ಲಖನೌ: ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘ ಚಲನಚಿತ್ರದ ವಿರುದ್ಧ ಹಿಂದೂ ಸಂಘಟನೆಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಆಮೀರ್ ಖಾನ್ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶದಲ್ಲಿ ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ:ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಮರ್ಶೆ: ದೊಡ್ಡ ಕಾಲಕ್ಷೇಪ, ಮನುಷ್ಯತ್ವದ ಓಟ

‘ಸನಾತನ ರಕ್ಷಕ ಸೇನೆ’ಯ ಸದಸ್ಯರು ಸಿನಿಮಾದ ವಿರುದ್ಧ ಘೋಷಣೆಗಳನ್ನು ಕೂಗಿದರು. ಭೇಲುಪುರದ ಐಪಿ ವಿಜಯ ಮಾಲ್ ಎದುರು ಪ್ರತಿಭಟನೆ ನಡೆಸಿದರು.

‘ತಮ್ಮ ಚಲನಚಿತ್ರಗಳಲ್ಲಿ ಆಮೀರ್ ಖಾನ್ ಹಿಂದೂ ದೇವತೆಗಳನ್ನು ಗೇಲಿ ಮಾಡುತ್ತಾರೆ ಮತ್ತು ಅವರು ಸನಾತನ ಧರ್ಮಕ್ಕೆ ವಿರುದ್ಧವಾಗಿದ್ದಾರೆ’ ಎಂದು ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಚಂದ್ರಪ್ರಕಾಶ್ ಸಿಂಗ್ ಮತ್ತು ಅದರ ಉಪಾಧ್ಯಕ್ಷ ಅರುಣ್ ಪಾಂಡೆ ಆರೋಪಿಸಿದ್ದಾರೆ.

‘ನಾವೆಲ್ಲರೂ ಸನಾತನಿಗಳು, ನಮ್ಮ ದೇಶದಲ್ಲಿ ಆಮೀರ್ ಚಲನಚಿತ್ರಗಳು ಪ್ರದರ್ಶನವಾಗಲು ಬಿಡುವುದಿಲ್ಲ’ ಎಂದು ಅವರು ಹೇಳಿದರು.

‘ಆಮೀರ್ ಖಾನ್ ಅವರ ಚಿತ್ರಗಳನ್ನು ಬಹಿಷ್ಕರಿಸುವಂತೆ ನಾವು ಮನೆ ಮನೆಗೆ ತೆರಳಿ ಜನರನ್ನು ವಿನಂತಿಸುತ್ತೇವೆ. ಚಲನಚಿತ್ರವನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿಯೂ ವಿನಂತಿಸುತ್ತೇವೆ’ ಎಂದು ಅವರು ಹೇಳಿದರು.

ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪ್ರಮುಖ ಭೂಮಿಕೆಯ ‘ಲಾಲ್ ಸಿಂಗ್ ಚಡ್ಡಾ‘ ಸಿನಿಮಾವು, ಹಾಲಿವುಡ್ ನಟ ಟಾಮ್ ಹಂಕ್ಸ್ ಅವರ 1994ರ ಚಿತ್ರ ‘ಫಾರೆಸ್ಟ್ ಗಂಪ್’ನಿಂದ ಪ್ರೇರಣೆ ಪಡೆದಿದೆ.

‘ಲಾಲ್ ಸಿಂಗ್ ಚಡ್ಡಾ’ಸಿನಿಮಾ ಘೋಷಣೆಯಾದಾಗಿನಿಂದಲೂ ಆಮೀರ್ ಖಾನ್ ಅವರ ಸಿನಿಮಾದ ವಿರುದ್ಧ ಹಲವು ಅಭಿಪ್ರಾಯಗಳು ಕೇಳಿಬಂದಿದ್ದವು. ಸಿನಿಮಾವನ್ನು ಬಹಿಷ್ಕರಿಸುವಂತೆ ಬಿಡುಗಡೆಗೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆದಿತ್ತು. ಅಭಿಯಾನಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಆಮೀರ್ ಖಾನ್ ‘ದಯವಿಟ್ಟು ಸಿನಿಮಾ ನೋಡಿ’ ಎಂದು ಪ್ರೇಕ್ಷಕರನ್ನು ವಿನಂತಿಸಿದ್ದರು. ಚಿತ್ರ ಬಿಡುಗಡೆಯ ನಂತರವೂ ಅದರ ಸುತ್ತ ಪರ, ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ.

ಇವುಗಳನ್ನೂ ಓದಿ

ಲಾಲ್ ಸಿಂಗ್ ಚಡ್ಡಾ Twitter Review: ಅಮೀರ್ ನಟನೆಗೆ ಬಹುಪರಾಕ್ ಎಂದ ಪ್ರೇಕ್ಷಕರು

ದಯವಿಟ್ಟು ನನ್ನ ಚಿತ್ರ ನೋಡಿ: 'ಲಾಲ್ ಸಿಂಗ್ ಚಡ್ಡಾ’ ಬಹಿಷ್ಕಾರಕ್ಕೆ ಅಮೀರ್ ಅಳಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.