ಬೆಂಗಳೂರು: 16ನೇ ವಿಧಾನಸಭೆಗೆ ಕರ್ನಾಟಕದಲ್ಲಿ ಮೇ 10ರಂದು ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆ ಘೋಷಣೆಗೂ ಮೊದಲೇ ಚುನಾವಣಾ ಆಯೋಗವು ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರಾರಂಭಿಸಿದೆ. ಮತದಾನ ಮಾಡುವುದು ಹೇಗೆ? ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಹೇಗೆ? ಮುಂತಾದವುಗಳ ಬಗ್ಗೆ ಚುನಾವಣಾ ಆಯೋಗ ಜಾಗೃತಿ ಮೂಡಿಸುತ್ತಿದೆ.

ಈಗ ಎಲ್ಲಾ ಸೇವೆಗಳು ಆನ್‌ಲೈನ್ ಮೂಲಕವೇ ಲಭ್ಯವಿದ್ದು, ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ? ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

1. ಐಡಿಕಾರ್ಡ್ ವಿಧಾನ (EPIC Method)

ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇದ್ದರೆ, ಎಪಿಕ್ ಸಂಖ್ಯೆ (EPIC - Electoral Photo ID Card) ಆ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಅಕ್ಷರಸಂಖ್ಯಾಯುಕ್ತ ಸಂಖ್ಯೆ ಇದಾಗಿದ್ದು, https://electoralsearch.in ಗೆ ಭೇಟಿ ನೀಡಿ, ಅಲ್ಲಿ Search by EPIC No. ಆಯ್ಕೆ ಮಾಡಿ. ಬಳಿಕ ಅಲ್ಲಿ ಕೇಳಲಾಗುವ ಮಾಹಿತಿಯನ್ನು ತುಂಬಿ, ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂದು ಪರಿಶೀಲಿಸಬಹುದು.

2. ಸಾಮಾನ್ಯ ಮಾಹಿತಿ ವಿಧಾನ

ಒಂದು ವೇಳೆ ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಅಥವಾ ಎಪಿಕ್ ಸಂಖ್ಯೆ ಇಲ್ಲದೇ ಇದ್ದರೆ, https://electoralsearch.in ಗೆ ಭೇಟಿ ನೀಡಿ. ಬಳಿಕ ‘Search by Details‘ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ಕೇಳಲಾಗುವ ಮಾಹಿತಿಯನ್ನು ತುಂಬಿ, ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ, ಇಲ್ಲವೇ ಎಂದು ತಿಳಿದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.