ಕೊಹಿಮಾ: ನಾಗಲ್ಯಾಂಡ್‌ನ ಝಕೋವೊ ಕಣಿವೆಯಲ್ಲಿ ಸಂಭವಿಸಿರುವ ಕಾಡ್ಗಿಚ್ಚನ್ನು ಭಾರತೀಯ ವಾಯು ಪಡೆಯ ಹೆಲಿಕಾಫ್ಟರ್, ಪೊಲೀಸ್, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸ್ವಯಂಸೇವಕರ ಸಹಾಯದಿಂದ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪ್ರವಾಸಿಗರ ತಾಣವಾದ ಝಕೋವೊ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಲು ವಾಯುಪಡೆಯ ಹೆಲಿಕಾಫ್ಟರ್ ಬಳಸಲಾಗಿದೆ ಎಂದು ನಾಗಾಲ್ಯಾಂಡ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರಿಷ್ಠ ಅಧಿಕಾರಿ ಜಾನಿ ರೌಂಗ್ಮೈ ಅವರು ಮಾಹಿತಿ ನೀಡಿದ್ದಾರೆ.

ಕೊಹಿಮಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ,ದಕ್ಷಿಣ ಅಂಗಮಿ ಯುವ ಸಂಸ್ಥೆಯ ಕಾರ್ಯಕರ್ತರ ಸಹಾಯದಿಂದ ನ್ಯಾಗಲ್ಯಾಂಡ್‌ನಲ್ಲಿ ಹಬ್ಬಿದ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ ಈ ಕಾಡ್ಗಿಚ್ಚು ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಹಬ್ಬಿದ್ದು, ಅದನ್ನು ನಂದಿಸುವ ಕಾರ್ಯ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

‘ಐಎಎಫ್ ಮಿಗ್ -17 ವಿ 5 ಹೆಲಿಕಾಫ್ಟರ್‌ನ ಸಹಾಯದಿಂದ ಕೊಹಿಮಾ ಬಳಿಯ ಝಕೋವೊ ಕಣಿವೆಯಲ್ಲಿ ಬೆಂಕಿ ನಂದಿಸಲಾಗಿದೆ’ ಎಂದು ಲೆಫ್ಟಿನೆಂಟ್ ಕರ್ನಲ್ ಸುಮಿತ್. ಕೆ ಶರ್ಮಾ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.