ಮನಬಂದಂತೆ ದಿರಿಸು ಧರಿಸುವುದು, ಇಷ್ಟ ಬಂದ ಕಡೆಗೆ ಓಡಾಡುವುದು ಇಷ್ಟೇ ಸ್ವಾತಂತ್ರ್ಯವೇ? ಇದರ ಹೊರತಾಗಿಯೂ ಹುಡುಗಿಯರಿಗೆ ಸಾಕಷ್ಟು ನಿರೀಕ್ಷೆಗಳಿಲ್ಲವೆ? ಬದುಕಿನ ಎಲ್ಲಾ ಘಟ್ಟಗಳಲ್ಲಿಯೂ ಆಯ್ಕೆ ಸ್ವಾತಂತ್ರ್ಯ ಬೇಕು ಎಂದು ಬಯಸುತ್ತಿದ್ದಾರೆ ಹೆಣ್ಣುಮಕ್ಕಳು. ಉದ್ಯೋಗ, ಕಾಲೇಜು, ಹವ್ಯಾಸ, ಸಂಗಾತಿಯ ಆಯ್ಕೆ ಇದೆಲ್ಲದರಲ್ಲಿಯೂ ತನ್ನ ಪಾಲಿನ ಸ್ವಾತಂತ್ರವನ್ನು ಕೇಳುತ್ತಿರುವ ಹುಡುಗಿಯರ ಪ್ರಕಾರ ಸ್ವಾತಂತ್ರ್ಯ ಎಂದರೆ ಇನ್ನೂ ಏನೇನೊ ಇದೆ. ಸ್ವಾತಂತ್ರ್ಯಕ್ಕೆ ಅವರು ನೀಡುವ ವ್ಯಾಖ್ಯಾನ ಏನು, ಬನ್ನಿ ಅರಿಯೋಣ...

ನಮ್ಮಿಷ್ಟದಂತೆ ಬದುಕಲು ಬಿಡಿ
ನಮ್ಮ ಆಯ್ಕೆಯ ಪ್ರತಿ ವಿಷಯದಲ್ಲಿಯೂ ಮೂಗು ತೂರಿಸಬಾರದು. ನಮ್ಮ ಜೀವನವನ್ನು ನಮ್ಮಿಷ್ಟದ್ದಂತೆ ಬದುಕಲು ಬಿಡಬೇಕು. ಉದ್ಯೋಗ ಮಾಡಲು ಅಡ್ಡಗಾಲು ಹಾಕಬಾರದು. ನಾನು ಓದಿದ ಕಾಲೇಜಿನಲ್ಲಿ ಹುಡುಗರಿಗೆ ಕ್ಯಾಂಪಸ್, ಲೈಬ್ರರಿಗೆ ಎಷ್ಟು ಹೊತ್ತಿಗಾದರೂ ಹೊಗಬಹುದಿತ್ತು. ಆದರೆ ಹುಡುಗಿಯರು ಏಳು ಗಂಟೆಯ ನಂತರ ಹೋಗುವಂತಿರಲಿಲ್ಲ. ಈ ರೀತಿಯ ತಾರತಮ್ಯಕ್ಕೆ ಕಡಿವಾಣಗಳಿದ್ದರೆ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ದೊರಕುವುದಿಲ್ಲ.
ದೀಪ್ತಿ, ಜಾಲಹಳ್ಳಿ

ನಮ್ಮತನ ಉಳಿಸಿಕೊಳ್ಳುವುದೇ ಸ್ವಾತಂತ್ರ್ಯ
ಸ್ವಾತಂತ್ರ್ಯ ಎಂದರೆ ನಮ್ಮತನ. ನಮ್ಮತನವನ್ನು ನಾವು ಉಳಿಸಿಕೊಂಡು ಹೋಗಲು ಸಾಧ್ಯವಾದರೆ ಆಗ ಸ್ವಾತಂತ್ಯ ಸಿಕ್ಕ ಹಾಗೆ. ಮಹಿಳೆಗೆ ಸ್ವಾತಂತ್ರ್ಯ ಬೇಕು ನಿಜ. ಆದರೆ ಅದು ಸ್ವೇಚ್ಛಾಚಾರಕ್ಕೆ ದಾರಿ ಮಾಡಿಕೊಡಬಾರದು. ಇಂದು ಮಹಿಳೆಯು ತನ್ನತನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ. ಒಂಟಿಯಾಗಿ ಹಗಲಿನಲ್ಲೂ ಓಡಾಡಲು ಕಷ್ಟಪಡುವಂತಹ ಪರಿಸ್ಥಿತಿ ಇದೆ. ಸಾವಿರ ಕಾನೂನು ಬಂದರು ಮನೋಭಾವ ಬದಲಾಗದಿದ್ದರೆ ಹೆಣ್ಣಿನ ಸ್ವಾತಂತ್ರ್ಯಕ್ಕೆ ದಕ್ಕೆ ಉಂಟಾಗುವುದು ಖಂಡಿತ.
ಸುಷ್ಮಾ ಜೆ.ಪಿ, ನಗರ ನಿವಾಸಿ.

ನಾನು ಸ್ವತಂತ್ರಳು
ನನ್ನ ಪ್ರಕಾರ ಹುಡುಗಿಯರಿಗೆ ಮುಖ್ಯವಾಗಿ ಬೇಕಿರುವುದು ಶಿಕ್ಷಣ. ಈ ವಿಷಯದಲ್ಲಿ ನಾನು ಅದೃಷ್ಟವಂತೆ. ನಾನು ಎಷ್ಟು ಓದುತ್ತೇನೆ ಎಂದರೂ ಮನೆಯಲ್ಲಿ ನಿಯಂತ್ರಣ ಹೇರುವುದಿಲ್ಲ. ಮನೆಯವರು ಹೇಳಿದ ಉಡುಪನ್ನು ನಾವು ಧರಿಸಬೇಕು ಎಂಬ ಕಡಿವಾಣ ಹಾಕಬಾರದು. ಹುಡುಗರಿಗೆ ಯಾವುದೇ ನಿಯಂತ್ರಣ ಇಲ್ಲವೆಂದ ಮೇಲೆ ನಮಗ್ಯಾಕೆ ಈ ಕಟ್ಟುಪಾಡು. ಗಂಡು, ಹೆಣ್ಣು ಎಂಬ ಭೇದ ಇಲ್ಲದೇ ಇಬ್ಬರಿಗೂ ಸಮಾನ ಅವಕಾಶ ನೀಡಬೇಕು. ಹುಡುಗಿಯರಿಗೆ ಅರ್ಹತೆ ಇದೆ ಎಂದಾಗ ಪ್ರೋತ್ಸಾಹ ನೀಡಬೇಕು. ನಾನು ಕೊಚ್ಚಿನ್‌ನಲ್ಲಿ ಉದ್ಯೋಗದಲ್ಲಿದ್ದೆ. ನಮ್ಮ ಮನೆಯಲ್ಲಿ ಉದ್ಯೋಗಕ್ಕೆಂದರೆ ಎಲ್ಲಿಗೆ ಬೇಕಾದರೂ ಕಳುಹಿಸುತ್ತಾರೆ. ನಾನಂತೂ ಸಂಪೂರ್ಣ ಸ್ವತಂತ್ರಳು.
– ಶ್ವೇತಾ

ಪ್ರಶ್ನೆಗಳನ್ನು ಕಡಿಮೆ ಮಾಡಿ
ಉದ್ಯೋಗ, ಉಡುಪು ಯಾವುದರ ಮೇಲೂ ಹುಡುಗಿಯರಿಗೆ ನಿಯಂತ್ರಣ ಇರಬಾರದು. ಹುಡುಗಿಯರು ಮಾಡುವ ಪ್ರತಿ ಕೆಲಸಕ್ಕೂ ಪ್ರಶ್ನೆ ಕೇಳುವುದನ್ನು ಕಡಿಮೆ ಮಾಡಬೇಕು. ಹೀಗೆ ಪ್ರಶ್ನೆಗಳ ಸರಮಾಲೆ ಹಾಕುವುದರಿಂದ ಕೆಲಸ ಮಾಡಲು ಮನಸಾಗುವುದಿಲ್ಲ. ಆತ್ಮಸ್ಥೈರ್ಯ ಕಡಿಮೆ ಮಾಡುವುದರಿಂದ ನಾವೇನು ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ, ಜವಾಬ್ದಾರಿಯನ್ನು ಹೇರುವುದು ಕಡಿಮೆಯಾದಾಗ ಮಹಿಳೆ ತನ್ನಿಷ್ಟದ್ದಂತೆ ಬದುಕುವುದು ಸಾಧ್ಯವಾಗುತ್ತದೆ.
– ಛಾಯಾ

ಛಾಯಾ

ಗೌರವ ನೀಡಿ
ಗುಡಿಸುವುದು, ಅಡುಗೆ ಮಾಡುವುದು, ಮುಸುರೆ ತಿಕ್ಕುವುದು ಹೆಣ್ಣು ಮಕ್ಕಳ ಕೆಲಸ ಎಂದು ಅವರನ್ನು ಮನೆಯೊಳಗೆ ಸೀಮಿತಗೊಳಿಸುವುದು ಸೂಕ್ತವಲ್ಲ. ಉದ್ಯೋಗಂ ಪುರುಷ ಲಕ್ಷಣಂ ಎಂದು ಗಂಡಸರನ್ನು ಕೆಲಸಕ್ಕೆ ಕಳುಹಿಸಿ ಅವರು ಸಮಾಜದಲ್ಲಿ ಉನ್ನತಿಯನ್ನು ಕಾಣುವುದರಲ್ಲಿ ಸಂತೃಪ್ತಿ ಕಾಣುವ ಹಾಗೆ ಮಹಿಳೆಗೂ ಮನಸ್ಸಿದೆ ಅರ್ಥ ಮಾಡಿಕೊಳ್ಳಬೇಕು. ಪುರುಷನಿಗೆ ಸಮನಾಗಿ ನಿಲ್ಲುವಂತೆ ಸಮಾಜದಲ್ಲಿ ಆಕೆಗೂ ಗೌರವ ಸಿಗುವಂತೆ ನೋಡಿಕೊಳ್ಳಬೇಕು.
ಶೃತಿ, ಮಲ್ಲೇಶ್ವರ

ಶಿಕ್ಷಣ ಮುಖ್ಯ
ನನಗೆ ಚಿಕ್ಕ ವಯಸ್ಸಿನಿಂದಲೂ ಸ್ವಾತಂತ್ರ್ಯ ಸಿಕ್ಕದೆ. ನಾನು ಅಂದುಕೊಂಡಂತೆ ಎಂಟೆಕ್ ಮುಗಿಸಿದ್ದೇನೆ. ನನ್ನ ಹಲವು ಸ್ನೇಹಿತರು ಉನ್ನತ ಶಿಕ್ಷಣ ಮಾಡಲಾಗದೆ ಮನೆಯಲ್ಲಿಯೇ ಉಳಿದರು. ಹುಡುಗಿಯರ ಮೇಲೆ ಹೀಗೆ ನಿಯಂತ್ರಣ ಹೇರಬಾರದು. ಮದುವೆ ಎಂಬ ಬಂಧನದಲ್ಲಿ ಕಟ್ಟಿಹಾಕಬಾರದು. ಶಿಕ್ಷಣ ತುಂಬಾ ಮುಖ್ಯ. ಆ ಹಕ್ಕನ್ನು ಅವರಿಗೆ ನೀಡಲೇಬೇಕು.
ದಿವ್ಯಾ, ಜೆ.ಪಿ.ನಗರ

ದಿವ್ಯಾ

ಇಷ್ಟದಂತೆ ಬದುಕಿ
ನಮ್ಮಿಷ್ಟದಂತೆ ಬದುಕಲು ಬಿಡಬೇಕು. ಜೊತೆಗೆ ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಇಷ್ಟ ಬಂದ ಬಟ್ಟೆ ಧರಿಸುವುದು ಹಾಗೂ ಇಷ್ಟ ಬಂದ ಕಡೆಗೆ ಹೋಗಲು ಬಿಡಬೇಕು.
ಅಮೂಲ್ಯಾ

ಮನೆಯವರು ಹುಡುಗರ ಅಭಿಪ್ರಾಯವನ್ನು ಕೇಳುವುದೇ ಹೆಚ್ಚು. ನಮ್ಮ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು. ನೀನು ಹೆಣ್ಣು ನಿನಗೆ ಈ ಕೆಲಸ ಮಾಡಲು ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ತಲೆಯಲ್ಲಿ ತುಂಬಬಾರದು. ನಮ್ಮ ಬದುಕಿನ ನಿರ್ಣಯ ತೆಗೆದುಕೊಳ್ಳುವಾಗ ಅದಕ್ಕೆ ಅಡ್ಡಗಾಲು ಹಾಕಬಾರದು.
ದೀಪ್ತಿ, ಹೆಣ್ಣೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.