ಕೊಚ್ಚಿ: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯ ಪ್ರಚಾರ ಪೋಸ್ಟರ್‌ನಲ್ಲಿ ವಿ.ಡಿ. ಸಾವರ್ಕರ್ ಫೋಟೊ ಕಾಣಿಸಿಕೊಂಡಿರುವುದು ವರದಿಯಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರಕ್ಕೀಡಾಗಿದ್ದು, ವಿರೋಧ ಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಕೇರಳದ ಕೊಚ್ಚಿಯ ಆಲುವಾದಲ್ಲಿ ಭಾರತ್ ಜೋಡೊ ಯಾತ್ರೆ ಪ್ರಚಾರಕ್ಕೆಂದು ಹಾಕಲಾದ ಸ್ವಾತಂತ್ರ್ಯ ಹೋರಾಟಗಾರರ ಬೃಹತ್ ಪೋಸ್ಟರ್‌ಗಳಲ್ಲಿ ಸಾವರ್ಕರ್ ಚಿತ್ರವೂ ಕಾಣಿಸಿಕೊಂಡಿದೆ.

ಇದನ್ನೂ ಓದಿ:ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮಧುಸೂದನ್ ಮಿಸ್ತ್ರಿ ಭೇಟಿಯಾದ ತರೂರ್

ಸಾವರ್ಕರ್ ಚಿತ್ರ ವೈರಲ್ ಆದ ಬೆನ್ನಲ್ಲೇ, ಕಾಂಗ್ರೆಸ್ ಬೆಂಬಲಿಗರು ಪೋಸ್ಟರ್ ಮೇಲೆ ಮಹಾತ್ಮ ಗಾಂಧಿ ಚಿತ್ರವನ್ನು ಅಂಟಿಸಿದ್ದಾರೆ. ಈ ಸಂಬಂಧ ವಿಡಿಯೊ ಹರಿದಾಡುತ್ತಿದೆ.

ಏತನ್ಮಧ್ಯೆ ಪ್ರಿಂಟಿಂಗ್ ವೇಳೆ ಆಗಿರುವ ಪ್ರಮಾದ ಇದಾಗಿದೆ ಎಂದು ಕಾಂಗ್ರೆಸ್ ಸ್ಥಳೀಯ ನಾಯಕರು ಸಮಜಾಯಿಷಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.