ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಾ ಮಾಜಿ ಪ್ರಧಾನಿ ಲಿ ಕೇಜಿಯಾಂಗ್ ನಿಧನ

Published : 27 ಅಕ್ಟೋಬರ್ 2023, 14:18 IST
Last Updated : 27 ಅಕ್ಟೋಬರ್ 2023, 14:18 IST
ಫಾಲೋ ಮಾಡಿ
Comments

ಬೀಜಿಂಗ್‌ (ಪಿಟಿಐ): ಚೀನಾದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಲಿ ಕೇಜಿಯಾಂಗ್ ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷವಾಗಿತ್ತು. ಚೀನಾದ ಕಮ್ಯುನಿಸ್ಟ್‌ ಪಾರ್ಟಿ (ಸಿಪಿಐ) ಉನ್ನತ ಸ್ಥಾನಕ್ಕೆ ಹಿಂದೊಮ್ಮೆ ಷಿ ಜಿನ್‌ಪಿಂಗ್‌ರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದರು.

ಶಾಂಘೈನಲ್ಲಿದ್ದ ಅವರಿಗೆ ಗುರುವಾರ ರಾತ್ರಿ ತೀವ್ರ ಹೃದಯಾಘಾತವಾಗಿತ್ತು. ಅಗತ್ಯ ಚಿಕಿತ್ಸೆಯನ್ನು ಒದಗಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು ಎಂದು ಚೀನಾದ ಸ್ಥಳೀಯ ಮಾಧ್ಯಮವು ವರದಿ ಮಾಡಿದೆ.

ಸಿಪಿಐ ಪಕ್ಷದಲ್ಲಿ ಎರಡನೇ ಸ್ಥಾನದಲ್ಲಿದ್ದ ಅವರು ಪ್ರಧಾನಿಯಾಗಿ ಮಾರ್ಚ್ 2013 ರಿಂದ ಮಾರ್ಚ್‌ 2023ರವರೆಗೂ ಕಾರ್ಯನಿರ್ವಹಿಸಿದ್ದರು.

ಆರ್ಥಿಕ ತಜ್ಞರಾಗಿಯೂ ಹೆಸರಾಗಿದ್ದ ಅವರು ಚೀನಾದಲ್ಲಿ ದಶಕಗಳ ಕಾಲ ಏರುಗತಿಯಲ್ಲಿದ್ದ ಆರ್ಥಿಕತೆ, ಒಂದು ಹಂತದಲ್ಲಿ ಕುಸಿಯಲು ಆರಂಭಿಸಿದಾಗ ಆಗಿನ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಪ್ರಧಾನಿಯಾಗಿದ್ದ ಆರಂಭದ ವರ್ಷಗಳಲ್ಲಿ ಭಾರತ ಜೊತೆಗಿನ ನೀತಿಗಳನ್ನು ನಿರ್ವಹಣೆ ಮಾಡುತ್ತಿದ್ದರು. ಪ್ರಧಾನಿಯಾದ ಬಳಿಕ ಮೊದಲ ವಿದೇಶ ಪ್ರವಾಸಕ್ಕಾಗಿ ಭಾರತವನ್ನು ಆಯ್ಕೆ ಮಾಡಿಕೊಂಡು, ನವದೆಹಲಿಗೆ ಬಂದಿದ್ದರು. 

ಸಿಪಿಐ ಪಕ್ಷದಲ್ಲಿ ಪ್ರಾಬಲ್ಯ ಹೊಂದಿರುವ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. 2023ರಲ್ಲಿ ಸುದ್ದಿಗೋಷ್ಠಿಯೊಂದರಲ್ಲಿಯೇ, ‘ಪ್ರಧಾನಿಯಾಗಿ ಇದು ನನ್ನ ಕಡೆಯ ವರ್ಷ’ ಎಂದು ಪ್ರಕಟಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT