‘ದೇಶದಲ್ಲಿ ಮುಸ್ಲಿಮರು, ಕ್ರೈಸ್ತಧರ್ಮೀಯರು ಮತ್ತು ಬೌದ್ಧರು ಹಬ್ಬಗಳನ್ನು ಆಚರಿಸುವುದನ್ನು ಆಯಾ ಧರ್ಮದ ಗುರುಗಳು ನಿರ್ಧರಿಸುತ್ತಾರೆ. ಆದರೆ ಹಿಂದೂಗಳ ಹಬ್ಬವನ್ನು ನ್ಯಾಯಾಲಯಗಳು ನಿರ್ಧರಿಸುತ್ತವೆ. ಇದು ತಾರತಮ್ಯವಲ್ಲವೇ? ಇದಕ್ಕೆ ಕಾರಣವಾಗಿರುವ ಸಂವಿಧಾನದ25, 26, 27, 28, 29, 30 ಮತ್ತು 31ನೇ ವಿಧಿಗಳಿಗೆ ತಿದ್ದುಪಡಿ ತರಬೇಕು. ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.@RanjanGogoii ಮತ್ತು@SGBJP ಎಂಬ ಹ್ಯಾಂಡ್ಲರ್‌ಗಳಿಂದ ಈ ಟ್ವೀಟ್ ಮಾಡಲಾಗಿದೆ. ಎರಡೂ ಹ್ಯಾಂಡ್ಲರ್‌ಗಳಲ್ಲಿ ರಂಜನ್ ಗೊಗೊಯಿ ಅವರ ಹೆಸರು ಮತ್ತು ಚಿತ್ರವಿದೆ.

‘ಇದು ಸುಳ್ಳುಸುದ್ದಿ. ರಂಜನ್ ಗೊಗೊಯಿ ಅವರ ಹೆಸರಿನಲ್ಲಿ ಕಿಡಿಗೇಡಿಗಳು ಈ ಟ್ವೀಟ್ ಮಾಡಿದ್ದಾರೆ. ಇದೇ ವಿವರ ಇರುವ ಟ್ವೀಟ್ ಅನ್ನು 2020ರ ಮಾರ್ಚ್ 26ರಂದು ಪುಷ್ಪೇಂದ್ರ ಕುಲಶ್ರೇಷ್ಠ ಎಂಬುವವರು ಮಾಡಿದ್ದರು. ಅದರಲ್ಲಿದ್ದ ಪಠ್ಯವನ್ನೇ ಪೇಸ್ಟ್ ಮಾಡಿ@RanjanGogoii ಮತ್ತು @SGBJP ಹ್ಯಾಂಡ್ಲರ್‌ಗಳಲ್ಲಿ ಟ್ವೀಟ್ ಮಾಡಲಾಗಿದೆ.@RanjanGogoii ಎಂಬ ಹ್ಯಾಂಡ್ಲರ್‌ನ ಖಾತೆಯನ್ನು ಡಿಲೀಟ್ ಮಾಡಲಾಗಿದೆ.@SGBJP ಎಂಬ ಹ್ಯಾಂಡ್ಲರ್‌ನ ಅನ್ನು ಟ್ವಿಟರ್ ಸ್ಥಗತಿಗೊಳಿಸಿದೆ. ಟ್ವಿಟರ್‌ನ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಎರಡೂ ಖಾತೆಗಳು ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರದ್ದಲ್ಲ ಎಂಬುದು ದೃಢಪಟ್ಟಿದೆ. ಅವರ ಹೆಸರಿನಲ್ಲಿ ಕಿಡಿಗೇಡಿಗಳು ಈ ಟ್ವೀಟ್ ಮಾಡಿದ್ದಾರೆ’ ಎಂದು ದಿ ಲಾಜಿಕಲ್ ಇಂಡಿನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.