ಕಾಬೂಲ್: ಅಫ್ಗಾನಿಸ್ತಾನದಲ್ಲಿ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುತ್ತಾ, ಪ್ರಬಲವಾಗುತ್ತಿರುವ ತಾಲಿಬಾನ್ ತನ್ನ ಸಂಘಟನೆಯ ಉಗ್ರರನ್ನು ವಿವಾಹವಾಗುವಂತೆ ಮಹಿಳೆಯರನ್ನು ಪೀಡಿಸಲಾರಂಭಿಸಿದೆ ಎಂದು ಶುಕ್ರವಾರ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ:15 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು, ವಿಧವೆಯರ ಪಟ್ಟಿ ಕೇಳಿದ ತಾಲಿಬಾನ್!

ತಾಲಿಬಾನಿಗಳು ಪ್ರಬಲವಾಗುತ್ತಿರುವ ಹಿನ್ನೆಲೆಯಲ್ಲಿ ಅಫ್ಗನ್ನರು ಕಾಬೂಲ್ ಕಡೆಗೆ ಓಡುತ್ತಿದ್ದಾರೆ. ತಾಲಿಬಾನ್ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ನಾಗರಿಕರ ಮೇಲೆ ಅಪ್ರಚೋದಿತ ದಾಳಿ ನಡೆಯುತ್ತಿದೆ. ಸೆರೆಹಿಡಿದ ಸೈನಿಕರರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಗುತ್ತಿದೆ. ಈ ಮಧ್ಯೆ, ತಾಲಿಬಾನ್ ಸಂಘಟನೆಯು ತನ್ನ ಸದಸ್ಯರನ್ನು ಮದುವೆಯಾಗುವಂತೆ ಅವಿವಾಹಿತ ಸ್ತ್ರೀಯರನ್ನು ಒತ್ತಾಯಿಸುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮಹಿಳೆಯರ ಮೇಲೆ ಜನನಾಂಗ ಛೇದನದ ಅಮಾನವೀಯ ಸಂಪ್ರದಾಯ ಹೇರಿದ್ದ ಬಾಗ್ದಾದಿ

ಇದು ಲೈಂಗಿಕ ದೌರ್ಜನ್ಯದ ಮತ್ತೊಂದು ರೂಪ ಎಂದು ಮಾನವ ಹಕ್ಕು ಸಂಘಟನೆಗಳು ಹೇಳಿರುವುದಾಗಿ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ತಾಲಿಬಾನ್ ಹೋರಾಟಗಾರರನ್ನು ಮದುವೆಯಾಗಲು 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಮತ್ತು 45 ವರ್ಷದೊಳಗಿನ ವಿಧವೆಯರ ಪಟ್ಟಿಯನ್ನು ಒದಗಿಸಬೇಕು ಎಂದು ಸ್ಥಳೀಯ ಇಮಾಮ್ ಮತ್ತು ಮುಲ್ಲಾಗಳಿಗೆ ಆದೇಶಿಸಿದ ಪತ್ರವೊಂದು ತಿಂಗಳ ಹಿಂದಷ್ಟೇ ಅಫ್ಗಾನಿಸ್ತಾನದಲ್ಲಿ ವೈರಲ್ ಅಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.