ಉಪನಿಷತ್ತುಗಳಲ್ಲಿ ಅತಿಪುಟ್ಟದಾದ ಈಶಾವಾಸ್ಯ ಉಪನಿಷತ್ತಿನಲ್ಲಿ `ಆತ್ಮಹತ್ಯೆ ಮಾಡಿಕೊಳ್ಳುವವರು ಗಾಡಾಂಧಕಾರದಿಂದ ಕೂಡಿದ ಅಸುರ್ಯ ಎಂಬ ಲೋಕಕ್ಕೆ ಹೋಗುತ್ತಾರೆ' ಎಂದು ಎಚ್ಚರಿಸಿದೆ.

ಸುಖ-ದುಃಖ , ಲಾಭ-ನಷ್ಟ, ಜಯ-ಸೋಲು ಇತ್ಯಾದಿ ದ್ವಂದ್ವಗಳು ಜೀವನದ ಅವಿಭಾಜ್ಯ ಅಂಗಗಳು, ಈ ದ್ವಂದ್ವಗಳಿದ್ದಾಗಲೇ ಜೀವನದಲ್ಲಿ ಅರ್ಥವಿರುತ್ತದೆ; ಸಾಹಸ, ಉದ್ಯಮ, ಹೊಸ ಆಲೋಚನೆ ಇತ್ಯಾದಿಗಳಿಗೆ ಇವುಗಳೇ ಮೂಲವಾಗಿರುತ್ತವೆ. ಇಂದು ಬಹಳಷ್ಟು ಮನುಷ್ಯರು ತನ್ನ ಎಚ್ಚರದ ಸ್ಥಿತಿಯಲ್ಲಿರುವುದನ್ನೇ ಸಮಗ್ರ ಜೀವನವೆಂದು ಭಾವಿಸಿ, ತನ್ನ ಸುಖವನ್ನು ಹೆಚ್ಚಿಸಿಕೊಳ್ಳಲು ಆಹಾರ, ಸಂಪತ್ತು, ಅಂತಸ್ತು, ಅಧಿಕಾರ ಇತ್ಯಾದಿಗಳನ್ನು ಗಳಿಸಲು ಪ್ರತಿ ಕ್ಷಣದಲ್ಲೂ ಪ್ರಯತ್ನಿಸುತ್ತಾ ಇಂದ್ರಿಯಭೋಗಗಳಿಗೆ ಬಲಿಬಿದ್ದು ತನ್ನ ಗೋರಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ.

ಭಾರತೀಯರ ಜೀವನದ ಪುರುಷಾರ್ಥಗಳು (ಗುರಿ) ಎಂದರೆ ಧರ್ಮ, ಅರ್ಥ, ಕಾಮ-ಮೋಕ್ಷ. ಎಲ್ಲಕ್ಕೂ ಸಮಾನ ಪ್ರಾಶಸ್ತ್ಯವಿದೆ. ಆದರೆ ಅರ್ಥ-ಕಾಮಗಳೆಂಬ ಪುರುಷಾರ್ಥಗಳಿಗೆ ಅವಕಾಶವಿದೆ. ಆದರೆ ಅವು ಸ್ವೇಚ್ಛೆಯಿಂದ ಇರಬಾರದು. ಅವುಗಳು ಧರ್ಮ-ಮೋಕ್ಷಗಳ ನಡುವೆ ಇರಬೇಕು. ಇಂದು ಈ ತತ್ತ್ವವನ್ನು ಮರೆತಿರುವ ಪರಿಣಾಮವಾಗಿ ಸ್ವಚ್ಛಂದ ಪ್ರವೃತ್ತಿ ಹೆಚ್ಚಿದೆ. ತಾನು ಯಾರಿಗೂ ಬಾಗಬೇಕಿಲ್ಲ; ಯಾರ ಮಾತನ್ನೂ ಕೇಳಬೇಕಿಲ್ಲ ಎಂಬ ಭಾವನೆ ಕ್ರಮವಾಗಿ ಬೇರುಬಿಡುತ್ತಿದೆ.

ಇಂತಹ ಆಧುನಿಕ ಜೀವನದ ಕಹಿಹಣ್ಣುಗಳಲ್ಲಿ ಆತ್ಮಹತ್ಯೆಯೂ ಒಂದು. ಇಂದು ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಹಿಳೆಯರ ಹಾಗೂ ವಿದ್ಯಾರ್ಥಿಜೀವನದಲ್ಲಿರುವ ತರುಣರ ಆತ್ಮಹತ್ಯೆಯ ಪ್ರಮಾಣವು ಹೆಚ್ಚಾಗಿದೆ. ಸಮೀಕ್ಷೆಯೊಂದರಂತೆ ಆತ್ಮಹತ್ಯೆ ಮಾಡಿಕೊಳ್ಳುವ 100 ಜನರ ಪೈಕಿ ಶೇ. 36 ರಷ್ಟು ಜನ 15ರಿಂದ 25 ವರ್ಷ ವಯೋಮಾನದವರು ಎಂಬುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಏನನ್ನು ಬೇಕಾದರೂ ಸಾಧಿಸಬಲ್ಲೆ; ಕಲ್ಲನ್ನು ತಿಂದು ಅರಗಿಸಿಕೊಳ್ಳಬಲ್ಲೆ ಎಂದು ಹೇಳಿಕೊಳ್ಳುವ ಈ ವಯಸ್ಸಿನವರು ಜೀನವದಲ್ಲಿ ಸೋಲುವುದು ಏಕೆ? ದಿಢೀರಾಗಿ ಸಾವಿನ ಮನೆಯ ಕದವನ್ನು ತಟ್ಟಲು ಕಾರಣವೇನು? ಎಂದು ಈಗ ಸಮಾಜನಿಷ್ಠ ಜನರು ಬಹಳವಾಗಿ ಚಿಂತಿಸುತ್ತಿದ್ದಾರೆ.

ಆತ್ಮಹತ್ಯೆಯನ್ನು ತಡೆದು ಪರಿಹಾರದ ಬಾಗಿಲುಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ತೆರೆಯಬೇಕಾದ ತುರ್ತು ಅವಶ್ಯಕತೆಯಿದೆ.
ಆತ್ಮಹತ್ಯೆ ಎಂಬುದು ಒಂದು ಮನಸ್ಥಿತಿ. ಭಯದಿಂದ ಆತಂಕಗೊಂಡು, ದುಃಖದಿಂದ ಖಿನ್ನವಾದ; ಕೋಪದಿಂದ ವ್ಯಗ್ರವಾದ ಮನಸ್ಸು ಎಲ್ಲ ನಿಷೇಧಚಿಂತನೆಗಳ ಬೇಗುದಿಯಲ್ಲಿ ಸಿಲುಕಿ, ಹೇಳಿಕೊಳ್ಳಲು ಆಗದೆ, ಅನುಭವಿಸಲೂ ಆಗದೆ ಒದ್ದಾಡುತ್ತಾ, ತನ್ನನ್ನು ತಾನೇ ಶಿಕ್ಷಿಸಿಕೊಳ್ಳುವ ಮೂಲಕ ತನ್ನ ವಿರುದ್ಧದ ವ್ಯಕ್ತಿಗೆ, ಘಟನೆಗೆ ಪರಿಸ್ಥಿತಿಗೆ ಸೇಡು ತೀರಿಸಿಕೊಳ್ಳುವ ಒಂದು ದುಡುಕಿನ ಕ್ರಮದಂತೆ ವ್ಯಕ್ತಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಇಂದಿನ ವಿದ್ಯಾಕ್ಷೇತ್ರದಲ್ಲಿ
1) ನಮ್ಮ ನೇರಕ್ಕೇ ಎಲ್ಲವೂ ನಡೆಯಬೇಕು; ನಾವಂದುಕೊಂಡಂತೆಯೇ ನಡೆಯಬೇಕೆಂಬ ಪೋಷಕರ ಅಹಂಕಾರದ, ಅಂತಸ್ತಿನ ಹಾಹಾಕಾರ.

2)ಮಕ್ಕಳನ್ನು ಭಾವನಾಜೀವಿ ಮನುಷ್ಯರನ್ನಾಗಿ ಭಾವಿಸದೆ ಭವಿಷ್ಯದ ಎಫ್.ಡಿ.ಬಾಂಡ್ಗಳಂತೆ ಗ್ರಹಿಸುತ್ತಿರುವುದು. ಹಣವನ್ನು ಅವರ ಮೇಲೆ ಬಂಡವಾಳದಂತೆ ಹೂಡಿ, ಕ್ರಮೇಣ ಅಪಾರ ಲಾಭಾಂಶಕ್ಕಾಗಿ ನಿರೀಕ್ಷೆಯಿಡುವ ಕಾರ್ಪೊರೇಟ್ ಜಗತ್ತಿನ ಕುತ್ಸಿತ ಮಾನಸಿಕತೆಯು ಕುಟುಂಬವನ್ನು ಪ್ರವೇಶಿಸಿರುವುದು. ಮಕ್ಕಳ ಪರಿಪೂರ್ಣ ಬೆಳವಣಿಗೆಯ ಬಗ್ಗೆ ಓನಾಮವನ್ನೂ ತಿಳಿಯದಂತಹ ಸ್ಥಿತಿಯಲ್ಲಿ ಕುಟುಂಬಗಳ ನಾಗಾಲೋಟವಿದೆ.

3)ಬಾಲ್ಯದಿಂದಲೇ ಮಕ್ಕಳಲ್ಲಿ ಸ್ಪರ್ಧೆಯ ಕಿಚ್ಚನ್ನು ಹೊತ್ತಿಸಿ ಅವರ ಬಾಲ್ಯದ ಸ್ವಾರಸ್ಯವನ್ನು ಕಸಿದುಕೊಂಡಿರುವುದು. ಅವರಲ್ಲಿ ಸುಪ್ತವಾಗಿರುವ ಇಗೋ ಎಂಬುದನ್ನು ವಿಕಸನಗೊಳಿಸಿ ಮಹಾಮರವನ್ನಾಗಿಸಲು ಯತ್ನಿಸುತ್ತಿರುವುದು

4)ಕೂಡುಕುಟುಂಬಗಳು ಮಾಯವಾಗುತ್ತಿದ್ದು ಸಣ್ಣಕುಟುಂಬಗಳಲ್ಲಿ ಮಕ್ಕಳಿಗೆ ಭದ್ರತೆ ಕಡಿಮೆಯಾಗಿದೆ. ಸಂಬಂಧಗಳಲ್ಲಿ ನಾಟಕೀಯತೆ, ಅಪ್ರಾಮಾಣಿಕತೆ ತುಂಬಿ ತುಳುಕುತ್ತಿವೆ. ಇದರಿಂದಾಗಿ ದು:ಖದುಮ್ಮೋನ, ಸುಖಸಂತೋಷಗಳನ್ನು ಪರಸ್ಪರ ಹಂಚಿಕೊಳ್ಳುವುದು ದೂರದೂರವಾಗಿದೆ. ಮಕ್ಕಳ ಮೈಬಣ್ಣ, ಸೌಂದರ್ಯ, ಭಾಷೆ, ಅಂಕಪಟ್ಟಿ ಮನೆಯ ಆದಾಯ ಇತ್ಯಾದಿಗಳನ್ನು ನೆರೆಯ ಮಕ್ಕಳ ಜೊತೆ, ಸಂಬಂಧಿಕರ ಜೊತೆ ಹೋಲಿಸಿ ನೋಡುವ ಪ್ರವೃತ್ತಿ; ಇದರ ಹಿನ್ನೆಲೆಯಲ್ಲಿ ಮಕ್ಕಳನ್ನು ನಿಂದಿಸುವ, ಅಪಮಾನಿಸುವ, ವಿವಿಧ ರೀತಿಯಲ್ಲಿ ಶಿಕ್ಷಿಸುವುದು ಹೆಚ್ಚಾಗಿದೆ.

5)ಇಂದು ಶಿಕ್ಷಣವೆಂಬುದು ಸ್ವಾಮಿ ವಿವೇಕಾನಂದರು ಹೇಳಿದಂತೆ ಮನಸ್ಸನ್ನು ವಿಕಾಸಗೊಳಿಸುವಂತಿಲ್ಲ; ಅದು ಕೇವಲ ಒಂದಿಷ್ಟು ಒಣಮಾಹಿತಿಗಳನ್ನು ತುಂಬಿಕೊಳ್ಳುವಷ್ಟರ ಮಟ್ಟಿಗೆ ಶುಷ್ಕವಾಗಿದೆ. ಅದು ಮಗುವಿನ ಅಂತರಂಗದಲ್ಲಿ ಹುದುಗಿರುವ ಪರಿಪೂರ್ಣತೆಯನ್ನು ಅಥವಾ ದಿವ್ಯತೆಯನ್ನು ಹೊರತರುವ ಕ್ರಿಯೆಯಾಗಿಲ್ಲ. ಮಕ್ಕಳು ಇಂದು `ಮಾಹಿತಿಗಳ ಖಜಾನೆ' ಯಾಗುತ್ತಿದ್ದಾರೆ. ಭಾವನೆ, ವಿವೇಕ ಇತ್ಯಾದಿಗಳ ಸಂವೇದನಾಶೀಲತೆ ದೂರ ಉಳಿದಿದೆ.

6)ಭಾಷೆ, ವೇಷ, ಊಟ, ಉಪಚಾರ, ಶಿಕ್ಷಣ, ಸಂಸ್ಕೃತಿ ಎಲ್ಲದರಲ್ಲೂ ನಮ್ಮ ವಿದ್ಯಾರ್ಥಿಗಳು ಪಾಶ್ಚಾತ್ಯದ ಅಗ್ಗದ ನಕಲುಗಳಾಗುತ್ತಿದ್ದಾರೆ. ತನ್ನ ಮನೆ, ಭಾಷೆ, ಪೂರ್ವಿಕರು, ಹಳ್ಳಿ, ದೇಶ ಸಂಸ್ಕೃತಿಯ ಬಗ್ಗೆ ತಾಳುತ್ತಿರುವ ಕೀಳರಿಮೆಯೂ ಆತ್ಮವಿಶ್ವಾಸವನ್ನು ಧ್ವಂಸಮಾಡುತ್ತಿದೆ. ಮಗುವು ತನ್ನ ನೆಲದ ಸಾಹಿತ್ಯ, ಪರಂಪರೆ ಇತ್ಯಾದಿಗಳಿಂದ ದೂರವಾಗುತ್ತಿರುವುದರಿಂದ ಬಾಲ್ಯದಿಂದಲೇ ಒಂದು ವಿಧವಾದ ಅನಾಥಪ್ರಜ್ಞೆಯ ಭಾವನೆ ಮೂಡುತ್ತಿದೆ.

7)ಐದಾರು ತಾಸುಗಳ ಕಾಲ ಮಕ್ಕಳ ಜೊತೆಯಿರುವ ಗುರುಗಳಲ್ಲಿ ಇಂದು ಗುರುತ್ವ ಕಡಿಮೆಯಾಗಿದೆ. ನಿರಂತರ ಸ್ಫೂರ್ತಿ, ಪ್ರೇರಣೆ ನೀಡಿ, ಜೀವನೋತ್ಸಾಹವನ್ನು ಚಿಮ್ಮಿಸಬಲ್ಲವನನ್ನು `ಗುರು' ಎನ್ನುತ್ತಾರೆ. ಇಂದು ಶಿಕ್ಷಕರ ಉಪನ್ಯಾಸಕರ ಸಂಖ್ಯೆ ಹೆಚ್ಚಾಗಿದ್ದರೂ ಅವರ ಪೈಕಿ ಬಹಳಷ್ಟು ಮಂದಿ ಒಬ್ಬಟ್ಟಿನ ಕಣಕನ್ನೇ ಆಶ್ರಯಿಸಿದ್ದಾರೆ.

ಹೂರಣವನ್ನಲ್ಲ. ಎಂ.ಫಿಲ್., ಪಿಎಚ್.ಡಿ., ಎಂದರೆ ಮಾಸ್ಟರ್ ಆಫ್ ಫಿಲಾಸಫಿ, ಡಾಕ್ಟರ್ ಆಫ್ ಫಿಲಾಸಫಿ, ಅಂದರೆ ಉನ್ನತವಾದ ಶಿಕ್ಷಣ ನಡೆದವರು ಫಿಲಾಸಫರ್-ದಾರ್ಶನಿಕನೂ ಆಗಿರಬೇಕು. ಅವನು ತಾನು ಸತ್ಯ ನೀತಿಯನ್ನು ಕಂಡು ಇತರರಿಗೂ ಅದನ್ನು ತೋರಿಸಬೇಕು ಎಂದರ್ಥ. ಆದರೆ ಇಂದು ಶಿಕ್ಷಣದಲ್ಲಿ ನೈತಿಕತೆ ವಿರಳವಾಗಿದೆ.

ವಿದ್ಯಾರ್ಥಿಗಳ ಮುಂದೆ ಮಾದರಿ ವ್ಯಕ್ತಿಗಳ ಕೊರತೆಯಿದೆ. ಪಠ್ಯಗಳಲ್ಲೂ ಮಾದರಿ ಮಹಾಪುರುಷರ ಬಗ್ಗೆ ತಿಳಿಯಲು ಅವಕಾಶ ಕಡಿಮೆಯಾಗಿದೆ. ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಂತಾಗಿವೆ. ಶಿಕ್ಷಕನು ಕಾರ್ಮಿಕನ ಪಾತ್ರ ವಹಿಸಿದ್ದಾನೆ. ವಿದ್ಯಾರ್ಥಿಗಳನ್ನು ಅಧಿಕ ಸಂಬಳ ಪಡೆಯಲು ಯೋಗ್ಯವಾಗುವಂತೆ ತಯಾರಿಸಬೇಕಾದದ್ದೇ ಶಾಲಾ-ಕಾಲೇಜುಗಳ ಗುರಿಯಾಗಿದೆ.

8) ಇಂದಿನ ವಿದ್ಯಾರ್ಥಿಗಳ ಮನಸ್ಸು ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕಾರಣಗಳಿಂದ ತಳಮಳಗೊಳ್ಳುತ್ತಿಲ್ಲ. ಬದಲಿಗೆ ಕಾಮವನ್ನು ವಿಕೃತವಾಗಿ ಬಿಂಬಿಸುವ ಅಶ್ಲೀಲ ಚಿತ್ರಗಳು, ಅಂತರ್ಜಾಲ, ಮೊಬೈಲ್ ಮೊದಲಾದ ಅನೇಕ ಮಾಧ್ಯಮಗಳಿಗೆ ದಾಸರಾಗಿದ್ದಾರೆ.

ಶಿಶುವಿಹಾರ, ಪ್ರಾಥಮಿಕ ಶಾಲೆಗಳ ಹಂತದಲ್ಲೇ ಸಿನಿಮಾ ಹಾಡುಗಳಿಗೆ ವಿಚಿತ್ರ ಕುಣಿತಗಳಿಂದ ಹಿಡಿದು ಮುಂದೆ ಸೌಂದರ್ಯ ಸ್ವರ್ಧೆಯವರೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಆಂತರಿಕ ಸೌಂದರ್ಯದ ಬಗ್ಗೆ ಚಿಂತೆಯೇ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳ ಮನಸ್ಸು ಏಕಾಗ್ರತೆಯಿಂದ ಬಲವಾಗುವ ಬದಲು ಅವರಲ್ಲಿ ಪಾಪಪ್ರಜ್ಞೆ ಏಕಾಂಗಿತನ ಉಂಟಾಗಿ, ವಿಕೃತಗಳ ಆನಂದದಲ್ಲಿ ಅವರು ದುರ್ಬಲರಾಗುತ್ತಿದ್ದಾರೆ.

9)ಶಿಕ್ಷಣವು ಖಾಸಗೀಕರಣ ಹಾಗೂ ವಾಣಿಜ್ಯೀಕರಣಕ್ಕೆ ಬಲಿಯಾಗಿದೆ. ಶಿಕ್ಷಣ ಕೇಂದ್ರಗಳು ಅಂಕಗಳಿಕೆಯ ಸ್ವರ್ಧೆಗಿಳಿದಿವೆ. ಪೋಷಕರ ತಾಳಕ್ಕೆ ಕುಣಿಯುವ ಪಾತ್ರಧಾರಿಗಳಾಗಿವೆ. ಇಂದು ಶಿಕ್ಷಕರು ಇಬ್ಬದಿ ಒತ್ತಡಕ್ಕೆ ಸಿಲುಕಿದ್ದಾರೆ. ಒಂದು ಕಡೆ ಪೋಷಕರಿಂದ ಇನ್ನೊಂದು ಕಡೆ ಶಿಕ್ಷಣ ಸಂಸ್ಥೆಗಳಿಂದ, ಆ ಒತ್ತಡವನ್ನು ಅವರು ಸಹಜವಾಗಿ ವಿದ್ಯಾರ್ಥಿಗಳ ಮೇಲೆ ವರ್ಗಾಯಿಸುತ್ತಿದ್ದಾರೆ.

10) ಮಕ್ಕಳಲ್ಲಿನ ಮುಗ್ಧತೆಯು ಬಹಳ ಬೇಗ ಮಾಯ ವಾಗುತ್ತಿದೆ. ನಮ್ಮ ಟಿ.ವಿ. ಇಂಟರೆನೆಟ್ ಗಳು, ಕಡಿಮೆ ಒಂದೋ, ಎರಡೋ ಮಕ್ಕಳಿರುವುದು, ಮೊದಲಿಗಿಂತಲೂ ಸೌಕರ್ಯಗಳು ಹೆಚ್ಚಾಗಿರುವುದು ಪೋಷಕರು ನೀಡುವ ಅತಿಯಾದ ಪ್ರೀತಿ, ಸಲುಗೆ, ಬಯಸಿದ್ದನೆಲ್ಲ, ಪೂರೈಸುವುದು ಇತ್ಯಾದಿ. ಇದರಿಂದಾಗಿ ಮಕ್ಕಳು ಎಳೇ ವಯಸ್ಸಿನಲ್ಲಿ ಪ್ರೌಢರ ಮನಸ್ಥಿತಿಯನ್ನು ಹೊಂದುತ್ತಾರೆ. ಅನೇಕ ಮಂದಿ ತಮ್ಮ 20-25ನೇ ವಯಸ್ಸಿನಲ್ಲೆೀ ಜೀವನದಲ್ಲಿ ಕಾಣಬೇಕಾದದ್ದು, ಅನುಭವಿಸಬೇಕಾದದ್ದು ಏನೂ ಇಲ್ಲವೆಂದು ಜುಗುಪ್ಸಿತರಾಗಿದ್ದಾರೆ.

11)ಎಲ್ಲೆಡೆ ಇಂದು ಐ.ಕ್ಯೂ ಆಧರಿಸಿ ವಿದ್ಯಾರ್ಥಿಗಳನ್ನು ಅಳೆಯಲಾಗುತ್ತಿದೆ. ಇದು ಅವರಿಗೆ ನಾವು ಮಾಡುವ ಅಪಚಾರ. ಐ.ಕ್ಯೂ ಜೊತೆಗೆ ಇ.ಕ್ಯೂ (ಭಾವನಾತ್ಮಕ ಅಂಶ) ಎಸ್.ಕ್ಯೂ (ಆಧ್ಯಾತ್ಮಿಕ ಅಂಶ) ಸಂಪೂರ್ಣವಾಗಿ ಮರೆತಿದ್ದೇವೆ. ಹೀಗಾಗಿ ರ್ಯಾಂಕ್ ಪಡೆದ ವಿದ್ಯಾರ್ಥಿಯು ಮನೆಗೆ ಬಂದ ಬಂಧುಗಳನ್ನು ಮಾತನಾಡಿಸುವ, ಉಪಚರಿಸುವ ವಿಧಿಯನ್ನೇ ಕಲಿತಿಲ್ಲ. ಮುಂದೆ ತಂದೆ-ತಾಯಿ ಜೊತೆಯಲ್ಲೂ ಹೊಂದಿಕೊಳ್ಳದ ಮಾನಸಿಕತೆ ತಲುಪಬಹುದು. ಭಾವನೆಗಳ ಕೊರತೆ ಆತ್ಮಹತ್ಯೆಗೆ ಕಾರಣವಾಗುತ್ತದೆ.

ಇಂತಹ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರವೆಂದರೆ
-ಪೋಷಕರು ವ್ಯಾಪಾರಿಗಳಲ್ಲ; ಅವರು ತಮ್ಮ ಕರುಳಿನ ಬಳ್ಳಿಗಳಾದ ಮಕ್ಕಳನ್ನು ಬೆಸೆಯುವ ನೆಲಮುಗಿಲುಗಳಾಗಬೇಕು.
-ಮಗು ಬಯಸಿದಂತಾಗಲು ಸಹಕಾರಿಗಳಾಗಬೇಕು
-ಕಷ್ಟಗಳನ್ನು ಎದುರಿಸುವ ಛಲವನ್ನು ಕಲಿಸಬೇಕು. ಶ್ರಮಜೀವನ ಕಷ್ಟಸಹಿಷ್ಣುತೆ, ಪರೋಪಕಾರ ಇತ್ಯಾದಿಗಳು ಜೀವನದ ಆಧಾರಸ್ತಂಭವೆಂಬುದನ್ನು ಕಲಿಸಬೇಕು.
-ಶಿಕ್ಷಣದ ಗುರಿ ಕೇವಲ ಉದರಪೋಷಣೆಯಲ್ಲ; ಇದರಿಂದ ಮಾನವೀಯತೆಯ ಅನಾವರಣವಾಗಬೇಕು
-ಶಿಕ್ಷಕರು ಮಾಹಿತಿಯ ವಕ್ತಾರ ಯಂತ್ರಗಳಲ್ಲ; ಹೃದಯಸಂವಾದದ ಗಾರುಡಿಗರಾಗಬೇಕು.
-ಚಲನಚಿತ್ರ, ಅಂತರ್ಜಾಲ, ಸಾಂಸ್ಕೃತಿಕ(?) ಕಾರ್ಯಕ್ರಮಗಳಲ್ಲಿ `ವಿಕೃತಿ' ಉಂಟು ಮಾಡುತ್ತಿರುವುದನ್ನು ಅಪರಾಧವೆಂದು ಸಾರಬೇಕು. ಇಂತಹ ಅಪರಾಧಿಗಳನ್ನು ಶಿಕ್ಷಿಸಬೇಕು. ನಿಜವಾದ ನೆಲದ ಜನಪದ ಸಂಸ್ಕೃತಿಗೆ ಆದ್ಯತೆ ಲಭಿಸಬೇಕು.
-ಮಕ್ಕಳಿಗೆ ಮೇಲೇರುವುದನ್ನು ಮಾತ್ರ ಹೇಳಿಕೊಡದೆ ಕೆಳಗಿರುವವರ ಬಗ್ಗೆಯೂ ತಿಳಿಸಿಕೊಡಬೇಕು. ಅವರನ್ನು ಮೇಲೆತ್ತಲು ನಾವು ಬದುಕಬೇಕೆಂಬ ಧ್ಯೇಯವನ್ನು ಮೂಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.