸಿದರೆ ಮತ್ತೆ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ: ಅಯತ್ಉಲ್ಲಾ ಅಲಿ ಖಮೇನಿ.ಇಸ್ರೇಲ್ ಮೇಲಿನ ಹಮಾಸ್ ದಾಳಿ ಕಾನೂನಾತ್ಮಕವಾಗಿದೆ: ಇರಾನ್ ನಾಯಕ ಖಮೇನಿ ಸಮರ್ಥನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.