ಪ್ಯಾರಿಸ್: ವಿಶ್ವ ಚಾಂಪಿಯನ್ ದೀಪ್ತಿ ಜೀವಾಂಜಿ ಅವರು ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ 400 ಮೀಟರ್ ಓಟದ ಟಿ20 ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಭಾರತದ 21 ವರ್ಷ ವಯಸ್ಸಿನ ದೀಪ್ತಿ, ಮಂಗಳವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ 55.82 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಉಕ್ರೇನ್‌ನ ಯುಲಿಯಾ ಶುಲಿಯಾರ್ (55.16 ಸೆಕೆಂಡ್) ಮತ್ತು ವಿಶ್ವದಾಖಲೆ ಹೊಂದಿರುವ ಟರ್ಕಿಯ ಐಸೆಲ್ ಒಂಡರ್ (55.23) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಜಯಿಸಿದರು.

ತೆಲಂಗಾಣದ ವಾರಂಗಲ್ ಜಿಲ್ಲೆಯ ಕಲ್ಲೆಡಾ ಗ್ರಾಮದ ಕೂಲಿ ಕಾರ್ಮಿಕ ಕುಟುಂಬದ ದೀಪ್ತಿ, ಏಷ್ಯನ್ ಪ್ಯಾರಾ ಕ್ರೀಡಾಕೂಟದ 400 ಮೀಟರ್ ಓಟದಲ್ಲೂ ಚಿನ್ನ ಗೆದ್ದಿದ್ದರು.

ಟಿ20 ವಿಭಾಗದಲ್ಲಿ ಬೌದ್ಧಿಕ ದುರ್ಬಲತೆ ಹೊಂದಿರುವ ಅಥ್ಲೀಟ್‌ಗಳು ಸ್ಪರ್ಧಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.