ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ಯಾಕ್ಟ್ ಚೆಕ್: ಟ್ರಂಪ್ ಕೊಲೆ ಯತ್ನ ನಡೆಸಿದವರ ಬಗ್ಗೆ ಸುಳ್ಳು ಸುದ್ದಿ

Published 14 ಜುಲೈ 2024, 18:50 IST
Last Updated 14 ಜುಲೈ 2024, 18:50 IST
ಅಕ್ಷರ ಗಾತ್ರ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಶನಿವಾರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಟ್ರಂಪ್ ಅವರ ಕಿವಿಗೆ ಗಾಯವಾಗಿದೆ. ಅದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಯತ್ನ ನಡೆಸಿದ್ದಾರೆ ಎನ್ನಲಾದ ಮಾರ್ಕ್ ವೈಲೆಟ್ಸ್ ಎನ್ನುವವರ ಚಿತ್ರ ಹರಿದಾಡುತ್ತಿದೆ. ‘ಅವರು ಕೊಲೆಗೂ ಮುಂಚೆ ಯೂ ಟ್ಯೂಬ್‌ನಲ್ಲಿ ವಿಡಿಯೊ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ, ಟ್ರಂಪ್‌ಗೆ ಗುಂಡು ಹಾರಿಸಿದ ನಂತರ ವೈಲೆಟ್ಸ್ ಅನ್ನು ಹತ್ಯೆ ಮಾಡಲಾಗಿದೆ’ ಎಂದು ಕೆಲವರು ಉಲ್ಲೇಖಿಸುತ್ತಿದ್ದಾರೆ. ಕೆಲವು ಮಾಧ್ಯಮಗಳೂ ವೈಲೆಟ್ಸ್ ಚಿತ್ರ ಬಳಸಿ ಈ ಸುದ್ದಿ ವರದಿ ಮಾಡಿವೆ. ಆದರೆ, ಇದು ಸುಳ್ಳು ಸುದ್ದಿ.

ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರ ಮತ್ತು ಅವರ ಹೆಸರನ್ನು ಬಳಸಿ ಹುಡುಕಾಟ ನಡೆಸಿದಾಗ, ಅವರು ಇಟಲಿಯ ಫುಟ್‌ಬಾಲ್ ವೀಕ್ಷಕ ವಿವರಣೆಗಾರ, ಪತ್ರಕರ್ತ ಮಾರ್ಕೊ ವಿಯೋಲಿ ಎನ್ನುವುದು ತಿಳಿದುಬಂತು. ಟ್ರಂಪ್ ಹತ್ಯಾ ಯತ್ನಕ್ಕೂ ವಿಯೋಲಿಗೂ ಸಂಬಂಧ ಇಲ್ಲ. ಈ ಬಗ್ಗೆ ವಿಯೋಲಿ ತನ್ನನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ತನ್ನನ್ನು ದ್ವೇಷಿಸುವವರ ಒಂದು ಗುಂಪು ಸುಳ್ಳು ಸುದ್ದಿ ಹಬ್ಬಲು ಕಾರಣವಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ನಡೆಸುತ್ತೇನೆ ಎಂದು ಪ್ರಕಟಿಸಿದ್ದಾರೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT