ಚಳಿಗಾಲ ಬಂತೆಂದರೆ ಚರ್ಮದ ಸಮಸ್ಯೆಗಳು ದ್ವಿಗುಣಗೊಳ್ಳುತ್ತವೆ. ಒಣ ಚರ್ಮ ಹೊಂದಿರುವವರಿಗಂತೂ ಚಳಿಗಾಲ ಎನ್ನುವುದೊಂದು ಸವಾಲಿನ ಕಾಲವೆಂದೇ ಹೇಳಬಹುದು. ಯಾವ ಕ್ರೀಂ, ಎಂಥ ಲೋಷನ್ ಹಚ್ಚಿದರೂ ತೀರದ ಸಮಸ್ಯೆಗೆ ಮನೆಯಲ್ಲಿಯೇ ಇರುವ ನೈಸರ್ಗಿಕ ತೈಲಗಳಿಂದ ಪರಿಹಾರ ಕಂಡು ಕೊಳ್ಳಬಹುದು...

ಚಳಿಗಾಲ ಆರಂಭವಾಗುತ್ತಿದ್ದಂತೆ ಚರ್ಮದ ಮೇಲೆ ಒಣ ಚುಕ್ಕೆಗಳು ಕಾಣಲು ಆರಂಭವಾಗಬಹುದು. ಚರ್ಮ ಬಿಗಿಯಾಗಿ ನವೆ ಮತ್ತು ತುರಿಕೆಯ ಅನುಭವವನ್ನು ಉಂಟು ಮಾಡಬಹುದು. ಕ್ರೀಂ ಮತ್ತು ಲೋಷನ್ ನಿಂದ ಚರ್ಮದ ತೇವಾಂಶವನ್ನು ಕಾಪಾಡುವುದು ಸಾಧ್ಯವಾಗಲಿಕ್ಕಿಲ್ಲ.

ಆದರೆ ಕೆಲವು ವಿಧದ ತೈಲಗಳು ಒಣಗಿದ, ಬಿರುಕು ಬಿಟ್ಟ ತ್ವಜೆಗೆ ಅಗತ್ಯವಿರುವ ತೇವಾಂಶ ಮತ್ತು ಪೋಷಣೆಯನ್ನು ನೀಡುವ ಮೂಲಕ ಅತ್ಯುತ್ತಮ ಆರೈಕೆ ನೀಡಬಲ್ಲವು ಎನ್ನುತ್ತಾರೆ ಚರ್ಮ ತಜ್ಞರು.

ಈ ತೈಲಗಳು ಕೇವಲ ಅಂಗಮರ್ಧನೆಗೆ ಮಾತ್ರ ಉಪಯುಕ್ತ ಎನ್ನುವುದು ಅನೇಕರ ನಂಬಿಕೆ. ಆದರೆ, ಇವು ಚರ್ಮದ ಅನೇಕ ಸಮಸ್ಯೆಗಳನ್ನು ಶಮನಗೊಳಿಸಲು ಸಹಾಯ ಮಾಡುವುತ್ತವೆ. ಚರ್ಮದ ಪೋಷಣೆಗೆ ಅಗತ್ಯವಿರುವ ಮೇದಾಮ್ಲಗಳ (acid)ಗಳನ್ನು ಹೊಂದಿರುವ ತೈಲಗಳು, ಚರ್ಮವನ್ನು ಮೃದುಗೊಳಿಸುವ ಮೂಲಕ ಬಿಗಿತ, ತುರಿಕೆ, ನವೆ ಸೇರಿದಂತೆ ಅನೇಕ ಬಗೆಯ ತೊಂದರೆಗಳನ್ನು ನಿವಾರಿಸುವಲ್ಲಿಯೂ ನಿರ್ಣಾಯಕ ಪಾತ್ರ ವಹಿಸುತ್ತವೆ.

‘ನಿಮ್ಮ ಚರ್ಮಕ್ಕೆ ಸೂಕ್ತವಾಗುವ ತೈಲವನ್ನು ಜಾಗೃತಿಯಿಂದ ಆಯ್ಕೆ ಮಾಡಿಕೊಂಡರೆ ನಿಮ್ಮ ಚಳಿಗಾಲದ ಅನೇಕ ಸಮಸ್ಯೆಗಳು ಒಂದೇ ಏಟಿಗೆ ನಿವಾರಣೆಯಾಗುತ್ತವೆ. ಅಲ್ಲದೇ ತೈಲಗಳಲ್ಲಿ ಯಾವುದೇ ಅಡ್ಡಪರಿಣಾಮದ ಸಾಧ್ಯತೆಯೂ ಇರುವುದಿಲ್ಲ’ ಎನ್ನುತ್ತಾರೆ ಗ್ರೀನ್ ಟ್ರೆಂಡ್ಸ್ ಸಲೂನ್‌ನ ರೋಜರ್.

‘ಒಣ ಚರ್ಮದವರು ಚಳಿಗಾಲದಲ್ಲಿ ಹೆಚ್ಚು ದಪ್ಪ ಅಥವಾ ಜಿಡ್ಡಿನ ಅಂಶವಿರುವ ತೈಲಗಳನ್ನು ಆರಿಸಬೇಕು. ಅಂದರೆ ದಪ್ಪ ಆರ್ಧ್ರಕ ಗುಣಗಳಿರುವ ತೈಲ ಒಣ ಚರ್ಮಕ್ಕೆ ಹೆಚ್ಚು ಸೂಕ್ತವಾಗಿರುತ್ತವೆ. ಬರೀ ತೈಲವನ್ನು ಬಳಸುವುದು ಜಿಡ್ಡಿನ ಅನುಭವ ನೀಡಿದರೆ, ಸ್ನಾನದ ನಂತರ ಒಂದು ಚಮಚ ಎಣ್ಣೆಯನ್ನು ಲೋಷನ್ ಜೊತೆ ಸೇರಿಸಿ ಹಚ್ಚಿಕೊಳ್ಳಬಹುದು’ ಎನ್ನುವುದು ಅವರ ಸಲಹೆ.

ಇನ್ನು, ಎಣ್ಣೆಯುಕ್ತ ಚರ್ಮದವರು ಸ್ನಾನಕ್ಕೂ ಮುಂಚೆ ಕನಿಷ್ಠ ಅರ್ಧ ಗಂಟೆ ಮೊದಲು ಲಘುವಾದ ತೈಲವನ್ನು ಹಚ್ಚಿಕೊಂಡು ನಂತರ ಉಗುರು ಬಿಸಿ ನೀರಿನಿಂದ ಸ್ನಾನ ಮಾಡುವುದು ಉತ್ತಮ.

ಸಾಮಾನ್ಯ ಚರ್ಮದವರು ತಮ್ಮ ಚರ್ಮವನ್ನು ಆಳವಾಗಿ ತಲುಪಿ ತೇವಾಂಶ ಒದಗಿಸುವಂತಹ ತೈಲವನ್ನು ಆಯ್ಕೆ ಮಾಡಬೇಕು.
ಆದರೆ ಸೂಕ್ಷ್ಮ ಚರ್ಮ ಹೊಂದಿರುವವರು ತೈಲವನ್ನು ಉಪಯೋಗಿಸದೇ ಇರುವುದೇ ಒಳ್ಳೆಯದು ಎನ್ನುತ್ತಾರೆ ಚರ್ಮ ತಜ್ಞರು. ಆದಾಗ್ಯೂ ನಿಮಗೆ ತೈಲಮರ್ಧನ ಬೇಕು ಎನಿಸಿದರೆ ಯಾವುದೇ ರೀತಿಯ ಸುಗಂಧ ಅಂಶ ಹೊಂದಿರದ ತೈಲವನ್ನು ಆಯ್ಕೆ ಮಾಡುವುದು ಉತ್ತಮ.

ಯಾವ ಪ್ರಕಾರದ ಚರ್ಮ ಹೊಂದಿರುವವರಿಗೆ ಯಾವ ಬಗೆಯ ತೈಲ ಉಪಯುಕ್ತ ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
ಎಳ್ಳೆಣ್ಣೆ: ಒಣ ಚರ್ಮದವರಿಗೆ ಎಳ್ಳೆಣ್ಣೆ ಉಪಯುಕ್ತ.

ಬಾದಾಮಿ ತೈಲ: ಸಾಮಾನ್ಯ ಚರ್ಮದವರು ಸಿಹಿ ಬಾದಾಮಿ ತೈಲವನ್ನು ಬಳಸುವುದು ಸೂಕ್ತ. ಇದು D ಜೀವಸತ್ವ ಹೊಂದಿದ್ದು, ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಆದರೆ ಅಲರ್ಜಿ ಇರುವವರು ಇದನ್ನು ಬಳಸುವುದು ಬೇಡ. ದ್ರಾಕ್ಷಿ ಬೀಜದ ಎಣ್ಣೆ: ಇದು ಬಾದಾಮಿ ಎಣ್ಣೆಗೆ ಅತ್ಯುತ್ತಮ ಪರ್ಯಾಯ. ವಿಟಮಿನ್ ಇ ಅಂಶವನ್ನು ಹೊಂದಿದ್ದು, ಪೋಷಣೆಯನ್ನು ಒದಗಿಸುವ ಮೂಲಕ ಚರ್ಮವನ್ನು ಆರೋಗ್ಯಕರವಾಗಿಡುತ್ತದೆ.

ಸೋಯಾ ಎಣ್ಣೆ: ಇದು ಚರ್ಮದ ತೇವಾಂಶವನ್ನು ಕಾಪಾಡುವ ಜೊತೆಗೆ ಮೃದುವಾದ ಮತ್ತು ದೀರ್ಘಕಾಲದ ಹೊಳಪನ್ನು ನೀಡುತ್ತದೆ.
ಗೋಧಿ ಮೊಳಕೆಯ ತೈಲ: ಇದು ಭಾರೀ ದಪ್ಪ ಎಣ್ಣೆಯಾಗಿರುವ ಕಾರಣ ಸಾಮಾನ್ಯವಾಗಿ ಲಘು ತೈಲಗಳ ಜೊತೆ ಬೆರೆಸಿ ಬಳಸಿದರೆ ಉತ್ತಮ. ಇದು ಸಹ ವಿಟಮಿನ್ ಇ ಅಂಶವನ್ನು ಹೊಂದಿದ್ದು, ಮೊಡವೆ ಮತ್ತು ಕಲೆಗಳಿಗೆ ಅದ್ಭುತ ಚಿಕಿತ್ಸೆಯಾಗಿದೆ. ಇದನ್ನು ಎಣ್ಣೆ ಚರ್ಮದವರು ಬಳಸಬಹುದು.

ಬಿಸಿ ಎಣ್ಣೆಯ ಮಸಾಜ್
ಚಳಿಗಾಲದ ಎಂದರೆ ಅದು ಚರ್ಮ ಸಮಸ್ಯೆಗಳ ಆಗರ ಎಂದೇ ಹೇಳಬಹುದು. ಬಿರುಕು, ತುರಿಕೆ, ನವೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ತಂಪು ಹವಾಮಾನ ರಕ್ತ ಪರಿಚಲನೆಯ ಮೇಲೂ ಪರಿಣಾಮ ಬೀರುತ್ತದೆ. ರಕ್ತವಾಹಿನಿಗಳ ವ್ಯಾಪಕತೆಯಿಂದಾಗಿ ಚರ್ಮ ಹಾನಿಗೊಳಗಾಗುತ್ತದೆ.

ಯಾವ ಲೋಷನ್, ಎಂಥ ಸೋಪು ಉಪಯುಕ್ತ ಎಂಬ ಬಗೆಗಷ್ಟೇ ಆಲೋಚಿಸಿದರೆ ಸಾಕಾಗುವುದಿಲ್ಲ. ಅದರ ಜೊತೆಗೆ ಇನ್ನೂ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ:

ಚಳಿಗಾಲದಲ್ಲಿ ಬಾಯಾರಿಕೆ ಆಗುವುದು ಕಡಿಮೆ. ಹಾಗೆಂದು ನೀರು ಕುಡಿಯುವುದನ್ನು ಕಡಿಮೆ ಮಾಡಬಾರದು. ಒಳಗಿನಿಂದಲೇ ಚರ್ಮ ತೇವಾಂಶ ಹೊಂದಬೇಕು ಎಂದರೆ ಯಥೇಚ್ಛವಾಗಿ ನೀರು ಕುಡಿಯಬೇಕು. ಸಾಕಷ್ಟು ತರಕಾರಿ, ಹಣ್ಣು ಸೇವಿಸಬೇಕು.

ಚಳಿಗಾಲ ಬರುತ್ತಿದ್ದಂತೆ ಸ್ನಾನಕ್ಕೆ ಅತಿಯಾದ ಬಿಸಿ ನೀರು ಹಿತವೆನಿಸುತ್ತದೆ. ಆದರೆ ಚರ್ಮದ ಆರೋಗ್ಯಕ್ಕೆ ಉಗುರು ಬಿಸಿ ನೀರು ಸಾಕು. ಶುಷ್ಕತೆ ಒದಗಿಸದ ಸೌಮ್ಯವಾದ ಸೋಪ್ ಉತ್ತಮ. ತೈಲ ಆಧಾರಿತ ಮಾಶ್ಚರೈಸರ್ ಅಥವಾ ಲೋಷನ್ ಬಳಸಿ. ಇದೆಲ್ಲಕ್ಕಿಂತ ಮಹತ್ವದ ಆಯ್ಕೆ ಎಂದರೆ ಬಿಸಿ ಎಣ್ಣೆ ಸ್ನಾನ. ತಲೆ, ಕೂದಲು ಹಾಗೂ ಮೈಗೆ ಹಿತವಾದ ಬೆಚ್ಚಗಿನ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಅತ್ಯುತ್ತಮ ಮಾರ್ಗ. ಒಣ ಚರ್ಮದವರಿಗೆ ಕೊಬ್ಬರಿ ಎಣ್ಣೆಯ ಮಸಾಜ್ ತುಂಬಾ ಒಳ್ಳೆಯದು. ಬೇಕಿದ್ದರೆ ಸ್ಪಾ ಅಥವಾ ಸಲೂನ್‌ನ ಸೇವೆಯ ಸಹಾಯ ಪಡೆಯಬಹುದು.
–ರೋಜರ್ ಪೆಟರ್, ಗ್ರೀನ್ ಟ್ರೆಂಡ್ಸ್ ಟ್ರೇನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.