ಕೋಟ: ಶಿವರಾತ್ರಿ ಸಂದರ್ಭದಲ್ಲಿ ಶುಕ್ರವಾರ ‘ಶಿವ ಭಾರತ’ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ವಿದ್ಯುದಾಘಾತದಿಂದ 14 ಮಕ್ಕಳು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಹತ್ತರಿಂದ ಹದಿನಾರು ವರ್ಷ ವಯಸ್ಸಿನ ಮಕ್ಕಳು ಕುನ್ಹಾರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಮೆರವಣಿಗೆಯಲ್ಲಿ ಸಾಗುತ್ತಿದ್ದರು. 22 ಅಡಿ ಉದ್ದದ ಕಬ್ಬಿಣದ ಧ್ವಜಕಂಬವನ್ನು ಬಾಲಕನೊಬ್ಬ ಹಿಡಿದಿದ್ದ. ಆ ಧ್ವಜದ ಮೇಲ್ಭಾಗವು ಹೈ ಟೆನ್ಷನ್ ತಂತಿಗೆ ತಗುಲಿದ್ದೇ ವಿದ್ಯುದಾಘಾತವಾಯಿತು. ಆ ಬಾಲಕನಿಗೆ ಶೇ 100ರಷ್ಟು ಸುಟ್ಟಗಾಯಗಳಾಗಿವೆ. ಅವನನ್ನು ಪಾರು ಮಾಡಲು ಯತ್ನಿಸಿದ ಇನ್ನೊಬ್ಬ ಬಾಲಕನಿಗೆ ಶೇ 50ರಷ್ಟು ಸುಟ್ಟಗಾಯಗಳು ಉಂಟಾಗಿವೆ. ಉಳಿದ 12 ಮಕ್ಕಳಿಗೆ ಶೇ 50ಕ್ಕಿಂತ ಕಡಿಮೆ ಗಾಯಗಳಾಗಿವೆ ಎಂದು ಕೋಟದ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ತಿಳಿಸಿದರು.

ಗಾಯಗೊಂಡವರನ್ನೆಲ್ಲ ಎಂಬಿಎಸ್ ಆಸ್ಪತ್ರೆಗೆ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.